ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗೆ ಇಂದು ಖುಷಿಯ ದಿನ. ಉದ್ಯಾನವನದ ೧೨ ರ‍್ಷದ ರೂಪಾ ಎಂಬ ಹೆಣ್ಣು ಆನೆ ಗಂಡು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಉದ್ಯಾನವನದ ಕರ‍್ಯಕಾರಿ ನರ‍್ದೇಶಕರು ತಿಳಿಸಿದ್ದಾರೆ. ರೂಪಾಗೆ ಇದು ಎರಡನೇ ಮರಿಯಾಗಿದ್ದು ಈ ಹಿಂದೆ ೨೦೧೬ರಲ್ಲಿ ಹೆಣ್ಣು ಮರಿಯಾನೆಗೆ ಜನ್ಮ ನೀಡಿತ್ತು. ಈ ಮೂಲಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ ೨೪ಕ್ಕೆ ಏರಿದೆ.

Advertisement

Wordpress Social Share Plugin powered by Ultimatelysocial