ಜಿ7 ಶೃಂಗಸಭೆ ಸೆಪ್ಟೆಂಬರ್ ಗೆ ಮುಂದೂಡಿದ ಅಮೆರಿಕ

ಜಿ7 ಶೃಂಗ ಸಭೆ ಇದೇ ಜೂನ್ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭಿತೀ ಹಿನ್ನಲೇಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ ಗೆ ಮುಂದೂಡಿದ್ದಾರೆ, ಪ್ರತಿವರ್ಷ ಜಿ7 ಶೃಂಗಸಭೆಯಲ್ಲಿ ಬ್ರಿಟನ್​, ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​ ಮತ್ತು ಅಮೆರಿಕ ಪಾಳ್ಗೊಳ್ಳುತ್ತಿತ್ತು. ಆದರೆ ಈಗ ಜಿ-7 ಶೃಂಗ ದೇಶಗಳೊಂದಿಗೆ ವಿಶ್ವದಅರ್ಥಿಕತೆಯಲ್ಲಿ ಸ್ಥಾನ ಪಡೆದಿರುವ ಭಾರತ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾವನ್ನ ಮತ್ತಿತರ ಕೆಲವು ರಾಷ್ಟ್ರಗಳನ್ನೂ ಈ ಸಭೆಯಲ್ಲಿ ಭಾಗವಹಿಸುವಂತೆ ಟ್ರಂಪ್‍ಆಹ್ವಾನ ನೀಡಿದ್ದಾರೆ. ಈ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ವಿಶ್ವದಾದ್ಯಂತ ಇರುವ ಪರಿಸ್ಥಿತಿಯನ್ನ ಜಿ7 ಸರಿಯಾಗಿ ಪ್ರತಿನಿಧಿಸುತ್ತಿದೆ ಅಂತ ನನಗೆ ಅನ್ನಿಸುತ್ತಿಲ್ಲ, ಹೀಗಾಗಿ ಶೃಂಗಸಭೆಯನ್ನು ಸೆಪ್ಟೆಂಬರ್ ಗೆ ಮುಂದೂಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತಾಜ್ ಮಹಲ್ ಗೆ ಹಾನಿ

Sun May 31 , 2020
ಉತ್ತರ ಪ್ರದೇಶದ ಹಲವೆಡೆ ಭಾರಿ ಗುಡುಗು ಮಳೆಯಾಗಿದ್ದ, ಪರಿಣಾಮ ಸಿಡಿಲು ಬಡಿದು ವಿಶ್ವ ವಿಖ್ಯಾತವಾದ ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಗೆ ಹಾನಿಯಾದ ಘಟನೆ ನಡೆದಿದೆ.. ಐತಿಹಾಸಿಕ ತಾಜ್‌ ಮಹಲ್‌ನ ಅಮೃತ ಶಿಲೆಯ ಅಡ್ಡಕಂಬಿಗಳಿಗೆ ಹಾನಿಯಾಗಿದೆ. ಭಾರಿ ಮಳೆಗೆ ಆಗ್ರಾದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವಾರು ಪ್ರಾಣಿಗಳು ಮೃತಪಟ್ಟಿವೆ. ಗುಡುಗು ಸಹಿತ ಭಾರೀ ಮಳೆಗೆ ತಾಜ್ ಮಹಲ್ ನ ಒಂದು ಬಾಗಿಲು ಹಾನಿಗೀಡಾಗಿದ್ದು ಆವರಣದಲ್ಲಿ ಸುತ್ತಲು ಕೆಲ […]

Advertisement

Wordpress Social Share Plugin powered by Ultimatelysocial