ಕಾಂಗ್ರೆಸ್, ಜೆಡಿಎಸ್​ನಿಂದ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ: ಪ್ರಧಾನಿ ಮೋದಿ.!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕರ್ನಾಟಕವನ್ನು ಎಟಿಎಂ ಅಂದುಕೊಂಡಿವೆ. ಅವರು ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಎರಡು ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಚನ್ನಪಟ್ಟಣ (ರಾಮನಗರ): ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾರಣ.

ಇವರ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುವ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಎರಡೂ ಪಕ್ಷಗಳು ಕರ್ನಾಟಕವನ್ನು ಎಟಿಎಂನಂತೆ ನೋಡಿವೆ. ರಾಜಕೀಯ ಅಸ್ಥಿರತೆಯ ಲಾಭವನ್ನೂ ಇವರು ಪಡೆಯುತ್ತಿದ್ದಾರೆ. ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ. ಆದರೆ ಎರಡೂ ಪಕ್ಷಗಳ ನಾಯಕರು ಹೃದಯದಲ್ಲಿ ಒಂದಾಗಿದ್ದಾರೆ. ದೆಹಲಿಯಲ್ಲೂ ಒಟ್ಟಿಗಿದ್ದಾರೆ. ಸಂಸತ್ತಿನಲ್ಲಿ ಪರಸ್ಪರ ಸಹಾಯ ಮಾಡುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಕರ್ನಾಟಕ ಬಹಳ ವರ್ಷಗಳಿಂದ ಅಸ್ಥಿರ ಸರ್ಕಾರದ ನಾಟಕವನ್ನು ಕಂಡಿದೆ. ಅಸ್ಥಿರ ಸರ್ಕಾರಗಳು ಅಧಿಕಾರಕ್ಕೆ ಬಂದ್ರೆ ಲೂಟಿ ಮಾಡಲು ಅವಕಾಶ ನೀಡಿದಂತೆ. ಇಂಥ ಸರ್ಕಾರದಲ್ಲಿ ಯಾವಾಗಲೂ ಕಂಡು ಬರುವುದು ಲೂಟಿ ಮಾತ್ರ. ಅಲ್ಲಿ ಅಭಿವೃದ್ಧಿ ಕಾಣುವುದಿಲ್ಲ ಎಂದರು.

224 ಸದಸ್ಯಬಲದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 15ರಿಂದ 20 ಸ್ಥಾನಗಳನ್ನು ಪಡೆದರೆ ತಾವೇ ಕಿಂಗ್‌ಮೇಕರ್ ಎಂದು ಜೆಡಿಎಸ್‌ ಬಹಿರಂಗವಾಗಿ ಘೋಷಿಸಿದೆ. ಈ ಸ್ವಾರ್ಥ ವಿಧಾನ ಒಂದು ಕುಟುಂಬಕ್ಕೆ ಪ್ರಯೋಜನ ತರಬಹುದು. ಆದರೆ ಇದು ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ ನಷ್ಟ ಉಂಟುಮಾಡುತ್ತದೆ ಎಂದು ಜೆಡಿಎಸ್ ಪಕ್ಷವನ್ನು ಟೀಕಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಡೀ ಯುರೋಪ್​ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾದ ಭಾರತ..!

Sun Apr 30 , 2023
ಇತ್ತೀಚಿನ ದಿನಗಳಲ್ಲಿ ಸಂಸ್ಕರಿತ ಇಂಧನಕ್ಕಾಗಿ ಯುರೋಪ್ ರಾಷ್ಟ್ರಗಳ ಅವಲಂಬನೆ ಭಾರತದ ಮೇಲೆ ಹೆಚ್ಚಾಗುತ್ತಿದೆ. ನವದೆಹಲಿ : ಒಂದು ಕಡೆ ರಷ್ಯಾದಿಂದ ದಾಖಲೆ ಪ್ರಮಾಣದಲ್ಲಿ ಕಚ್ಚಾ ಇಂಧನ ತೈಲ ಖರೀದಿ ಮಾಡುತ್ತಿರುವ ಭಾರತ, ಇನ್ನೊಂದೆಡೆ ಯುರೋಪಿಗೆ ಅತಿ ಹೆಚ್ಚು ಸಂಸ್ಕರಿತ ಇಂಧನ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಕೆಪ್ಲರ್ ಅನಲಿಟಿಕ್ಸ್​ ಡೇಟಾ ಈ ಮಾಹಿತಿ ನೀಡಿದೆ. ಯುರೋಪ್ ರಾಷ್ಟ್ರಗಳು ರಷ್ಯಾದಿಂದ ತರಿಸಿಕೊಳ್ಳುತ್ತಿದ್ದ ಕಚ್ಚಾ ತೈಲದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಅವು ಭಾರತದ […]

Advertisement

Wordpress Social Share Plugin powered by Ultimatelysocial