ಅಲ್ಲು ಅರ್ಜುನ್ ‘ಪುಪ್ಪ’ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ..?

ಟಾಲಿವುಡ್ ಸ್ಟೆöÊಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಪ್ಪ’ ಸಿನಿಮಾದ ಬಗ್ಗೆ ಮತ್ತೊಂದು ಇಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಅಲ್ಲು ಲುಕ್‌ಗೆ ಫಿದಾ ಆಗಿರುವ ಅಭಿಮಾನಿಗಳು ಪುಪ್ಪ ಸಿನಿಮಾಗಾಗಿ ಕಾತರದಿಂದ ಕಾಯ್ತಿದ್ದಾರೆ.
ಅಲ್ಲು ಪುಪ್ಪ ಸಿನಿಮಾದಲ್ಲಿ ಡಿ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದು ಚಿತ್ರದ ಪೋಸ್ಟರ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಪ್ಪಕ್ ನಾರಾಯಣ್ ಎನ್ನುವ ಪಾತ್ರದಲ್ಲಿ ಡ್ರೆöÊವರ್ ಆಗಿ ಮಿಂಚಲಿದ್ದಾರೆ.
ಖ್ಯಾತ ನಟ ವಿಜಯ್ ಸೇತುಪತಿ ಪುಪ್ಪ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲು ಸಜ್ಜಾಗಿದ್ದರು. ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲು ಸಿದ್ಧರಾಗಿದ್ದರು. ಆದರೀಗ ವಿಜಯ್ ನಿರ್ಧಾರ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಪ್ರಾಜೆಕ್ಟ್ನಿಂದ ವಿಜಯ್ ಸೇತುಪತಿ ಹೊರನಡೆಸಿದ್ದಾರಂತೆ. ಆದರೆ ಆ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಪುಪ್ಪಾ ಸಿನಿಮಾದಲ್ಲಿ ಅಲ್ಲುಗೆ ನಾಯಕಿಯಾಗಿ ನಿವೇತಾ ಥಾಮಸ್ ನಟಿಸುತ್ತಿದ್ದಾರೆ, ನಟಿ ರಶ್ಮಿಕಾ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ನಿವೇತಾ ಥಾಮಸ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲವಂತೆ. ಆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದ ಕಾರಣ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ನಟ ಅಲ್ಲು ಜೊತೆ ಬಾಲಿವುಡ್ ನಟಿ ದಿಶಾ ಪಟಾನಿ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಐಟಂ ಸಾಂಗ್‌ಗಾಗಿ ದಿಶಾ ಪಟಾನಿಗೆ ಸಿನಿಮಾ ತಂಡ ಆಫರ್ ನೀಡಿದೆಯಂತೆ ಆದರೆ ದಿಶಾ ಕಡೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ದಿಶಾ ಪಟಾನಿ ಅಲ್ಲು ಜೊತೆ ಹೆಜ್ಜೆ ಹಾಕಲು ಸಿಕ್ಕ ಅವಕಾಶವನ್ನು ಬಳಸಿಕೊಳ್ತಾರಾ ಅಥವಾ ನಿರಾಕರಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಾವಿನ ಬಾಗಿಲು ಬಡಿದು ಬಂದಿದ್ದ ಬ್ರಿಟನ್ ಪ್ರಧಾನಿ

Sun May 3 , 2020
ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕಾಯಿಲೆ ಎದುರಿಸಿದ ಸನ್ನೀವೇಶಗಳನ್ನು ಬ್ರಿಟನ್‌ನ ದಿ ಸನ್ ಎಂಬ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು, ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದ ವಿಷಯವನ್ನುಹಂಚಿಕೊಂಡಿದ್ದಾರೆ . ಸ್ಟಾಲಿನ್ ಮಾದರಿಯ ಸಾವಿನ ಸನ್ನಿವೇಶವನ್ನು ನಿಭಾಯಿಸಲು ವೈದ್ಯರು ಸಿದ್ಧತೆ ಮಾಡುತ್ತಿದ್ದರು. ಒಂದು ವೇಳೆ ಪರಿಸ್ಥಿತಿ […]

Advertisement

Wordpress Social Share Plugin powered by Ultimatelysocial