ಧರ್ಮವನ್ನು ಬದಿಗಿಟ್ಟು, ಪ್ಲಾಸ್ಮಾ ದಾನ ಮಾಡಿ : ಕೇಜ್ರಿವಾಲ್

ಕೊರೊನಾ ವೈರಸ್ ಕಾಯಿಲೆಯಿಂದ ಗುಣಮುಖರಾಗಿರುವವರು ಧರ್ಮವನ್ನು ಬದಿಗಿಟ್ಟು, ಮುಂದೆ ಬಂದು ಕೊರೊನಾ ಪೀಡಿತರಿಗೆ ಪ್ಲಾಸ್ಮಾ ದಾನ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿನಲ್ಲಿ ಮಾತನಾಡಿದ ಅವರು, ರಕ್ತದ ಪ್ಲಾಸ್ಮಾ ಧರ್ಮದ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಹಿಂದೂ ವ್ಯಕ್ತಿಯ ಪ್ಲಾಸ್ಮಾ ಮುಸ್ಲಿಂ ರೋಗಿಯನ್ನು ಉಳಿಸಬಹುದು ಮತ್ತು  ಮುಸ್ಲಿಂ ರೋಗಿಯ ಪ್ಲಾಸ್ಮಾ ಹಿಂದೂ ವ್ಯಕ್ತಿಯನ್ನು ಉಳಿಸಬಹುದು.’ಮುಂದೆ ಬಂದು ಪ್ಲಾಸ್ಮಾವನ್ನು ದಾನ ಮಾಡಿ. ನಾವೆಲ್ಲರೂ ಕರೋನವೈರಸ್ ನಿಂದ ಚೇತರಿಸಿಕೊಂಡೂ ನಾಳೆಗೆ ಹೊಸ ಬದುಕನ್ನು ಕಟ್ಟಲು ಬಯಸುತ್ತೇವೆ, ಆದುದರಿಂದ ಒಬ್ಬರಿಗೊಬ್ಬರು ಸಹಾಯ ಮಾಡಿ.  ಒಬ್ಬ ಹಿಂದೂ ಗಂಭೀರವಾಗಿದ್ದರೆ, ಮುಸ್ಲಿಂ ವ್ಯಕ್ತಿಯ ಪ್ಲಾಸ್ಮಾ ಅವನನ್ನು ಉಳಿಸಬಹುದು ಅದೇ ರೀತಿ ಮುಸ್ಲಿಂ ರೋಗಿಯು ಗಂಭೀರವಾಗಿದ್ದರೆ, ಹಿಂದೂ ವ್ಯಕ್ತಿಯ ಪ್ಲಾಸ್ಮಾ ಅವನನ್ನು ಉಳಿಸುತ್ತದೆ . ಆದುದರಿಂದ ಧರ್ಮವನ್ನು ಲೆಕ್ಕಿಸದೆ ಪ್ಲಾಸ್ಮಾ ನೀಡಿ ಎಂದು ಹೇಳಿದರು.

 

 

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಮುಂದುವರೆಸಿ ಸರ್ಕಾರಕ್ಕೆ ಮನವಿ

Sun Apr 26 , 2020
ದೆಹಲಿ: ಎರಡನೇ ಹಂತದಲ್ಲಿ ಲಾಕ್‌ಡೌನ್ ಮುಂದುವರೆಸಿದರು ಸಹಿತ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿಲ್ಲ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅರವಿಂದ ಕೇಜ್ರಿವಾಲ್ ಸರ್ಕಾರ ಕೂಡ ಮೇ ೧೮ರವೆಗೆ ಲಾಕ್‌ಡೌನ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.  ದೆಹಲಿ ಸರ್ಕಾರದಂತೆ ಮಹಾರಾಷ್ಟç, ಮಧ್ಯಪ್ರದೇಶ, ಬಂಗಾಳ, ಪಂಜಾಬ್ ಮತ್ತು ಓಡಿಶಾ ಈ ೫ ರಾಜ್ಯಗಳು ಕೂಡಾ ಲಾಕ್‌ಡೌನ್ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. Please follow and […]

Advertisement

Wordpress Social Share Plugin powered by Ultimatelysocial