ಇನ್ನು ಮುಂದೆ ಹಳೆಯ ವಿಷಯಗಳು ಕಾಡುವುದಿಲ್ಲ: ನಟಿ ಸಮಂತಾ,

ಟಾಲಿವುಡ್ ಬ್ಯೂಟಿ ಸಮಂತಾಗೆ ಸಾಲು-ಸಾಲು ಸಮಸ್ಯೆಗಳು ಎದುರಾಗುತ್ತಲೇ ಇವೆ. ಮೊದಲಿಗೆ ವಿಚ್ಛೇದನ, ಬಳಿಕ ಸೋಷಿಯಲ್ ಮೀಡಿಯಾಗಳ ಟ್ರೋಲಿಂಗ್, ಬೈಗುಳ, ಸುಳ್ಳು ಸುದ್ದಿ, ಅನಾರೋಗ್ಯ ಹೀಗೆ ಒಂದರ ಹಿಂದೊದರಂತೆ ಸಮಸ್ಯೆಗಳನ್ನು ಎದುರಿಸುತ್ತಲೆ ಬಂದರು. ಆದರೂ ಅವೆಲ್ಲವುಗಳನ್ನು ಸಮಂತಾ ದೈರ್ಯದಿಂದಲೇ ಮೆಟ್ಟಿ ನಿಂತಿದ್ದಾರೆಗಟ್ಟಿ ಮಹಿಳೆಯಾಗಿ ರೂಪುಗೊಳ್ಳುತ್ತಿರುವ ಸಮಂತಾ, ಹಳೆಯ ಕೆಟ್ಟ ನೆನಪುಗಳಿಂದ ಹೊರಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಸಾಮಾಜಿಕಜಾಲತಾಣದಲ್ಲಿ ಆಕ್ಟೀವ್ ಆಗಿರುವ ನಟಿ ಸಮಂತಾ, ತಮ್ಮ ವರ್ಕೌಟ್ ವಿಡಿಯೋಗಳು, ಗೆಳೆಯರ ಚಿತ್ರಗಳು, ಸಿನಿಮಾ ಪೋಸ್ಟರ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ತಮ್ಮ ಮನದ ಭಾವನೆಗಳ ಬಗ್ಗೆಯೂ ಬರೆಯುತ್ತಾರೆ. ಇದೀಗ ಇಂಥಹುದೇ ಒಂದು ಇನ್​ಸ್ಟಾಗ್ರಾಂ ಪೋಸ್ಟ್ ಅನ್ನು ಸಮಂತಾ ಹಂಚಿಕೊಂಡಿದ್ದಾರೆ.ವಯಸ್ಸು ಮಾಗಿದಷ್ಟು, ನಾನು ಮಾಗುತ್ತಾ ಸಾಗುತ್ತೇನೆ. ಜನ ತೋರಿಸುತ್ತಿರುವ ಎಲ್ಲ ಪ್ರೀತಿ, ಅನುರಾಗಕ್ಕೆ ನಾನು ಧನ್ಯಳಾಗಿದ್ದೇನೆ. ಪ್ರತಿ ಹೊಸ ದಿನಕ್ಕೆ, ಆ ಹೊಸ ದಿನ ತರುವ ಹಲವು ಹೊಸ ವಿಷಯ, ಹೊಸ ಸಂತಸಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಹಲವು ವಿಷಯಗಳು ನನ್ನ ಮೇಲೆ ಪ್ರಭಾವ ಬೀರುತ್ತಿದ್ದವು ಆದರೆ ಇನ್ನು ಮುಂದೆ ಅವು ನನ್ನನ್ನು ಘಾಸಿಗೊಳಿಸುವುದಿಲ್ಲ. ಪ್ರತಿದಿನವೂ ಪ್ರೀತಿ ಹಾಗೂ ಕೃತಜ್ಞತೆಯ ಅಲೆಗಳು ಮಾತ್ರವೇ ಎಂದು ಬರೆದುಕೊಂಡಿದ್ದಾರೆ.ಇತ್ತೀಚೆಗೆ ಸಮಂತಾ ಇಂಡಸ್ಟ್ರಿಗೆ ಕಾಲಿಟ್ಟು 13 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಯೇ ಮಾಯ ಚೇಸಾವೆ ಸಿನಿಮಾದಲ್ಲಿ ಮಾಡಿದ್ದ ಜೆಸ್ಸಿ ಪಾತ್ರದ ಚಿತ್ರಗಳನ್ನು ಸಮಂತಾ ನಿನ್ನೆ ಹಂಚಿಕೊಂಡಿದ್ದರು. ಅಂತೆಯೇ ಚಿತ್ರರಂಗದ ಹಲವರು ಸಮಂತಾ, ಚಿತ್ರರಂಗದಲ್ಲಿ ಹದಿಮೂರು ವರ್ಷ ಪೂರೈಸಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕರ್ಕ ರಾಶಿ ಭವಿಷ್ಯ.

Tue Feb 28 , 2023
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ಸ್ನೇಹಿತರ ಸಂಗ ಆರಾಮ ಒದಗಿಸುತ್ತದೆ. ನೀವು ಸಂಜೆ ಸ್ನೇಹಿತರೊಂದಿಗೆ ಹೊರಗೆ ಹೋದರೆ ತತ್ಕ್ಷಣದ ಪ್ರಣಯ ನಿಮಗೆ ದೊರಕಬಹುದು. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತೆರೆದಿಡುತ್ತದೆ. ಹೆಚ್ಚಾಗಿ ದೂರದ ಸ್ಥಳದಿಂದ ಕೊನೆಯಲ್ಲಿ ಸಂಜೆಯಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಲಾಗಿದೆ. ಇಂದು, ನೀವು ನಿಮ್ಮ […]

Advertisement

Wordpress Social Share Plugin powered by Ultimatelysocial