ಇಂಡಿಯಾ-ಪಾಕಿಸ್ತಾನ ಟಿ-20 ಮ್ಯಾಚ್: ಟಿಕೆಟ್‌ಗಳು ಒಂದೇ ಗಂಟೆಯಲ್ಲಿ ಮಾರಾಟ!

 

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಲೀಗ್‌ನ ಭಾರತ- ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಒಂದೇ ಗಂಟೆಯಲ್ಲಿ ಮಾರಾಟಗೊಂಡಿವೆ.ಸಾಂಪ್ರದಾಯಿಕ ಎದುರಾಳಿಗಳ ಹೈ ವೋಲ್ಟೇಜ್ ಪಂದ್ಯ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದು, ಪಂದ್ಯಕ್ಕೆ ಟಿಕೆಟ್ ಬಿಡುಗಡೆಯಾದ ಗಂಟೆಯಲ್ಲೇ ಎಲ್ಲ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿಬಿಟ್ಟಿವೆ.ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಭಾರತ-ಪಾಕಿಸ್ತಾನ ನಡುವೆ ಅ.23ರಂದು ಪಂದ್ಯ ನಡೆಯಲಿದೆ. ವಿಶ್ವದ ದೊಡ್ಡ ಮೈದಾನಗಳಲ್ಲಿ ಇದೂ ಒಂದಾಗಿದ್ದು, ಲಕ್ಷ ಮಂದಿ ಕುಳಿತು ಪಂದ್ಯ ನೋಡಬಹುದಾಗಿದೆ. 60 ಸಾವಿರ ಟಿಕೆಟ್‌ಗಳೂ ಒಂದೇ ಗಂಟೆಯಲ್ಲಿ ಮಾರಾಟ ಆಗಿದ್ದು, ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋಟೆಲ್ ನಲ್ಲಿ ತಿಂಡಿಗೆ ಕುಳಿತಲ್ಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು

Wed Feb 9 , 2022
ಮೈಸೂರು: ಉಪಹಾರಕ್ಕೆಂದು ಹೋಟೆಲ್ ಗೆ ತೆರಳಿದ ವಿದ್ಯಾರ್ಥಿ ಕುಳಿತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹುಣಸೂರಿನಲ್ಲಿ ನಡೆದಿದೆ.ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ, ನಂಜಾಪುರ ಗ್ರಾಮದ ನಿವಾಸಿ ನಿತಿನ್ ಕುಮಾರ್(25) ಮೃತಪಟ್ಟ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.ಈತ ಹುಣಸೂರು ಪಟ್ಟಣದ ಟಿಫಾನಿಸ್ ಹೋಂ ಎಂಬ ಹೋಟೆಲ್ ಗೆ ತಿಂಡಿ ತಿನ್ನಲು ತೆರಳಿದ್ದು, ಹೋಟೆಲ್ ನಲ್ಲಿ ಕುಳಿತ ವೇಳೆ ಸಫ್ಲೈಯರ್ ಬಳಿಗೆ ಬಂದಿದ್ದು, ಆತನೊಂದಿಗೆ ತನಗೆ […]

Advertisement

Wordpress Social Share Plugin powered by Ultimatelysocial