ಐಮ್ಯಾಕ್ಸ್​ 3ಡಿ ರೂಪದಲ್ಲಿ ಬರಲಿದೆ ‘ಭೋಲಾ’ ಟ್ರೇಲರ್​;

ಮಾರ್ಚ್​ 6ರಂದು ಮುಂಬೈನಲ್ಲಿ ಅದ್ದೂರಿ ಇವೆಂಟ್​ ಮಾಡಿ ‘ಭೋಲಾ’ ಟ್ರೇಲರ್ ಅನಾವರಣಗೊಳಿಸಲಾಗುವುದು. ಆ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ.ಅಜಯ್​ ದೇವಗನ್​ನಟಿಸಿದ್ದ 5 ಸಿನಿಮಾಗಳು 2022ರಲ್ಲಿ ತೆರೆ ಕಂಡಿದ್ದವು.

2023ರಲ್ಲಿ ಅವರ ನಟನೆಯ ಮೊದಲ ಸಿನಿಮಾಈಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್​ 30ರಂದು ಈ ಚಿತ್ರ ತೆರೆಕಾಣಲಿದೆ. ವಿಶೇಷ ಏನೆಂದರೆ ಈ ಸಿನಿಮಾ 3ಡಿಯಲ್ಲಿ ಮೂಡಿಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭೋಲಾ’ ಚಿತ್ರದ ಟ್ರೇಲರ್ಅನಾವರಣ ಆಗಲಿದೆ. ಐಮ್ಯಾಕ್ಸ್​ 3ಡಿ ರೂಪದಲ್ಲಿ ಟ್ರೇಲರ್​ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ರೀತಿ ಮಾಡುತ್ತಿರುವ ಮೊದಲ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಭೋಲಾ’ ಸಿನಿಮಾಪಾತ್ರವಾಗುತ್ತಿದೆ.

‘ಭೋಲಾ’ ಚಿತ್ರಕ್ಕೆ ಅಜಯ್​ ದೇವಗನ್​ ನಿರ್ದೇಶನ ಮಾಡಿದ್ದಾರೆ. ಮಾರ್ಚ್​ 6ರಂದು ಮುಂಬೈನಲ್ಲಿ ಅದ್ದೂರಿ ಇವೆಂಟ್​ ಮಾಡಿ ಟ್ರೇಲರ್ ಅನಾವರಣಗೊಳಿಸಲಾಗುವುದು. ಆ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ಐಮ್ಯಾಕ್ಸ್​ 3ಡಿ ರೂಪದಲ್ಲಿ ‘ಭೋಲಾ’ ಟ್ರೇಲರ್​ ಬಿತ್ತರ ಆಗಲಿದೆ.

ಮಾರ್ಚ್​ 8ರಂದು ರಣಬೀರ್​ ಕಪೂರ್​ ಮತ್ತು ಶ್ರದ್ಧಾ ಕಪೂರ್​ ನಟನೆಯ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾದ ಜೊತೆಯಲ್ಲಿ ‘ಭೋಲಾ’ ಚಿತ್ರದ ಟ್ರೇಲರ್​ ಕೂಡ ಬಿತ್ತರ ಆಗಲಿದೆ. ಅಂದಹಾಗೆ ಇದು ತಮಿಳಿನ ‘ಕೈದಿ’ ಸಿನಿಮಾದ ಹಿಂದಿ ರಿಮೇಕ್​. ಮೂಲ ಕಥೆಗೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅಜಯ್​ ದೇವಗನ್​ ನಿರ್ದೇಶನ ಮಾಡಿ​ದ್ದಾರೆ ಎನ್ನಲಾಗುತ್ತಿದೆ.

ಸದ್ಯಕ್ಕೆ ಬಾಲಿವುಡ್​ನಲ್ಲಿ ರಿಮೇಕ್​ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿವೆ. ‘ಅಲಾ ವೈಕುಂಠಪುರಮುಲೋ’ ಚಿತ್ರದ ರಿಮೇಕ್​ ಆಗಿ ಮೂಡಿಬಂದ ‘ಶೆಹಜಾದಾ’ ಚಿತ್ರ ಹೀನಾಯವಾಗಿ ಸೋತಿದೆ. ಮಲಯಾಳಂನ ‘ಡ್ರೈವಿಂಗ್​ ಲೈಸೆನ್ಸ್​’ ಸಿನಿಮಾವನ್ನು ಹಿಂದಿಯಲ್ಲಿ ‘ಸೆಲ್ಫೀ’ ಎಂದು ರಿಮೇಕ್​ ಮಾಡಲಾಯಿತು. ಅಕ್ಷಯ್​ಕುಮಾರ್​ ಮತ್ತು ಇಮ್ರಾಜ್​ ಹಷ್ಮಿ ನಟಿಸಿದ ಆ ಚಿತ್ರ ಕೂಡ ಸೋತಿತು. ‘ಭೋಲಾ’ ಕೂಡ ರಿಮೇಕ್​ ಸಿನಿಮಾ ಆದ್ದರಿಂದ ಅದರ ಬಾಕ್ಸ್​ ಆಫೀಸ್​ ಭವಿಷ್ಯದ ಬಗ್ಗೆ ಅನುಮಾನ ಮೂಡಿದೆ.

2022ರಲ್ಲಿ ಅಜಯ್​ ದೇವಗನ್​ ನಟನೆಯ ‘ದೃಶ್ಯಂ 2’ ಚಿತ್ರ ತೆರೆಕಂಡಿತ್ತು. ಅದು ಕೂಡ ರಿಮೇಕ್​ ಆಗಿದ್ದರೂ ಸಹ ಉತ್ತಮ ಕಮಾಯಿ ಮಾಡಿತು. ಈಗ ‘ಭೋಲಾ’ ಸಿನಿಮಾ 3ಡಿ ಅವತರಣಿಕೆಯಲ್ಲಿ ಬರುತ್ತಿರುವುದರಿಂದ ಜನರು ಇಷ್ಟಪಡಬಹುದು ಎಂಬ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಟಬು, ಸಂಜಯ್ ಮಿಶ್ರಾ, ಗಜರಾಜ್​ ರಾವ್​ ಮುಂತಾದವರು ನಟಿಸಿದ್ದಾರೆ. ಕನ್ನಡಿಗ ರವಿ ಬಸ್ರೂರು ಅವರು ‘ಭೋಲಾ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನಾವು ಜನರ ಭಾವನೆ ಕೆರಳಿಸುವ ಬದಲು ಅವರ ಬದುಕು ಕಟ್ಟಿಕೊಡಬೇಕಿದೆ.

Wed Mar 1 , 2023
ಬೆಂಗಳೂರು: ನಾವು ಜನರ ಭಾವನೆ ಕೆರಳಿಸುವ ಬದಲು ಅವರ ಬದುಕು ಕಟ್ಟಿಕೊಡಬೇಕಿದೆ. ಹೀಗಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಹಾಗೂ ಅಭಿವೃದ್ಧಿ ನಮ್ಮ ಮುಖ್ಯಘೋಷಣೆಯಾಗಿವೆ. ಈ ಐದು ಅಂಶಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ್ ತಿಳಿಸಿದರು. ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಪದಗ್ರಹಣ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಬಿಜೆಪಿ ಸರ್ಕಾರದ ವೈಫಲ್ಯಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡುತ್ತೇವೆ. ಜಿಲ್ಲಾ […]

Advertisement

Wordpress Social Share Plugin powered by Ultimatelysocial