ನವೆಂಬರ್ ೩ರಂದು ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನಲೆ ಅಮೆರಿಕಾದಲ್ಲಿ ಈಗಾಗಲೇ ಭಾಷಾ ಪ್ರೇಮ ಶುರುವಾಗಿದೆ.ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಭಾರತೀಯ ಮೂಲದ ಅಮೆರಿಕನ್ನರನ್ನು ಸೆಳೆಯಲು ೧೪ ಭಾಷೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಚಾರ ಸಮಿತಿ ತಿಳಿಸಿದೆ. ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಎರಡೂ ಪಕ್ಷಗಳು ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸಲು ಭಾರತೀಯ ಭಾಷೆಗಳನ್ನು ಬಳಸುತ್ತಿವೆ. ಈ ಬಾರಿ ಡೆಮಾಕ್ರಟಿಕ್ ಪಕ್ಷವು ‘ಅಮೆರಿಕ ಕಾ ನೇತಾ ಕೇಸಾ ಹೋ, ಜೋ ಬಿಡನ್ ಜೇಸಾ ಹೋ'(ಅಮೆರಿಕದ ನೇತಾ ಹೇಗಿರಬೇಕು, ಜೋ ಬಿಡೆನ್ ಹಾಗಿರಬೇಕು) ಎಂಬ ಘೋಷವಾಕ್ಯವನ್ನು ತನ್ನದಾಗಿಸಿಕೊಂಡಿದೆ. ಇದೀಗ ಜೋ ಬಿಡೆನ್ ಅವರು ಭಾರತೀಯ ಅಮೆರಿಕನ್ನರನ್ನು ಸೆಳೆಯಲು ಭಾಷಾ ಅಸ್ತ್ರವನ್ನು ಬಳಸುತ್ತಿದ್ದಾರೆ. ಭಾರತೀಯ ಅಮೆರಿಕನ್ನರೊಂದಿಗೆ ಹಿಂದಿ, ಪಂಜಾಬಿ, ತಮಿಳು, ತೆಲುಗು, ಬೆಂಗಾಲಿ, ಉರ್ದು, ಕನ್ನಡ, ಮಲಯಾಳಂ, ಒರಿಯಾ, ಮರಾಠಿ ಮತ್ತು ನೇಪಾಳಿ ಭಾಷೆಗಳಲ್ಲಿ ನೇರ ಮಾತುಕತೆ
ಭಾರತೀಯರನ್ನ ಸೆಳೆಯಲು ಭಾಷಾ ಅಸ್ತo
Please follow and like us: