ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊAಡಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಪರಿಣಾಮ ನೀರಿನ ಒಳಹರಿವು ಜೂನ್ ಮೊದಲ ವಾರದಲ್ಲೇ ಆರಂಭಗೊAಡಿದೆ. ಈಗಾಗಲೇ ೧೨.೭೬೧ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದರ ಜತೆಗೆ ಹಿಪ್ಪರಗಿ ಜಲಾಶಯದಿಂದ ೧೦ ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರದ ನೀರು ಕರ್ನಾಟಕಕ್ಕೆ ಬಂದು ಸೇರುವ […]

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣ ಇದೀಗ ಒಂದು ಗೀಳಾಗಿದೆ. ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ವಿರೋಧವಿದೆ. ಹೀಗಿದ್ದೂ ಜೂನ್ 8ರ ಸೋಮವಾರ ಆನ್ ಲೈನ್ ಶಿಕ್ಷಣದ ಬಗ್ಗೆ ಸಭೆ ನಡೆಸಿ ಚರ್ಚೆ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮಹತ್ವದ ನಿರ್ಧಾರ ಜೂನ್ 8ರಂದು ಆನ್ ಲೈನ್ ಶಿಕ್ಷಣದ ಬಗ್ಗೆ ಹೊರ ಬರಲಿದೆ. ರಾಜ್ಯದಲ್ಲಿ ಶಾಲೆಗಳು […]

ಮೈಸೂರು: ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಮನೆಯೊಂದರ ಬಳಿ ಹಾರುವ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆ ರಾಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಎಂಬುವರ ಮನೆ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಹಾರಿ ನೆಲಕ್ಕೆ ಬಿದ್ದು ಮತ್ತೆ ನೆಲದಿಂದ ಹಾರಿ ಮನೆಯ ಬಾಗಿಲಿಗೆ ಹಾವು ಜೋತು ಹಾಕಿಕೊಂಡಿದೆ. ಹಾರುವ ಹಾವನ್ನು ಕಂಡು‌ ಮನೆ ಮಂದಿ ಚಕಿತರಾಗಿದ್ದರು. ಬಳಿಕ ಹಾವು ಮನೆಯ ಪಕ್ಕದಲ್ಲಿ ಗಿಡಗಳ ಬಳಿಗೆ ಹೋಗಿದೆ. ಸಹಜವಾಗಿ […]

ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು ಹಾವು – ಇತರ ಪ್ರಾಣಿಗಳ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಚಾರ. ಆದರೆ ಹಾವಿನ ಮೇಲೆ ಕಪ್ಪೆ ಕುಳಿತು ಸವಾರಿ ಮಾಡುವ ಅಪರೂಪದ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ. ಭಾರತೀಯ ಅರಣ್ಯ ಸೇವೆ […]

ಇಲ್ಲೊಬ್ಬ ಮಹಾಶಯ ತನ್ನ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾಗಿದ್ದಾನೆ.ಕ್ವೀನ್ಸ್ ಲೆಂಡ್ ವ್ಯಕ್ತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಆತನ‌ ಪತ್ನಿ ಲಾಟರಿ ಟಿಕೆಟ್ ಖರೀದಿಸಿದ್ದಳು. ಆ ಟಿಕೆಟ್ ಗೆ ಬಂಪರ್ ಬಹುಮಾನ‌ ಬಂದಿದ್ದು, ಬರೋಬ್ಬರಿ 2.6 ಕೋಟಿ ಗಳಿಸಿದ್ದಾರೆ. ಪತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಚಿಪ್ಪಿಂಡಾಲ್ಸ್ ನ್ಯೂಸ್ ಏಜೆನ್ಸಿಯಿಂದ ಸೂಪರ್ ಲೊಟ್ಟೊ ಟಿಕೆಟ್ ಖರೀದಿಸಿದ್ದೆ, ಮೇ 30 ರಂದು ಡ್ರಾ ನಡೆಯಿತು ಎಂದು ಆಕೆ ಹೇಳಿಕೊಂಡಿದ್ದಾರೆ. ಟಿಕೆಟ್ ಪರಿಶೀಲಿಸಲು ನ್ಯೂಸ್ ಏಜೆನ್ಸಿಗೆ […]

