ರಶ್ಮಿಕಾ ಮಂದಣ್ಣ ಅಭಿನಯದ ಸ್ತ್ರೀ ಪ್ರಧಾನ ಚಿತ್ರ ‘ರೈನ್​ಬೋ’ ಫಸ್ಟ್​ ಶೆಡ್ಯೂಲ್​ ಮುಕ್ತಾಯಗೊಂಡಿದೆ.

ಶ್ಮಿಕಾ ಮಂದಣ್ಣ ಅಭಿನಯದ ಸ್ತ್ರೀ ಪ್ರಧಾನ ಚಿತ್ರ ‘ರೈನ್​ಬೋ’ ಫಸ್ಟ್​ ಶೆಡ್ಯೂಲ್​ ಮುಕ್ತಾಯಗೊಂಡಿದೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿರುವ ಈ ಚೆಲುವೆ ಶೂಟಿಂಗ್​ ವಿಚಾರವಾಗಿ ಫುಲ್​ ಬ್ಯುಸಿಯಾಗಿದ್ದಾರೆ.

ಹೀಗಾಗಿ ಬಹಳ ದಿನಗಳ ನಂತರ ಸೋಶಿಯಲ್​ ಮೀಡಿಯಾದಲ್ಲಿ ನಟಿ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋ ಸೇರಿದಂತೆ ಒಂದೇ ಬಾರಿಗೆ ಸುಮಾರು 10 ಪೋಸ್ಟ್​ ಹಂಚಿಕೊಂಡಿದ್ದು, ಉದ್ದನೆಯ ಶೀರ್ಷಿಕೆಯನ್ನು ಬರೆದಿದ್ದಾರೆ.

‘ಪುಷ್ಪ’ ನಟಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಂದರವಾದ ಫೋಟೋಗಳ ಜೊತೆ ವಿಡಿಯೋಗಳನ್ನು ಕೈ ಬಿಟ್ಟಿದ್ದಾರೆ. “ಕ್ಷಮಿಸಿ ಸ್ನೇಹಿತರೇ, ನಾನು ಸ್ವಲ್ಪ ದಿನ ಕಾಣೆಯಾಗಿದ್ದೆ. ನಾವು ಹೆಚ್ಚಾಗಿ ನೆಟ್​ವರ್ಕ್ ಇಲ್ಲದ ಪ್ರದೇಶದಲ್ಲಿ ಶೂಟಿಂಗ್​ ಮಾಡುತ್ತಿದ್ದೆವು. ನಮ್ಮ ‘ರೈನ್​ಬೋ’ ಮೊದಲ ಹಂತದ ಶೆಡ್ಯೂಲ್​ ಮುಕ್ತಾಯಗೊಂಡಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು ರೈನ್​ಬೋ ತಂಡ, ನೀವು ನಿಜಕ್ಕೂ ಅದ್ಭುತ” ಎಂದು ಕ್ಯಾಪ್ಶನ್​ ಬರೆದಿದ್ದು, ಬಳಿಕ ಸಾಲು ಸಾಲು ಚಿತ್ರಗಳ ಬಗ್ಗೆ ರಶ್ಮಿಕಾ ಹೇಳಿದ್ದಾರೆ.

ಮೊದಲನೆಯದು ಶೂಟಿಂಗ್​ ಮುಗಿಸಿ ನಿನ್ನೆ ಪ್ಯಾಕ್​ ಅಪ್​ ಮಾಡುವ ಮೊದಲು ನಟ ದೇವಮೋಹನ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಎರಡನೆಯದು ಇಡೀ ‘ರೈನ್​ಬೋ’ ಚಿತ್ರತಂಡದ ಫೋಟೋ. ಮೂರನೆಯದು ಮುನ್ನಾರ್​ ಸ್ಥಳದ ಸುಂದರ ನೋಟ. ನಾಲ್ಕನೆಯದು ವಿಡಿಯೋ ಆಗಿದ್ದು, ರಶ್ಮಿಕಾ ತಾವಿದ್ದ ಕೋಣೆಯಿಂದ ಬ್ಯೂಟಿಫುಲ್​ ಪರಿಸರವನ್ನು ಕ್ಯಾಪ್ಚರ್​ ಮಾಡಿದ್ದಾರೆ.

