ತಾಜ್​ ಹೋಟೆಲ್​​ನಲ್ಲಿ ತಿಂದು ಬಿಲ್​ ಕೇಳಿದ್ರೆ ಚಿಲ್ಲರೆ ಕೊಟ್ಟ ಯುವಕ,

ಸಾಮಾನ್ಯವಾಗಿ ನಾವು ದೊಡ್ಡ ದೊಡ್ಡ ಹೊಟೇಲ್‌ಗಳಿಗೆ ಹೋದರೆ ಊಟ ಮಾಡಿ ಮುಗಿಸಿದ ನಂತರ ನಾವು ಕುಳಿತಿರುವ ಟೇಬಲ್‌ಗೆ ಹೊಟೇಲ್ ಸಿಬ್ಬಂದಿ ಬಿಲ್ ಅನ್ನು ತಂದಿಟ್ಟಾಗ, ನಾವು ನಮ್ಮ ಪರ್ಸ್ ಗಳಲ್ಲಿರುವ ಡೆಬಿಟ್ ಕಾರ್ಡ್ ಗಳಿಂದ ಆ ಬಿಲ್‌ ಅನ್ನು ಪಾವತಿಸುತ್ತೇವೆ.

ಆದರೆ ಇತ್ತೀಚೆಗೆ ಈ ಗೂಗಲ್ ಪೇಮತ್ತು ಫೋನ್ ಪೇ ಅಂತಹ ಇಂಟರ್ನೆಟ್ ಹಣದ ವಹಿವಾಟು ಅಪ್ಲಿಕೇಷನ್‌ಗಳು ಬಂದಿರುವುದರಿಂದ ಅವುಗಳನ್ನು ಬಳಸಿ ಸಹ ಬಿಲ್ ಅನ್ನು ಪಾವತಿಸುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ.ನಂತರ ತಮ್ಮ ಬಿಲ್ ಅನ್ನು ಯಾವುದೇ ಡೆಬಿಟ್ ಕಾರ್ಡ್ ಅಥವಾ ಮೊಬೈಲ್ ಅಪ್ಲಿಕೇಷನ್ ಗಳಿಂದ ಬಿಲ್ ಅನ್ನು ಪಾವತಿಸದೇ, ಜೇಬಿನಿಂದ ನಾಣ್ಯಗಳನ್ನು ಹೊರ ತೆಗೆದು ಅವುಗಳನ್ನು ಎಣಿಸಿ ಆ ಬಿಲ್ ಅನ್ನು ಪಾವತಿಸಿದ್ದಾರೆ ನೋಡಿ.ಈ ವ್ಯಕ್ತಿ ಬಿಲ್ ಅನ್ನ ನಾಣ್ಯಗಳಿಂದ ಪಾವತಿಸಿದ್ದೇಕೆ ಗೊತ್ತೇ?ಸಾಮಾನ್ಯವಾಗಿ ಜನರು ಇಂತಹ ಹೊಟೇಲ್‌ಗೆ ಬಂದರೆ ಅವರು ಕಾರ್ಡ್ ಅಥವಾ ಮೊಬೈಲ್ ಆಪ್ ನಿಂದ ಬಿಲ್ ಪಾವತಿಸುತ್ತಾರೆ. ಕೆಲವೊಮ್ಮೆ ಜನರು ತಮ್ಮಲ್ಲಿ ನಾಣ್ಯಗಳಿದ್ದರೂ ಸಹ ಅದನ್ನು ಕೊಟ್ಟರೆ ಏನಂತ ಅಂದುಕೊಳ್ಳುತ್ತಾರೆ ಜನರು ಅಂತ ಭಾವಿಸಿ ಹೊರಗೆ ತೆಗೆಯುವುದಿಲ್ಲ.ಆದ್ದರಿಂದ ಜನರು ತಾವು ಹೇಗಿದ್ದಾರೋ ಹಾಗೆ ಇರಲು ಮತ್ತು ಅವರ ವ್ಯಕ್ತಿತ್ವಕ್ಕೆ ಇಂತಹ ವಿಷಯಗಳಿಂದ ನಕಲಿ ಮೆರುಗು ನೀಡಬಾರದು ಎಂದು ತಿಳಿಸಲು ಅವರು ಸಾಮಾಜಿಕ ಪ್ರಯೋಗವನ್ನು ಮಾಡಿದ್ದಾರೆ ಎಂದು ಸಿದ್ದೇಶ್ ಲೋಕರೆ ಅವರು ಹೇಳಿದರು. ಅವರ ಪ್ರಯೋಗದ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಸುಮಾರು 1.4 ಲಕ್ಷ ಲೈಕ್ ಗಳನ್ನು ಗಳಿಸಿದೆ.ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?