ಸ್ಟೈರಿನ್ ಅನಿಲ ಸೋರಿಕೆಯಾಗಿ ೧೧ ಮಂದಿ ಮೃತಪಟ್ಟು ೩೦೦ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದ ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್. ವೆಂಕಟಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸ್ಥಳೀಯರು, ಎಲ್.ಜಿ .ಪಾಲಿರ‍್ಸ್ ಕರ‍್ಖಾನೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು. ಈ ನಡುವೆ ಗ್ರಾಮದ ಪರಿಸ್ಥಿತಿ ಅವಲೋಕನಕ್ಕಾಗಿ ಸವಾಂಗ್ ಹಾಗೂ ವಿಶೇಷ ಮುಖ್ಯ ಕರ‍್ಯರ‍್ಶಿ ಜಿಪಿ ಡಿ. ಗೌತಮ್ ಕರಿಕಲ್ ವಲವೆನ್ ಅವರು ಸ್ಥಳಕ್ಕೆ ಬಂದಿದ್ದರು. ಅವರನ್ನು ಕಂಡಕೂಡಲೇ ಸ್ಥಳೀಯರು ಪ್ರತಿಭಟನೆಯನ್ನು ತೀವ್ರಗೊಳಿಸಿದಕ್ಕೆ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಎಲ್‌ಜಿ ಪಾಲಿಮರ್ಸ್ ಸ್ಥಳಾಂತರಕ್ಕೆ ಆಗ್ರಹ

Please follow and like us: