ಮಾದಕ ವಸ್ತು ಮಾರಾಟದ ವಿರುದ್ಧ  ಪೊಲೀಸರು ವಿಶೇಷ   ಕಾರ್ಯಾಚರಣೆ ನಡೆಸಿದ್ದು, 15 ಆರೋಪಿಗಳನ್ನು ಬಂಧಿಸಿದ್ದಾರೆ. ಲಾಕ್‌ಡೌನ್ ವೇಳೆಯಲ್ಲೇ  ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ ಮಾಹಿತಿ ಪಡೆದ ಪೊಲೀಸರು, 12 ಗಂಟೆಗಳ ಕಾರ್ಯಾಚರಣೆಯಲ್ಲಿ  15  ಆರೋಪಿಗಳನ್ನು  ಸೆರೆ  ಹಿಡಿದಿದ್ದಾರೆ. ಬಂಧಿತರಲ್ಲಿ  ಒಬ್ಬ ನೈಜೀರಿಯಾ ಪ್ರಜೆ ಇದ್ದಾನೆ. ಮೊಬೈಲ್ ಮೂಲಕವೇ ಗ್ರಾಹಕರನ್ನು ‍ಸಂಪರ್ಕಿಸಿ ಆರೋಪಿಗಳು ಮಾದಕ ವಸ್ತು ಮಾರುತ್ತಿದ್ದರು. ಬಾಣಸವಾಡಿ, ಕೆ.ಜೆ.ಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Advertisement

Wordpress Social Share Plugin powered by Ultimatelysocial