ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ…

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.

ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ 42 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ಗ್ರಾಹಕರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.ಮೊಬೈಲ್​​​ ಫೋನ್​ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ 20 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್​ ವೆಚ್ಚದ ರೂಪದಲ್ಲಿ 10 ಸಾವಿರ ರೂ. ನೀಡಬೇಕು ಎಂದು ಕೋರ್ಟ್​ ಹೇಳಿದೆ.ಗ್ರಾಹಕರು ಫ್ಲಿಪ್​ಕಾರ್ಟ್​ನಲ್ಲಿ ಮೊದಲೇ ಹಣ ನೀಡಿ ಮೊಬೈಲ್​ ಆರ್ಡರ್​ ಮಾಡಿದ್ದರು. ಆದರೆ ಮೊಬೈಲ್​ ಬಂದಿರಲಿಲ್ಲ. ಸಂಸ್ಥೆ ಸರಿಯಾಗಿ ರಿಸ್ಪಾನ್ಸ್​ ಮಾಡಿರಲಿಲ್ಲ. ಆದ್ದರಿಂದ ಅವರು ವೇದಿಕೆ ಮೊರೆ ಹೋಗಿದ್ದರು. ಹೀಗೆ ಮಾಡುವ ಮೂಲಕ ಫ್ಲಿಪ್​ಕಾರ್ಟ್ ಸೇವೆಯಲ್ಲಿ ನಿರ್ಲಕ್ಷ್ಯ ಎಸಗಿದ್ದಲ್ಲದೆ, ಅನೀತಿಯ ವ್ಯಾಪಾರ ಅಭ್ಯಾಸ ನಡೆಸಿದೆ ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಾರುಹಾಸನ್ ಚಲನಚಿತ್ರ ಮತ್ತು ಕಿರುತೆರೆಯ ನಟರಾಗಿ ಹೆಸರಾದವರು.

Thu Jan 5 , 2023
ಕನ್ನಡದಲ್ಲಿ ನಟಿಸಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಗಳಿಸಿದವರು. ಚಾರುಹಾಸನ್ 1931ರ ಜನವರಿ 5ರಂದು ತಮಿಳುನಾಡಿನ ಪರಮಕುಡಿ ಎಂಬಲ್ಲಿ ಜನಿಸಿದರು. ಇವರ ತಂದೆ ಡಿ. ಶ್ರೀನಿವಾಸನ್ ವಕೀಲರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಹೆಸರಾಗಿದ್ದರು. ತಾಯಿ ರಾಜಲಕ್ಷ್ಮಿ. ಈ ದಂಪತಿಗಳ ಹಿರಿಯ ಪುತ್ರರಾದ ಚಾರುಹಾಸನ್ ಅವರು ತಮ್ಮ ಕಿರಿಯ ಸಹೋದರ ಪ್ರಸಿದ್ಧ ನಟ ಕಮಲಹಾಸನ್ ಅವರಿಗಿಂತ 24 ವರ್ಷ ದೊಡ್ಡವರು. ಚಾರುಹಾಸನ್ ಅವರಿಗೆ ಚಿಕ್ಕವಯಸ್ಸಿನಲ್ಲಿ ಅಪಘಾತ ಉಂಟಾದ […]

Advertisement

Wordpress Social Share Plugin powered by Ultimatelysocial