ಕೊರೊನಾದಿಂದ ಹೆಚ್ಚಿದ ಬಡತನ

ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್‌ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನು ಆರು ತಿಂಗಳು ಒಂದಲ್ಲಾ ಒಂದು ರೀತಿಯ ನಿರ್ಬಂಧ ಮುಂದುವರೆಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ.
ಕರೊನಾಗೂ ಮುನ್ನ ವಿಶ್ವದಲ್ಲಿ ೧೩ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ, ಕರೊನಾ ನಂತರದಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಲಿದೆ. ಅಂದರೆ ೨೬ ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ ಸಹಾಯ ಹಸ್ತ ಚಾಚಲಿಕ್ಕಾಗದ ಅಸಹಾಯಕ ಸರ್ಕಾರಗಳಿರುವ ರಾಷ್ಟಗಳಲ್ಲಿ ಪರಿಸ್ಥಿತಿ ಇನ್ನೂ ವಿಷಮಿಸಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಬದುಕಲು ನಿತ್ಯವೂ ಹೋರಾಟ ಮಾಡುತ್ತಿರುವವರು, ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವವರು ಅದನ್ನೂ ಕೂಡ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಆಹಾರ ಯೋಜನೆಯ ಆರ್ಥಿಕ ತಜ್ಞ ಆರೀಫ್ ಹುಸೇನ್ ತಿಳಿಸಿದ್ದಾರೆ. ಇದಕ್ಕಾಗಿ ಎಲ್ಲ ರಾಷ್ಟಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಇದಕ್ಕಾಗಿ ಭಾರಿ ಬೆಲೆಯನ್ನೇ ತೇರಬೇಕಾಗುತ್ತದೆ ಜಾಗತಿಕವಾಗಿ ಇದರಿಂದಾಗುವ ನಷ್ಟ ಇನ್ನೂ ಹೆಚ್ಚಿನದು ಎಂದು ಎಚ್ಚರಿಕೆ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಟ್ರಾಫಿಕ್ ಪೊಲೀಸರಿಗೆ ಕೊರೊನಾ ತಪಾಸಣೆ

Thu Apr 23 , 2020
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಟ್ರಾಫಿಕ್ ಪೋಲಿಸರು ಚೆಕ್ ಪೋಸ್ಟ್ಗಳಲ್ಲಿ ಬರುವ ಎಲ್ಲಾ ವಾನಗಳನ್ನು ತಪಾಸಣೆ ಮಾಡುತ್ತಾರೆ. ಪ್ರತಿನಿತ್ಯ ರೋಡ್‌ನಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಟ್ರಾಫಿಕ್ ಪೋಲಿಸರ ಆರೋಗ್ಯ ದೃಷ್ಠಿಯಿಂದ ಪೋಲಿಸ್ ಇಲಾಖೆ ಹಾಗೂ ಅಪೊಲೊ ಆಸ್ಪತ್ರೆಯ ಸಹಯೋಗದೊಂದಿಗೆ ಹೈಗ್ರೌಂಡ್ಸ್ ಪೋಲಿಸ್ ಸಿಬ್ಬಂದಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು. Please follow and like us:

Advertisement

Wordpress Social Share Plugin powered by Ultimatelysocial