ಶಿಡ್ಲಘಟ್ಟದಲ್ಲಿ ಭಾರಿ ಜನಸಾಗರ..!

ಸೀಕಲ್ ರಾಮಚಂದ್ರಗೌಡರ ನಾಮಪತ್ರಕ್ಕೆ 25000(ಇಪ್ಪತೈದು ಸಾವಿರ) ಜನರ ಭಾರಿ ಮೆರವಣಿಗೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಿಜೆಪಿಗೆ ಜನರ ಬೆಂಬಲ. ಶಿಡ್ಲಘಟ್ಟದ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರು ಇಂದು ತಮ್ಮ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆಗೂಡಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಗೋಪೂಜೆ ಮಾಡಿ, ವೀರಾಪುರದ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೇವಾಸೌಧಕ್ಕೆ ಆಗಮಿಸಿರು. ಸೇವಾಸೌಧದಿಂದ ತಾಲೂಕು ಕಚೇರಿವರೆಗೂ ಕಣ್ಣು ಹಾಯಿಸಿದಷ್ಟು ದೂರ ಜನವೋ ಜನ, ದಾರಿಯುದ್ದಕ್ಕೂ ಹಾರ ಹಾಕಿ, ಹೂಮಳೆಗರೆದು, ಜಯಘೋಷಗಳನ್ನು ಕೂಗಿ, ತಮಟೆ ಬಾರಿಸಿ, ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಾಯಕನ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.

ಕೋಲಾರದ ಸಂಸದರಾದ ಎಸ್ ಮುನಿಸ್ವಾಮಿ ಮತ್ತು ಸೀಕಲ್ ರಾಮಚಂದ್ರ ಗೌಡ, ಎಂ ರಾಜಣ್ಣ ಅವರಿಗೆ 50 ಅಡಿ ಗಾತ್ರದ ಭಾರಿ ಹೂವಿನಹಾರವನ್ನು ಹಾಕಿ ಸಂಭ್ರಮಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಕೇಸರಿ ಭಾವುಟ, ಶಾಲು, ಕಣ್ಣು ಹಾಯಿಸಿದಲ್ಲೆಲ್ಲ ಪಕ್ಷದ ಬಾವುಟ. ಶಿಡ್ಲಘಟ್ಟದಲ್ಲಿ ಈ ಬಾರಿ ಕಮಲ ಅರಳುವ ಬಲವಾದ ಸೂಚನೆ ನೀಡಿದೆ.

ಎಲ್ಲೆಲ್ಲಿಯೂ ಕಿಕ್ಕಿರಿದ ಜನಸ್ತೋಮ. ಜನರನ್ನು ಉದ್ದೇಶಿಸಿ ಎಸ್ ಮುನಿಸ್ವಾಮಿ ಅವರು ಮಾತನಾಡಿ ನೀವೆಲ್ಲ ಸೇರಿದ್ದು ಭಾರಿ ಸಂತಸ ತಂದಿದೆ. ರಾಜಣ್ಣನವರು ಮಾತನಾಡಿ ನನಗೆ ಆಶೀರ್ವಾದ ಮಾಡಿದಂತೆ ರಾಮಚಂದ್ರ ಗೌಡರಿಗೂ ಆಶೀರ್ವಾದ ಮಾಡಿ, ಮತ ನೀಡುವುದರ ಮೂಲಕ ಅವರನ್ನು, ಪಕ್ಷವನ್ನು ಗೆಲ್ಲಿಸಿ ಎಂದರು.

ಸೀಕಲ್ ಆನಂದಗೌಡರನ್ನು ಜನ ಭುಜದಮೇಲೆ ಹೊತ್ತುಕೊಂಡು, ಕುಣಿದು ಕುಪ್ಪಳಿಸಿರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಆನಂದಗೌಡರು ಎಲ್ಲರ ಜೊತೆಗೂಡಿ ಕುಣಿದು, ಆನಂದಿಸಿದರು.

ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಶಿಡ್ಲಘಟ್ಟ ರತ್ನ ಎಂದೇ ಖ್ಯಾತರಾದ ಆರ್ ಚಂದ್ರು ಅವರು ಭಾಗವಹಿಸಿದ್ದರು. ಜೊತೆಗೆ ಮುಖಂಡರಾದ ನಂದೀಶ್, ಸುರೇಂದ್ರಗೌಡ, ರಮೇಶ್ ಬಾಯರ್, ಕನಕ ಪ್ರಸಾದ್, ಗೋಪಾಲಣ್ಣ, ಮಹಿಳಾ ಮುಖಂಡರಾದ ನರ್ಮದಾ ರೆಡ್ಡಿ, ತ್ರಿವೇಣಿ, ಮಾಲತಿ ರಾಣಿ, ಮುನಿರತ್ನಮ್ಮ, ರತ್ನಮ್ಮ ಮತ್ತು ಅಶ್ವಿನಿ ಎಲ್ಲರು ತಮ್ಮ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಸೇರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಕಾಂಗ್ರೆಸ್ ಗೆ ಬೆಂಬಲ!

Thu Apr 20 , 2023
ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ, ದಲಿತ ಸಮುದಾಯಗಳ ಹಕ್ಕು ರಕ್ಷಣೆ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ 2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ […]

Advertisement

Wordpress Social Share Plugin powered by Ultimatelysocial