ಅಸ್ಸಾಂನಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ೫೬,೬೪,೪೯೯ ಮಂದಿ ಬಾಧಿತರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.ಪ್ರವಾಹ ಮತ್ತು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ೧೧೯ಕ್ಕೆ ಏರಿದೆ. ಅವರಲ್ಲಿ ೯೩ ಮಂದಿ ಪ್ರವಾಹ ಸಂಬAಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದರೆ, ೨೬ ಮಂದಿ ಭೂಕುಸಿತದಿಂದ ಸಾವಿಗೀಡಾಗಿದ್ದಾರೆ. ಅಸ್ಸಾಂನಾದ್ಯAತ ಸುಮಾರು ೧.೧೯ ಲಕ್ಷ ಹೆಕ್ಟೇರ್ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. ಹಲವೆಡೆ ೫೮೭ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ೧.೨೫ ಲಕ್ಷ ಜನರು ಆಶ್ರಯ ಪಡೆದಿದ್ದಾರೆ.

ಅಸ್ಸಾ0 ಭೀಕರ ಪ್ರವಾಹದಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಮೌಲ್ಯದ ಆಸ್ತಿ ಪಾಸ್ತಿ ಉಂಟಾಗಿದ್ದು, ಅಗತ್ಯ ಬಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರರೊಬ್ಬರು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ ಸುಮಾರು ೪ ಮಿಲಿಯನ್ ನಷ್ಟು ಜನರು ಸ್ಥಳಾಂತರವಾಗಿರುವ ಬಗ್ಗೆ ಸಹೋದ್ಯೋಗಿಗಳು ತಿಳಿಸಿದ್ದು, ಅಗತ್ಯವಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡುವಾದಿಗ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ ಡುಜಾರಿಕ್ ಹೇಳಿದ್ದಾರೆ.ಅಸ್ಸಾಂನ ೨೪ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, […]

Advertisement

Wordpress Social Share Plugin powered by Ultimatelysocial