ಬಾಲಿವುಡ್ ಬ್ಯಾಂಡ್ ಬಾಯ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ..ಮದ್ವೆಯಾಗದೇ ಇರೋ ಸಲ್ಮಾನ್ ಖಾನ್ ಹಲವಾರು ನಟಿಯರೊಂದಿಗೆ ಲವ್ವಿ ಡವ್ವಿ ನಡೆಸಿದ್ದು ಗೊತ್ತಿರೋ ವಿಚಾರವೇ… ಆದರೆ ಯಾರನ್ನೂ ಈ ವರೆಗೆ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ತಮ್ಮ ರ್ಲ್ಫ್ರೆಂಡ್ಗಳನ್ನು ಆಗಾಗ್ಗೆ ಬದಲಾಯಿಸುತ್ತಲೇ ಇರುತ್ತಾರೆ. ನಟಿಯರೇ ಇವರೊಂದಿಗೆ ಇರುವುದಿಲ್ಲವೋ ಅಥವಾ ಸಲ್ಮಾನ್ ಖಾನೇ ಬೇಗನೇ ಬೋರಾಗುತ್ತಾರೋ ಗೊತ್ತಿಲ್ಲ. ಕತ್ರಿನಾ ಕೈಫ್ ಜೊತೆ ಸುತ್ತಾಡುತ್ತಿದ್ದ ,ಸಲ್ಮಾನ್ ಖಾನ್ ಈಗ ಮತ್ತೆ ರ್ಲ್ಫ್ರೆಂಡ್ ಬದಲಿಸಿದ್ದಾರೆ.. ವಿದೇಶಿ ನಟಿಯೊಂದಿಗೆ ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹೆಸರು ವಿದೇಶಿ ನಟಿ ಯುಲಿಯಾ ವೆಂಟೂರ್ ಜೊತೆ ಜೋರಾಗಿ ಕೇಳಿ ಬರುತ್ತಿದೆ. ರೊಮಾನಿಯಾದ ನಟಿಯಾಗಿರುವ ಯುಲಿಯಾ ವೆಂಟೂರ್ ಸಲ್ಮಾನ್ ಖಾನ್ ಜೊತೆ ರೇಸ್ ೩ ನಲ್ಲಿ ನಟಿಸಿದ್ದರು. ಕಳೆದ ಕೆಲವು ತಿಂಗಳಿನಿಂದಲೂ ಯುಲಿಯಾ ವೆಂಟೂರ್ ಸಲ್ಮಾನ್ ಖಾನ್ ಜೊತೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ. ಪ್ರಸ್ತುತ ಲಾಕ್ಡೌನ್ ಸಮಯದಲ್ಲೂ ಸಹ ಸಲ್ಮಾನ್ ಖಾನ್ ಹಾಗೂ ಯುಲಿಯಾ ವೆಂಟೂರ್ ಒಂದೇ ಫರ್ಮ್ ಹೌಸ್ನಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಸಹ ಸಿಕ್ಕಿದೆ. ನಟಿ ಯುಲಿಯಾ ವೆಂಟೂರ್ ಇತ್ತೀಚೆಗೆ ತಮ್ಮ ದೇಶದ ಮಾಧ್ಯಮದವರಿಗೆ ವಿಡಿಯೋ ಸಂರ್ಶನ ನೀಡುತ್ತಿದ್ದರು. ಇದು ಲೈವ್ ಆಗಿ ಪ್ರಸಾರವಾಗುತ್ತಿತ್ತು, ಆಗ ತಟ್ಟನೆ ಸಲ್ಮಾನ್ ಖಾನ್ ಹಿಂದೆ ಪ್ರತ್ಯಕ್ಷವಾಗಿಬಿಟ್ಟರು. ಯುಲಿಯಾ ಸಲ್ಮಾನ್ ಖಾನ್ ಅನ್ನು ವಿಡಿಯೋಕ್ಕೆ ಬರದಂತೆ ಪಕ್ಕಕ್ಕೆ ಕಳುಹಿಸಿದರು. ಆದರೆ ಸಲ್ಮಾನ್ ವಿಡಿಯೋದಲ್ಲಿ ಕಂಡು ಬಿಟ್ಟರು.ಇದಕ್ಕೆ ಮುನ್ನಾ ಯುಲಿಯಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಒಂದನ್ನು ಹಾಕಿಕೊಂಡಿದ್ದರು. ಆ ಕುದುರೆ ಸಲ್ಮಾನ್ ಖಾನ್ ಅವರಿಗೆ ಸೇರಿದ್ದು, ಸವಾರಿ ಸಹ ಸಲ್ಮಾನ್ ಖಾನ್ ಫಾರಂ ಹೌಸ್ನಲ್ಲಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದು ಸತ್ಯವೂ ಆಗಿತ್ತು. ಐಶ್ರ್ಯಾ ರೈ, ಸಂಗೀತಾ ಬಿಜಲಾನಿ, ಸ್ನೇಹಾ ಉಲ್ಲಾಳ್, ಸೋಮಿ ಅಲಿ, ಕತ್ರಿನಾ ಕೈಫ್ ಅವರುಗಳೊಂದಿಗೆ ಸಲ್ಮಾನ್ ಖಾನ್ ಡೇಟಿಂಗ್ ಮಾಡಿದ್ರು. ಈಗ ಯುಲಿಯಾ ಜೊತೆ ಸಲ್ಮಾನ್ ಪ್ರೇಮ ಲವ್ ನಲ್ಲಿ ಬಿದಿದ್ದರಾ ಅಥ್ವ ಸುಮನ್ನೆ ಸುತ್ತಾಡುತ್ತಿದರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ..
ವಿದೇಶಿ ನಟಿ ಜೊತೆ ನಟ ಸಲ್ಮಾನ್ ಖಾನ್ ಲವ್ವಿ ಡವ್ವಿ..!
Please follow and like us: