ನಾನು ಮತ್ತು ಚಿರಂಜೀವಿ ಸರ್ಜಾ ‘ರಣಂ’ ಸಿನಿಮಾದಲ್ಲಿ  ಒಟ್ಟಿಗೆ ನಟಿಸಿದ್ದೇವು.’ಸ್ನೇಹಿತ ಹಾಗೂ ನಟ ಚಿರು ಸರ್ಜಾ ಅವರ ಅಕಾಲಿಕ ಮರಣ ಅತೀವ ನೋವು ತಂದಿದೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚಿನಿಂದಲೂ ನಾವು ಒಬ್ಬರಿಗೊಬ್ಬರು ಬಲ್ಲವರಾಗಿದ್ದೆವು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು ಮತ್ತು ಕಾಳಜಿ ವಹಿಸುತ್ತಿದ್ದರು. ನಾವು ರಣಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಸಿನಿಮಾ ಬಿಡುಗಡೆ ಆಗಬೇಕಿದೆ. ತುಂಬ ಬೇಗ ನಮ್ಮನೆಲ್ಲ ಬಿಟ್ಟು ಹೋದಿರಿ ಸ್ನೇಹಿತ. ಮೇಘನಾ, ಧ್ರುವ, ಅರ್ಜುನ್‌ […]

ಮಂಡ್ಯದ ಮೈಶುಗರ್ ಕಾರ್ಖಾನೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾದರೆ ಹೋರಾಟ ನಡೆಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಟ್ವೀಟ್‌ ಮಾಡುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ಜನರಿಗೂ ಮೈಶುಗರ್ ಕಾರ್ಖಾನೆಗೂ ಇರುವ ಬಾಂಧವ್ಯದ ಬೆಸುಗೆ ಇಂದು ನಿನ್ನೆಯದಲ್ಲ. ಹೀಗಿರುವಾಗ ನ್ಯೂನತೆ ಸರಿಪಡಿಸಿ ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕು. ಅದನ್ನು ಬಿಟ್ಟು ಮಾರಾಟ ಮಾಡುವುದು ಸರಿಯಲ್ಲ. ಅದಕ್ಕೆ ಬಿಡುವುದೂ ಇಲ್ಲ. ಈ ವಿಚಾರದಲ್ಲಿ ಮಂಡ್ಯ […]

ಜೂನ್‌ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜನ ಖರ್ಗೆ  ಇಂದು  ನಾಮಪತ್ರ ಸಲ್ಲಿಸಿದರು. ವಿಧಾನಸಭಾ ಕಾರ್ಯದರ್ಶಿಗಳೂ ಆದ ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಅವರಿಗೆ ನಾಮಪತ್ರವನ್ನು ಖರ್ಗೆ ಸಲ್ಲಿಸಿದರು‌. ಮುಖಂಡರ ಜೊತೆಗೆ ಖರ್ಗೆ ಚರ್ಚೆಯನ್ನು ನಡೆಸಿದರು. ಇದಾದ ಬಳಿಕ ನಾಮಪತ್ರವನ್ನು ಸಲ್ಲಿಸಿದರು. ಈ ವೇಳೆ ರಾಜ್ಯ ವಿಧಾನ ಸಭೆಯಲ್ಲಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಿರಿಯ […]

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕರು ಒಂದು ಸಂದೇಶ ಕಳಿಸಿದ್ದಾರೆ ಎಂದು ರಾಜ್ಯಸಭಾ ಟಿಕೆಟ್​ ವಂಚಿತ ರಮೇಶ್ ಕತ್ತಿ ಇಂದು ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಎರಡು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದ್ದು, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿದ್ದೇವೆ ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್ ಕಳಿಸಿದೆ ಎಂದು ತಿಳಿಸಿದರು. ನಾನೂ ಕೂಡ ರಾಜ್ಯಸಭಾ ಟಿಕೆಟ್​ ಅಪೇಕ್ಷಿತನಾಗಿದ್ದೆ. ಪಕ್ಷಕ್ಕೆ ದುಡಿದ ನಮ್ಮ ಜಿಲ್ಲೆಯಯವರನ್ನೇ ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. […]

ನವದೆಹಲಿ:  ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ದೇಶದ ಹಲವೆಡೆ ಇಂದು ಕೆಲವು ಕಠಿಣ ನಿರ್ಬಂಧಗಳೊಂದಿಗೆ ದೇವಾಲಯಗಳು, ಹೋಟೆಲ್, ರೆಸ್ಟೋರೆಂಟ್‍ಗಳು ತೆರೆದಿವೆ.  ಆದರೆ, ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾಗಳು ಮತ್ತು ಹೋಟೆಲ್-ರೆಸ್ಟೋರೆಂಟ್‍ಗಳಿಗೆ ಬೀಗ ಮುದ್ರೆಗಳನ್ನು ಮುಂದುವರೆಸಲಾಗಿದೆ. ಇಂದಿನಿಂದ ದೇಶದ ಬಹುತೇಕ ನಗರಗಳ ಪ್ರಸಿದ್ಧ ದೇವಾಲಯಗಳಿಗೆ ಜನರು ತೆರಳಿ ಶ್ರದ್ಧಾಭಕ್ತಿಯಿಂದ ನಮನ ಸಲ್ಲಿಸಿದರು. ತೀರ್ಥ, ಪ್ರಸಾದದ ವಿನಿಯೋಗ ಮತ್ತು ಪವಿತ್ರಜಲ ಪ್ರೋಕ್ಷಣೆ ನಿರ್ಬಂಧಿಸಿದ ಕಾರಣ ಜನರು ದೇವರ ದರ್ಶನ ಮಾತ್ರ […]

