ಪಾದರಕ್ಷೆಗಳೊಂದಿಗೆ ಸುಖಿಸುತ್ತಿದ್ದ  ವಿಕೃತ ಕಾಮಿ ಅರೆಸ್ಟ್

ಥಾಯ್ಲೆಂಡ್ : ಥಾಯ್ಲೆಂಡ್ ನ 24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ ಚಪ್ಪಲಿ ಕದಿಯುತ್ತಾನೆಂದು ಕಾರಣ ಕೇಳಿ ಪೊಲೀಸರು  ದಂಗಾಗಿದ್ದಾರೆ. ಆತನ ಮನೆಯನ್ನು ನೋಡಿದ ಪೊಲೀಸರಿಗೆ ಆಶ್ಚರ್ಯ ಒಂದು  ಕಾದಿತ್ತು.  ಆತ ಕಳೆದ ಎರಡು ವರ್ಷಗಳಿಂದ ನೆರೆಹೊರೆಯವರ ಮನೆಗಳಿಂದ ಕದ್ದಿದ್ದ ಚಪ್ಪಲಿಗಳನ್ನು ಕೂಡಿಟ್ಟಿದ್ದ. ಅಲ್ಲಿ ವಿಭಿನ್ನ ಬಣ್ಣದ, ವಿಭಿನ್ನ ಬ್ರಾಂಡ್ ಗಳ ಪಾದರಕ್ಷೆ ಇದ್ದವು. ಆಘಾತಕಾರಿ ಎಂದರೆ ಲೈಂಗಿಕ ತೃಷೆಗಾಗಿ ಈ ಕಳ್ಳ ಕದ್ದ ಪಾದರಕ್ಷೆಗಳಿಗೆ, ಮುತ್ತಿಟ್ಟು ಅಪ್ಪಿ ಮುದ್ದಾಡುತ್ತ ವಿಲಕ್ಷಣವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಮನೆಯಲ್ಲಿ 126 ಜತೆ ಪಾದರಕ್ಷೆ ಸಿಕ್ಕಿದೆ. ಚಪ್ಪಲಿ ಕದ್ದ ಆರೋಪದ ಜೊತೆಗೆ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಮೂರು ಪ್ರಕರಣಗಳನ್ನು ಆತನ ಮೇಲೆ ದಾಖಲಿಸಿಕೊಳ್ಳಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

 ಗ್ರೇನೆಡ್ ನಿಂದ ಮಗುವನ್ನು ಕಾಪಾಡಿದ ತಂದೆ

Thu May 28 , 2020
ಆಮೆಯ ಮೇಲ್ಮೈ ಚಿಪ್ಪು ಹಾಗೂ ಗ್ರೆನೇಡ್ ಒಂದೇ ರೀತಿ ಇರುತ್ತದೆ. ಹೀಗೆ ತನ್ನ ಕಣ್ಣ ಮುಂದೆ ಕಾಣಿಸಿದ್ದು ಆಮೆ ಎಂದು ಐದು ವರ್ಷದ ಮಗು ಅದನ್ನೆತ್ತಿಕೊಳ್ಳಲು ಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆ ಮಗುವಿನ ತಂದೆ ಮಾಜಿ ಸರ್ಕಸ್ ಪ್ರದರ್ಶಕ ಲೂಯಿ ಲೋಮಸ್ ಅವರು ಅನುಮಾನ ಬಂದು ಅದನ್ನು ತೆಗೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ ಸಹಾಯಕ್ಕೆ ಮೊರೆ ಇಟ್ಟರು. ಪೊಲೀಸರು ಅದನ್ನು ಪರಿಶೀಲಿಸಿದಾಗ ಅದು ಆಮೆಯಲ್ಲ, […]

Advertisement

Wordpress Social Share Plugin powered by Ultimatelysocial