ಐದನೆಯದು ಅವರು ತೆಗೆದ ಸುಂದರವಾದ ಹೂವಿನ ಚಿತ್ರ. ಆರನೆಯ ಫೋಟೋ ಮುನ್ನಾರ್​ ಕೊಡೈಕೆನಾಲ್​ನಲ್ಲಿ ಸೂರ್ಯೋದಯವಾಗುತ್ತಿರುವುದು. ಏಳನೆಯದ್ದು ರಶ್ಮಿಕಾ ವರ್ಕೌಟ್​ ಮಾಡುವ ವಿಡಿಯೋ ಆಗಿದೆ. ಮತ್ತೆರಡು ಫೋಟೋಗಳು ಅವರ ಅಮ್ಮ ಮತ್ತು ತಂಗಿಯ ಜೊತೆಗಿರುವುದು. ಕೊನೆಯದು ಅವರದ್ದೇ ಒಂದು ಕ್ಯೂಟ್​ ವಿಡಿಯೋ ಆಗಿದ್ದು, ಒಟ್ಟಿಗೆ ಹತ್ತು ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನು ಕಂಡ ಅಭಿಮಾನಿಗಳು ಫೋಟೋಗಳ ಮೇಲೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಈವರೆಗೆ ರಶ್ಮಿಕಾ ಹೊಸ ಪೋಸ್ಟ್​ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದ್ದು, ನಾಲ್ಕೂವರೆ ಸಾವಿರ ಕಮೆಂಟ್​ಗಳು ಬಂದಿವೆ. ಅವರ ಫ್ಯಾನ್ಸ್​ ನಟಿಯ ಸಿನಿಮಾಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಜೊತೆಗೆ ಇಷ್ಟು ದಿನ ನಿಮ್ಮನ್ನು ಮಿಸ್​ ಮಾಡಿಕೊಂಡೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಮುಂದಿನ ಸಿನಿಮಾಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಲವರು ತಮಗೆ ಇಷ್ಟವಾದ ಫೋಟೋವನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ಇನ್ನೂ ಶಂತರುಬನ್ ಚಿತ್ರಕಥೆ ಬರೆದು​ ನಿರ್ದೇಶಿಸಿದ ‘ರೈನ್​ಬೋ’ ಸ್ತ್ರೀ ಪ್ರಧಾನ ಪಾತ್ರದಲ್ಲಿ ಮೊದಲ ಬಾರಿಗೆ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಎದುರು ನಟ ದೇವ್​ ಮೋಹನ್​ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕೆಎಂ ಭಾಸ್ಕರನ್​ ಛಾಯಾಗ್ರಹಣ, ಜಸ್ಟೀನ್​ ಪ್ರಭಾಕರನ್​ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ಡ್ರೀಮ್​ ವಾರಿಯರ್​ ಪಿಕ್ಚರ್ಸ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ರೈನ್​ಬೋ ಒಂದು ರೀತಿಯ ರೊಮ್ಯಾಂಟಿಕ್​ ಫ್ಯಾಂಟಸಿ ಚಿತ್ರವಾಗಿದೆ. ಈ ಸಿನಿಮಾವು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರಲಿದೆ.

ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಸಿನಿಮಾ: ಬಾಲಿವುಡ್​ ನಟ ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಮಂದಣ್ಣ ಸಿನಿಮಾ ಮಾಡಲಿದ್ದಾರೆ. ಚಾನ್ವಾ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ವಿಕ್ಕಿ ಪತ್ನಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ದಿನೇಶ್​ ವಿಜನ್​ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಜೋಡಿ ಹಿಂದೆ ಜಾಹೀರಾತು ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಈ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ಪ್ರಚಾರ ಅಬ್ಬರ.. ಮೇ 6, 7 ರಂದು ಮತ್ತೆ ಬೆಂಗಳೂರಿನಲ್ಲಿ ಮೋದಿ ಪ್ರವಾಸ..!

Sun Apr 30 , 2023
ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 6, 7ರಂದು ಬೆಂಗಳೂರಿನಲ್ಲಿ ಮತ್ತೆ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮೂಲಕ ಪಕ್ಷದ ಪರ ಮತ ಯಾಚನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಬೆಂಗಳೂರಿಗೆ ವಿಶೇಷ ಗಮನ ನೀಡಿದ್ದಾರೆ. ಕಳೆದ ದಿನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ […]

Breaking News

Advertisement

Wordpress Social Share Plugin powered by Ultimatelysocial