ಹೋಟೆಲ್ ನ ಆನ್-ಸೈಟ್ ರೆಸ್ಟೋರೆಂಟ್ ಗೆ ಪ್ರವೇಶಿಸುವುದರೊಂದಿಗೆ ಈ ವೀಡಿಯೋ ಪ್ರಾರಂಭವಾಗುತ್ತದೆ. ಬ್ಯಾಕ್ಪ್ಯಾಕ್ ಹಿಡಿದು ಒಳಗೆ ಬಂದು ಒಂದು ಟೇಬಲ್ ನ ಮುಂದೆ ಇರುವ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ನಂತರ ಅಲ್ಲೇ ಇರುವಂತಹ ಮೆನುವನ್ನು ಕೈಗೆತ್ತಿಕೊಂಡು ನೋಡಲು ಶುರು ಮಾಡುತ್ತಾನೆ. ಆ ಮೆನುವಿನಲ್ಲಿ ಹೆಚ್ಚು ಬೆಲೆ ಇರುವಂತಹ ಆಹಾರ ಪದಾರ್ಥಗಳ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು.
ಲೋಕರೆ ಹೋಟೆಲ್‌ನಲ್ಲಿ ಪಿಜ್ಜಾ ಮತ್ತು ಮಾಕ್ಟೇಲ್ ಅನ್ನು ಆರ್ಡರ್ ಮಾಡಿಕೊಳ್ಳುತ್ತಾರೆ. ಇದೆಲ್ಲವನ್ನು ತಿಂದು ಮುಗಿಸಿದ ನಂತರ, ಬಿಲ್ ಪಾವತಿಸುವ ವೇಳೆಯಲ್ಲಿ ಅವರು ನಾಣ್ಯಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಮೆಲ್ಲಗೆ ಹೊರತೆಗೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸನ್ನಿ ಡಿಯೋಲ್ ರ ಪುತ್ರ ಕರಣ್ ಡಿಯೋಲ್ ಪ್ರೀತಿಯಲ್ಲಿ ಸಿಲುಕಿದರು!.

Mon Feb 27 , 2023
  ಸನ್ನಿ ಡಿಯೋಲ್ ಅವರ ಮಗ ಕರಣ್ ಡಿಯೋಲ್ ಅವರ ಬದುಕಿನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ನಟ ದುಬೈನಲ್ಲಿ ’ವ್ಯಾಲೆಂಟೈನ್ಸ್ ಡೇ’ ಆಚರಿಸಿದ್ದಾರೆ.ಸನ್ನಿ ಡಿಯೋಲ್ ಮತ್ತೊಮ್ಮೆ ತಮ್ಮ ’ಗದರ್’ ಫಿಲ್ಮ್ ನ ’ಗದರ್ ೨’ ನ ಸೀಕ್ವೆಲ್‌ನೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ. ಈ ನಡುವೆ ಅವರ ಮಗ ಕರಣ್ ಡಿಯೋಲ್ ಕೂಡ ತನ್ನ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿದ್ದಾರೆ. ಕರಣ್ ಡಿಯೋಲ್ ತನ್ನ ಜೀವನದ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದಾರೆ […]

Advertisement

Wordpress Social Share Plugin powered by Ultimatelysocial