ನವದೆಹಲಿ : ಲಾಕ್ ಡೌನ್ ನಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಕಾರಣದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಆತ್ಮ ನಿರ್ಭರ್ ಭಾರತ ಅಡಿ ಯೋಜನೆಗಳನ್ನು ಮಾತ್ರವೇ ಆರಂಭಿಸಬೇಕು. ಇತರೆ ಬೇರಾವುದೇ ಯೋಜನೆಗಳನ್ನು ಆರಂಭಿಸದಂತೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಹೊಸ ಯೋಜನೆಗಳಿಗೆ ಬ್ರೇಕ್ ಹಾಕಿದೆ. ದೇಶದಲ್ಲಿ ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಯಾವುದೇ ಹೊಸ ಯೋಜನೆ ಜಾರಿ […]

ಭಾರತದಲ್ಲಿ ಮನೆಮಾತಾಗಿದ್ದ ಖ್ಯಾತ ‘ಅಟ್ಲಾಸ್’ ಸೈಕಲ್ ತಯಾರಕಾ ಕಂಪನಿ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ಬಾಗಿಲು ಮುಚ್ಚಿದೆ. ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಭಾರೀ ನಷ್ಟದ ಹಿನ್ನೆಲೆಯಲ್ಲಿ ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ್ದರಿಂದ ಸಾವಿರಕ್ಕೂ ಹೆಚ್ಚು ಮಂದಿ ನೌಕರರು ಬೀದಿಗೆ ಬಂದಿದ್ದಾರೆ. ಭಾರತದ ಅತೀ ದೊಡ್ಡ ಸೈಕಲ್ ತಯಾರಿಕಾ ಕಂಪೆನಿ ಎಂದು ಹೆಸರು ಮಾಡಿದ್ದಅಟ್ಲಾಸ್ ದೇಶದ ಬಹುತೇಕ ಮನೆಗಳಲ್ಲಿ ಇತ್ತು. ಕೋವಿಡ್ 19 ಲಾಕ್‍ಡೌನ್ ಘೋಷಣೆ […]

ನ್ಯೂಯಾರ್ಕ್: 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಕಾರಣವಾಗಿದೆ. ಈ ನಡುವೆ ಮೃತ ಫ್ಲಾಯ್ಡ್ ರ ಪುಟ್ಟ ಮಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದನ್ನು ನೋಡಿ ಹಲವು ಕಣ್ಣೀರು ಹಾಕಿದ್ದಾರೆ. ಫ್ಲಾಯ್ಡ್ ರ ಆತ್ಮೀಯ ಗೆಳೆಯ, ರಾಷ್ಡ್ರೀಯ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಪನ್ ಜಾಕ್ ಸನ್ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋವನ್ನು 1.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಬಾಲಕಿ ಜಾಕ್ […]

ಡರ್ ಕೆ ಆಗೆ ಜೀತ್ ಹೆ ಎಂಬುದು ಜಾಹೀರಾತೊಂದರ‌ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ.‌ ತೆಲಂಗಾಣದಿಂದ ಟ್ವಿಟರ್ ನಲ್ಲಿ ಅಪ್ ಲೋಡ್ ಆದ ಅಪರೂಪ, ಅಪಾಯಕಾರಿ ಸಾಹಸದ‌ ವಿಡಿಯೋ ಒಂದು ನೆಟ್ಟಿಗರನ್ನು ತಲ್ಲಣಗೊಳಿಸಿದೆ. ತೆಲಂಗಾಣದ ನಿಜಾಂಪುರದಲ್ಲಿ ಘಟನೆ ನಡೆದಿದ್ದು, ನೂರ್ ಸಾವನ್ನೇ ಹೆದರಿಸಿ ಸಾಹಸ ಮಾಡಿದ ಭೂಪ.‌ ಅರ್ಷದ್ ಎಂಬವರು ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.ವಿದ್ಯುತ್ […]

ರಾಣಿಖೇತ್​: ಸಾಮಾನ್ಯವಾಗಿ ಕೊತ್ತಂಬರಿ ಗಿಡ ಒಂದರಿಂದ ಮೂರು ಅಡಿ ಎತ್ತರ ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ 7 ಅಡಿ ಉದ್ದ ( 2.16 ಮೀಟರ್​) ಕೊತ್ತಂಬರಿ ಗಿಡ ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಉತ್ತರಾಖಂಡದ ರಾಣಿಖೇತ್​ನ ರೈತ ಗೋಪಾಲ್​ ದತ್​​ ಈ ಸಾಧನೆ ಮಾಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿ ಮೂಲಕ 2.16 ಮೀಟರ್​ ಉದ್ಧವಾದ ಕೊತ್ತಂಬರಿ ಗಿಡ ಬೆಳೆಸಿದ್ದು, ಗಿನ್ನಿಸ್​ ಬುಕ್​ ಆಫ್​ ವರ್ಲ್ಡ್​ […]

Advertisement

Wordpress Social Share Plugin powered by Ultimatelysocial