ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಕದನ ರಂಗೇರುತ್ತಿದ್ದು, ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಟೆಸ್ಟ್‌ ಸರಣಿ ಮೂಲಕ ಅಖಾಡಕ್ಕೆ ಇಳಿಯುತ್ತಿದೆ. ವಿಶಾಖಪಟ್ಟಣದಲ್ಲಿ ಪ್ರಥಮ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಲೈವ್‌ ಸ್ಕೋರ್‌ ಅಪ್ಡೇಟ್‌ಗಳನ್ನು ಇಲ್ಲಿ ಪಡೆಯಬಹುದಾಗಿದೆ. ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಮೊದಲ ಟೆಸ್ಟ್‌ ಸರಣಿಯ ಮೊದಲ ಹಣಾಹಣಿ ಇಲ್ಲಿನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿದೆ

ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಪುತ್ರಿ ಆಯಿರಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ರಾಕಿಂಗ್ ದಂಪತಿ ಮಗಳ ಮುದ್ದು ಫೋಟೋವನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದು ಬರುತ್ತೆ. ಸದ್ಯ ರಾಧಿಕಾ ಪಂಡಿತ್ ಮಗಳ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಪುತ್ರಿಯ ಜೊತೆ ಮಾತನಾಡುತ್ತಿದ್ದಾರೆ. ರಾಧಿಕಾ ಮತ್ತು ಯಶ್ ಫೋಟೋವನ್ನು ಇಟ್ಟು ಅಪ್ಪ ಮತ್ತು […]

ತನಗೆ ಹೆಸರು, ಹಣ ತಂದುಕೊಟ್ಟಿದ್ದ ಬಣ್ಣದಲೋಕವನ್ನು ಬಿಟ್ಟು ರಾಜಕೀಯದಲ್ಲಿ ಸಾಧನೆ ಮಾಡಲು ಹೋಗಿ ಚಿರಂಜೀವಿ ಸೋತದ್ದು ಗೊತ್ತೇ ಇದೆ. ಇದಾದ ಹಲವು ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಮೆಗಾಸ್ಟಾರ್ ಚಿರಂಜೀವಿ “ಸೈರಾ ನರಸಿಂಹ ರೆಡ್ಡಿ” ಮೂಲಕ, ಗಾಂಧಿ ಜಯಂತಿಯ ದಿನದಂದು ತೆರೆಯಲ್ಲಿ ಆರ್ಭಟಿಸಲಿದ್ದಾರೆ. ವಿಚಾರ ಅದಲ್ಲ, ಇಲ್ಲಿ ಎರಡು ವಿಚಾರವಿದೆ. ಒಂದು, ಈ ಚಿತ್ರ ಕನ್ನಡ ಸಹಿತ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಈ ಚಿತ್ರವನ್ನು […]

ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಇಂದು ದೇಶ ವಿದೇಶದಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿಯ ಜೀವನಾಧಾರಿತ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಸುರೇಂದರ್ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬಂದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬೆಳ್ಳಂಬೆಳಗ್ಗೆ ಪ್ರದರ್ಶನವಾಗುತ್ತಿದೆ. […]

ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ತೆರೆ ಮೇಲೆ ಮಿಂಚದೆ ದಶಕವೆ ಆಗಿದೆ. ‘ತಾಯಿಯ ಮಡಿಲು’ ಸಿನಿಮಾದ ನಂತರ ರಕ್ಷಿತ ಮತ್ತೆ ಬಣ್ಣ ಹಚ್ಚಿಲ್ಲ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು “ಎ ಪ್ರೆಂಡ್ ಫಾರ್ ಲೈಫ್” ಅಂತ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಕ್ರೇಜಿ ಕ್ವೀನ್ […]

ಮಹಾತ್ಮ ಗಾಂಧೀಜಿ ಹುಟ್ಟಿದ ದಿನ. ರಾಷ್ಟ್ರಪಿತನ ಹುಟ್ಟಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಗಾಂಧಿ ಜಯಂತಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಸಹ ಗಾಂಧಿ ಜಯಂತಿಗೆ ಶುಭಕೋರುತ್ತಿದ್ದಾರೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹ ವಿಶೇಷವಾಗಿ ಶುಭಕೋರುವ ಜೊತೆಗೆ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶ ನೀಡಿದ್ದಾರೆ. ಹೌದು, ಚುಲ್ ಬುಲ್ ಪಾಂಡೆ ಅಭಿಮಾನಿಗಳಿಗೆ ಯಾವಾಗಲು ಫಿಟ್ ಆಗಿರಿ ಅಲ್ಲದೆ ಸ್ವಚ್ಚ ಭಾರತದ ಕಡೆ ಗಮನ ಕೊಡಿ ಎಂದು […]

ದಾವಣಗೆರೆ, ಸೆಪ್ಟೆಂಬರ್ 29: “ಯಡಿಯೂರಪ್ಪ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ವೀರಶೈವ ಸಮಾಜ ಉಳಿಯಿತು” ಎಂದು ಹೇಳುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ದಾವಣಗೆರೆಯಲ್ಲಿ ಭಾನುವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳುವಾಗ […]

ದಾವಣಗೆರೆ, ಸೆಪ್ಟೆಂಬರ್ 30: ” ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ವಿಚಾರಕ್ಕೆ ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ” ಎಂದು ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು. ದಾವಣಗೆರೆ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಯುವಮೋರ್ಚಾ ಕಾರ್ಯಕ್ರಮಕ್ಕೆ ಬರುವ ಮುನ್ನ ಮಾತನಾಡಿ, ಯಡಿಯೂರಪ್ಪ ಹುಟ್ಟು ಹೋರಾಟಗಾರರು. ಅವರು ಹೋರಾಟದ ಹಿನ್ನೆಲೆಯಲ್ಲಿ ಹೇಳಿರಬಹುದು. ಪಕ್ಷ ಸಂಘಟನೆ, ಹೊಂದಾಣಿಕೆಯಿಂದ ಸರ್ಕಾರ ಮುನ್ನಡೆಯುತ್ತಿರುವ ಬಗ್ಗೆ ಹಿರಿಯರು […]

ಬೆಂಗಳೂರು, ಅಕ್ಟೋಬರ್ 02 : ಚುನಾವಣಾ ಆಯೋಗ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರ ಉಪ ಚುನಾವಣೆ ರಾಜ್ಯದ ಗಮನ ಸೆಳೆದಿದೆ. ಎಂಟಿಬಿ ನಾಗರಾಜ್ ಸೋಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಎಂಟಿಬಿ ನಾಗರಾಜ್ 2018ರ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.

ದಾವಣಗೆರೆ, ಸೆಪ್ಟೆಂಬರ್ 30: ಮೊಬೈಲ್ ಕಳೆದುಹೋದದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಸಿದ್ದೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿ ಈ ಘಟನೆ ನಡೆದಿದ್ದು, ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 29ರಂದು ಭಾನುವಾರ ತಮ್ಮ ಪಕ್ಕದ ಮನೆಯವರ ಮೊಬೈಲನ್ನು ಪಡೆದುಕೊಂಡಿದ್ದ ಸಿದ್ದೇಶ್ ಅಂದೇ ಅದನ್ನು ಕಳೆದುಕೊಂಡಿದ್ದ. ವಿಷಯ […]

Advertisement

Wordpress Social Share Plugin powered by Ultimatelysocial