ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸರಣಿ ಅಪಘಾತ ನಡೆದಿದೆ. ಕೆಟ್ಟು ನಿಂತಿದ್ದ ಬುಲೋರೋ‌ ವಾಹನಕ್ಕೆ ಕಾರು, ಕ್ಯಾಂಟರ್, ಟ್ರಾಕ್ಟರ್  ಮತ್ತು ಎರಡು ಬೈಕ್ ಗಳು ಡಿಕ್ಕಿಯಾಗಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮತ್ತು ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೋಲಾರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಪಘಾತದ ಹಿನ್ನೆಲೆಯಲ್ಲಿ ‌ಬಂದಾಗಿದ್ದ ಹೆದ್ದಾರಿಯನ್ನು ಪೊಲೀಸರು ತೆರವು ಗೊಳಿಸಿದ್ದಾರೆ.  

Advertisement

Wordpress Social Share Plugin powered by Ultimatelysocial