ಗ್ರೀನ್ ಜೋನ್ ನಲ್ಲಿ  ವಾಣಿಜ್ಯ ವಹಿವಾಟು ನಡೆಸಲು ಅನುಮತಿ

ಧಾರವಾಡ ಜಿಲ್ಲೆಯಲ್ಲಿ ಸೋಮವಾರದಿಂದ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು,ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದೆ. ಸೋಮವಾರದಿಂದ ಸೀಲ್‌ಡೌನ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ವಹಿವಾಟು ನಡೆಸಲು ಆದೇಶ ಹೊರಡಿಸಲಾಗುವುದು. ಮಾಲ್, ಮಾರುಕಟ್ಟೆ ಸಂಕೀರ್ಣ, ಬಾರ್ ಅಂಡ್ ರೆಸ್ಟೋರೆಂಟ್, ಜಿಮ್, ಧಾರ್ಮಿಕ ಚಟುವಟಿಕೆಗಳು, ಸಭೆ ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.25ರಷ್ಟು ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿದೆ ಎಂದು ಹೇಳಿದರು.

ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಗರ್ಲ್ಫ್ರೆಂಡ್ ಜೊತೆ ಸಲ್ಮಾನ್ ಲವ್ವಿ-ಡವ್ವಿ

Sun May 10 , 2020
ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿ ಸಿಲ್‌ಡೌನ್ ಆಗಿದ್ದಾರೆ. ಹೀಗಿರುವಾಗ ಸಲ್ಮಾನ್ ಖಾನ್ ಒಡೆತನದ ಪಾನ್‌ವೆಲ್ ಫಾರ್ಮ್ಹೌಸ್‌ನಲ್ಲಿ ಕಳೆದ ಹಲವು ದಿನಗಳಿಂದ ಜಾಕ್‌ಲೀನ್ ಫರ್ನಾಂಡೀಸ್ ಮತ್ತು ಲೂಲಿಯಾ ವೆಂಚರ್ ಠಿಕಾಣಿ ಹೂಡಿದ್ದಾರೆ. ಕೇವಲ ಜಾಕ್‌ಲೀನ್ ಅಷ್ಟೇ ಸಲ್ಮಾನ್ ಜೊತೆಗಿಲ್ಲ. ಈ ಹಿಂದೆ ಸಲ್ಮಾನ್ ಪ್ರೇಯಸಿ ಎಂದೇ ಹೇಳಲಾಗುತ್ತಿದ್ದ, ಲೂಲಿಯಾ ವೆಂಚರ್ ಸಹ ಫಾಮ್‌ಹೌಸ್‌ನಲ್ಲಿ ತಂಗಿದ್ದಾರೆ. ಅಲ್ಲಿ ಕುದುರೆಗಳ ಮೇಲೆ ಸವಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಲಾಕ್‌ಡೌನ್ ಸಮಯವನ್ನು ಒಂದು ರೀತಿ ಜಾಲಿ ಟ್ರಿಪ್ ಎಂಬAತೆ […]

Advertisement

Wordpress Social Share Plugin powered by Ultimatelysocial