ಆನ್ ಲೈನ್ನಲ್ಲಿ ಸಿನಿಮಾ ಬಿಡುಗಡೆ: ಥಿಯೇಟರ್ ಮಾಲೀಕರ ವಿರೋಧ

ಚೆನೈ:ಕಳೆದೊಂದು ತಿಂಗಳಿನಿAದ ಇಡಿ ಚಿತ್ರರಂಗವೇ ಕೆಲಸವಿಲ್ಲದೆ ಖಾಲಿ ಕುಳಿತಿವೆ. ಬೇಕಾದಷ್ಟೂ ಸಿನಿಮಾಗಳಿದ್ದರೂ ಲಾಕ್‌ಡೌನ್ ಚಿತ್ರರಂಗವನ್ನೆ ಸ್ತಬ್ದಗೊಳಿಸಿವೆ. ಇದರ ನಡುವೆ ಈಗಾಗಲೇ ಸಿದ್ಧವಾಗಿರುವ ಫಿಲ್ಮ್ಗಳು, ಪ್ರೇಕ್ಷಕರ ಮನಸೂರೆಗೊಳ್ಳಲು ಹೊಸ ದಾರಿ ಕಂಡುಕೊಳ್ಳುತ್ತಿವೆ. ಆದರೆ ಅದನ್ನು ಥಿಯೇಟರ್ ಮಾಲೀಕರು ಒಪ್ಪುತ್ತಿಲ್ಲ. ತಮಿಳಿನ ೨ಡಿ ಎಂಟರ್‌ಟೇನ್ಮೆAಟ್ ಜ್ಯೋತಿಕಾ ಅಭಿನಯದ ಪೊನ್ನಮಗಳ್ ವಂದಾಲ್ ಎನ್ನುವ ಸಿನಿಮಾವನ್ನು ಆನ್‌ಲೈನ್‌ನ ಅಮೆಜಾನ್‌ನಲ್ಲಿ ಮುಂದಿನ ತಿಂಗಳು ರಿಲೀಸ್ ಮಾಡಲು ಮುಂದಾಗಿದೆ. ಈ ಕಾರಣಕ್ಕೆ ಖ್ಯಾತ ನಟ ಸೂರ್ಯರ ಚಿತ್ರ ನಿರ್ಮಾಣ ಸಂಸ್ಥೆ, ಥಿಯೇಟರ್ ಮಾಲೀಕರ ಸಂಘದ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿದೆ.
ಮೊದಲು ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಮಾಡಿ. ನಂತರ ಒಟಿಟಿ ಮಿಡಿಯಾದಲ್ಲಿ ಬಿಡುಗಡೆ ಮಾಡಿ ಎನ್ನುವ ಮನವಿಗೂ ಒಪ್ಪಿಲ್ಲವೆಂದು ತಮಿಳುನಾಡಿನ ಥಿಯೇಟರ್ ಮಾಲೀಕರು ಹಾಗೂ ಮಲ್ಟಿಫ್ಲೆಕ್ಸ್ನ ಮಾಲೀಕರು, ೨ಡಿ ಎಂಟರ್‌ಟೇನ್ಮೆAಟ್ ಹಾಗೂ ಸೂರ್ಯ ನಟನೆಯ ಸಿನಿಮಾಗಳಿಗೆ ನಿಷೇಧ ಹೇರಿದೆ. ಈ ಬಗ್ಗೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪನ್ನೀರ್ ಸೆಲ್ವಂ ನಾವು ಸೂರ್ಯರ ಯಾವುದೇ ಸಿನಿಮಾವನ್ನು ರಿಲೀಸ್ ಮಾಡದಿರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವೈದ್ಯರ ಸಲಹೆ ಇಲ್ಲದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿದರೆ ಹೃದಯಕ್ಕೆ ಅಪಾಯ

Sat Apr 25 , 2020
ವಾಷಿಂಗ್ಟನ್: ಕೊರೊನಾ ಸೋಂಕಿತರಿಗೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅದಕ್ಕೆ ಸರಿಸಮನಾದ ಔಷಧವನ್ನು ನೀಡುವುದರಿಂದ ಅವರ ಹೃದಯದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಸಂಶೋಧನೆ, ಅಧ್ಯಯನಕ್ಕಾಗಿ ಆಸ್ಪತ್ರೆಗಳಲ್ಲಿ ಬಳಸುವುದನ್ನು ಹೊರತುಪಡಿಸಿ ಕೊರೊನಾ ವೈರಸ್ ರೋಗಿಗಳಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡದಂತೆ ವೈದ್ಯರಿಗೆ ಎಚ್ಚರಿಕೆಯನ್ನೂ ನೀಡಿದೆ. ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಲ್ಲದು ಎಂದು ಅಮೆರಿಕದ ಅಧ್ಯಕ್ಷ […]

Advertisement

Wordpress Social Share Plugin powered by Ultimatelysocial