ಮುಂಬೈ: ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಅಥವಾ ಗೃಹ ಸಾಲ ಪಡೆದು ಕೆಲವೇ ದಿನಗಳಾಗಿದ್ದು, ಕೋವಿಡ್​-19 ಹಿನ್ನೆಲೆಯಲ್ಲಿ ಉದ್ಯೋಗ ನಷ್ಟಕ್ಕೆ ಒಳಗಾದವರಿಗೆ ಬ್ಯಾಂಕ್​ಗಳೂ ಶಾಕ್​  ನೀಡುತ್ತಿದೆ.  ಕೊರೊನಾ  ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು, ಹಲವರ ವೇತನದಲ್ಲಿ ಗಣನೀಯ ಕಡಿತಗಳನ್ನು ಮಾಡಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ಗೃಹ ಸಾಲ ಕೇಳಿ ಅರ್ಜಿ ಸಲ್ಲಿಸಿದ್ದರೆ ಅಥವಾ ಹೊಸದಾಗಿ ಗೃಹ ಸಾಲ ಮಂಜೂರಾತಿ ಪಡೆದುಕೊಂಡವರಿಗೆ ಪ್ರಸಕ್ತ ತಿಂಗಳಿಣ […]

ಭುವನೇಶ್ವರ: ಒಡಿಶಾ ರಾಜ್ಯದ ಧೆಂಕನಾಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಎರಡು ಸೀಟ್​ಗಳ ವಿಮಾನವೊಂದು ನೆಲಕ್ಕುರುಳಿದೆ. ಈ ಘಟನೆಯಲ್ಲಿ ವಿಮಾನದೊಳಗಿದ್ದ ಮಹಿಳಾ ಪೈಲಟ್ ಹಾಗೂ ಆಕೆಯ ಟ್ರೈನರ್ ಸಾವನ್ನಪ್ಪಿದ್ದಾರೆ. ಪೈಲಟ್ ಆಗಿ ಆಯ್ಕೆಯಾಗಿದ್ದ ಮಹಿಳೆಗೆ ಧೆಂಕನಾಲ್​ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ವಿಮಾನ ಪತನಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಟ್ರೈನಿ ಪೈಲಟ್ ಆಗಿದ್ದ ಅನೀಸ್ ಫಾತಿಮಾಗೆ ಕ್ಯಾಪ್ಟನ್ ಸಂಜೀವ್ ಕುಮಾರ್ ತರಬೇತಿ ನೀಡುತ್ತಿದ್ದರು. […]

ಚಾಮರಾಜನಗರ: ಮೂವರು ವಿದೇಶಿಯರು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅರಣ್ಯದ ರಸ್ತೆಗಳಲ್ಲಿ ಸುತ್ತಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್​ಗಳಲ್ಲಿ ಬಂದಿದ್ದ ಅವರು ಅನುಮತಿಯಿಲ್ಲದೆ ಬಂಡೀಪುರ ಅರಣ್ಯ ಪ್ರವೇಶಿಸಿ ಸುತ್ತಾಡಿದ್ದಾರೆ. ಇವರನ್ನು ಅರಣ್ಯ ಸಿಬ್ಬಂದಿ ತಡೆದು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿ ರೇಗಾಡಿದ್ದಾರೆ. ಹೀಗಾಗಿ ಈ ಮೂವರನ್ನು ಅತಿಕ್ರಮಪ್ರವೇಶದ ಆರೋಪದ ಮೇರೆಗೆ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ. ಡಿ.ಆರ್.ಡಿ.ಓದಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಪೋರ್ಚುಗೀಸ್ ದೇಶದ […]

ಸಾಗರ: ಎರಡೂವರೆ ತಿಂಗಳ ನಂತರ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್‌ ಲಾಕ್‌ಡೌನ್‌ನ ಬಳಿಕ ಮತ್ತೆ ಜೋಗದಲ್ಲಿ ಪ್ರವಾಸಿಗರ ಸದ್ದು ಕೇಳುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗಕ್ಕೆ ರಾಜ್ಯದ ಅನೇಕ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ಲಾಕ್‌ಡೌನ್‌ನಿಂದ ಪ್ರವಾಸಿಗರಿಗೆ ನಿರ್ಬಂಧ ಇತ್ತು, ಆದರೆ, ಇಂದಿನಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಬಹುದಾಗಿದೆ. ಕೊರೊನಾ ವೈರಸ್ ನಿಂದಾಗಿ ಜೋಗದಲ್ಲಿಯೂ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಪ್ರವಾಸಿಗರು […]

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಕೇಜ್ರಿವಾಲ್ ಅವರು ಸ್ವತಃ ಐಸೋಲೇಷನ್ ನಲ್ಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನದ ವೇಳೆ ಕೇಜ್ರಿವಾಲ್ ಅವರಲ್ಲಿ ಜ್ವರ, ಗಂಟಲು ಕೆರೆತದಂತಹ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಐಸೋಲೇಷನ್ ನಲ್ಲಿದ್ದಾರೆಂದು ತಿಳಿದು ಬಂದಿದೆ. ವೈರಸ್ ಲಕ್ಷಣಗಳು ಕಂಡು ಬಂದ […]

Advertisement

Wordpress Social Share Plugin powered by Ultimatelysocial