ಅಂತ್ಯಗೊಂಡ ಆಪರೇಷನ್ ಮದರ್ ಟೈಗರ್: ನಾಪತ್ತೆಯಾದ ತಾಯಿ ಹುಲಿ!

92 ಗಂಟೆಗಳ ಪ್ರಯತ್ನ ವ್ಯರ್ಥವಾಗಿ ಕರುಳಿನ ಸಂಪರ್ಕ ಕಡಿತಗೊಂಡಿದೆ. ನಾಲ್ಕು ಹುಲಿ ಮರಿಗಳು ತಮ್ಮ ತಾಯಿಯನ್ನು ಶಾಶ್ವತವಾಗಿ ಕಳೆದುಕೊಂಡಿವೆ. ನಂದ್ಯಾಲ ಜಿಲ್ಲೆಯ ಪೆದ್ದಗುಮ್ಮದಾಪುರದಲ್ಲಿ ಆಪರೇಷನ್ ಮದರ್ ಟೈಗರ್ ಅಂತ್ಯಗೊಂಡಿದೆ.

ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಟಿ-108 ಹುಲಿ ಪತ್ತೆಯಾಗಿಲ್ಲ. ಇದರೊಂದಿಗೆ 4 ಹುಲಿ ಮರಿಗಳನ್ನು ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧವಾಗಿದ್ದಾರೆ. ಇಂದು ತಡರಾತ್ರಿ ತಿರುಪತಿ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು. 4 ದಿನಗಳ ಕಾಲ ಹುಡುಕಾಟ ನಡೆಸಿದರೂ ತಾಯಿ ಹುಲಿಯ ಕುರುಹು ಪತ್ತೆಯಾಗಿಲ್ಲ.

ತಾಯಿಯಿಂದ ಬೇರ್ಪಟ್ಟ ನಾಲ್ಕು ಹುಲಿ ಮರಿಗಳು ಗ್ರಾಮಕ್ಕೆ ಬಂದಿರುವ ಘಟನೆ ನಂದ್ಯಾಲ ಜಿಲ್ಲೆಯ ಕೊತ್ತಪಲ್ಲಿ ಮಂಡಲದ ಪೆದ್ದಗುಮ್ಮದಪುರಂ ಗ್ರಾಮದಲ್ಲಿ ನಡೆದಿದೆ. ಹುಲಿ ಮರಿಗಳನ್ನು ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದರು. ನಾಯಿಗಳು ಹುಲಿ ಮರಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುವ ಭಯದಿಂದ ಗ್ರಾಮಸ್ಥರು ಅವುಗಳನ್ನು ಒಂದು ಕೋಣೆಯಲ್ಲಿ ಸುರಕ್ಷಿತವಾಗಿಟ್ಟಿದ್ದರು. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಮರಿಗಳನ್ನು ಪರಿಶೀಲಿಸಿದರು. ಹುಲಿ ಮರಿಗಳೆಲ್ಲವೂ ಹೆಣ್ಣುಮರಿಗಳಾಗಿದ್ದು, ಒಂದೇ ಬಾರಿಗೆ ನಾಲ್ಕು ಹೆಣ್ಣು ಮರಿಗಳಿಗೆ ಜನ್ಮ ನೀಡುವುದು ಅಪರೂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಿಗಳನ್ನು ತಮ್ಮ ತಾಯಿ ಹುಲಿಯೊಂದಿಗೆ ಮತ್ತೆ ಸೇರಿಸಲು ಅಧಿಕಾರಿಗಳು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ, ಫಲ ಸಿಗಲಿಲ್ಲ. ತಾಯಿ ಹುಲಿ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟರೂ ನಿರಾಸೆ ಅನುಭವಿಸಿದರು.

50ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಹಾಗೂ ಒಟ್ಟು 300 ಸಿಬ್ಬಂದಿಯೊಂದಿಗೆ ಆಪರೇಷನ್ ಮದರ್ ಟೈಗರ್ ನಡೆಸಿದರು. ತಾಯಿ ಹುಲಿಯು ಅನ್ವೇಷಣೆಗಾಗಿ ವೈಜ್ಞಾನಿಕ ತಂತ್ರಗಳನ್ನು ಸಹ ಬಳಸಿದರು. 40 ಟ್ರ್ಯಾಪ್ ಕ್ಯಾಮೆರಾಗಳಿದ್ದರೂ ದೊಡ್ಡ ಹುಲಿಯ ಯಾವುದೇ ಕುರುಹು ಪತ್ತೆಯಾಗಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಾಯಕನ ವ್ಯಂಗ್ಯ..!

Fri Mar 10 , 2023
ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ ನಾಗಾಲ್ಯಾಂಡ್‌ ಬಿಜೆಪಿ ನಾಯಕ ತೆಮ್ಜೆನ್ ಇಮ್ನಾ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ಕೊಟ್ಟಿದ್ದ ವಿಚಾರವಾಗಿ ಇಮ್ನಾ ವಾಗ್ದಾಳಿ ನಡೆಸಿದ್ದಾರೆ. ಲಂಡನ್‌ನ ಚಾಟ್ಹಾಮ್ ಹೌಸ್ ಎದುರು ರಾಹುಲ್ ನಿಂತಿರುವ ಫೋಟೋವೊಂದನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. “ನೀವೇನು ನಂಬಿದ್ದೀರೋ ಅದಕ್ಕೆ ಬದ್ಧರಾಗಿರಿ, ಈ ವಿಚಾರದಲ್ಲಿ ನೀವು ಏಕಾಂಗಿಯಾದರೂ ಪರವಾಗಿಲ್ಲ,” ಎಂದು ಕಾಂಗ್ರೆಸ್ ಕ್ಯಾಪ್ಷನ್ ಕೊಟ್ಟಿದೆ. ಈ […]

Advertisement

Wordpress Social Share Plugin powered by Ultimatelysocial