ನವದೆಹಲಿ: ಸಮುದ್ರದಲ್ಲಿ ಮುಳುಗುತ್ತಿರುವ ಕಾರನ್ನು ಉಳಿಸಲು ಮಾಲೀಕನೊಬ್ಬ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಯುನೈಟೆಡ್ ಕಿಂಗ್‌ಡನ್‌ನ ಲೀ ಡಾಲ್ಬಿ ಆಫ್ ಕೆಂಟ್ ವಿಡಿಯೋವನ್ನು ಚಿತ್ರೀಕರಿಸಿದ್ದು, ವ್ಯಕ್ತಿಯೊಬ್ಬ ಸಮುದ್ರದಲ್ಲಿ ಅರ್ಧ ಮುಳುಗಿರುವ ವೋಕ್ಸ್ವ್ಯಾಗನ್ ಗಾಲ್ಫ್ ಕಾರನ್ನು ಉಳಿಸಿಕೊಳ್ಳವ ಪ್ರಯತ್ನಕ್ಕೆ ಮುಂದಾಗಿರುವುದು ಸೆರೆಯಾಗಿದೆ. ಸಮುದ್ರ ತಟದಲ್ಲಿ ನೀರಿನ ಹತ್ತಿರದಲ್ಲೇ ನಿಲ್ಲಿಸಿದ್ದ ಕಾರನ್ನು ಭಾರಿ ಗಾತ್ರದ ಅಲೆಯೊಂದು ಸಮುದ್ರದೊಳಗೆ ಎಳೆದೊಯ್ಯಿತು. ದುರಾದೃಷ್ಟಕರವೆಂದರೆ ಎಷ್ಟೇ ಪ್ರಯತ್ನ ಮಾಡಿದರೂ ಸಹ ಮಾಲೀಕ ತನ್ನ ಕಾರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾಗಿ ನಿಧಾನವಾಗಿಯೇ ನೀರಿನಲ್ಲಿ ಸಂಪೂರ್ಣ ಮುಳುಗಿತು. ಕೊನೆಗೂ ಕಾರು ಸಮುದ್ರಕ್ಕೆ ಆಹುತಿಯಾಯಿತು ಎಂದು ಡಾಲ್ಬಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಕೊನೆಗೂ ಕಾರು ಸಮುದ್ರಕ್ಕೆ ಆಹುತಿಯಾಯಿತು

Please follow and like us: