ಪ್ರವಾಸೋದ್ಯಮಕ್ಕೆ ೮೦% ರಷ್ಟು ಆದಾಯ ಇಳಿಕೆ

ಮ್ಯಾಡ್ರಿಡ್: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. ೬೦ರಿಂದ ೮೦ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ ೧೯೫೦ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. ೨೨ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಮಾರ್ಚ್ ಒಂದರಲ್ಲೇ ಶೇ. ೫೭ರಷ್ಟು ಕುಸಿಯಿತು. ಈ ಪೈಕಿ ಏಷ್ಯಾ ಹಾಗೂ ಯುರೋಪ್ ಖಂಡಗಳಿಗೆ ಅತ್ಯಂತ ಹೆಚ್ಚು ನಷ್ಟವಾಗಿದೆ ಎಂದು ತಿಳಿಸಲಾಗಿದೆ. ಇಡೀ ಜಗತ್ತು ಎಂದೂ ಕಾಣದಂಥ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಸಂಸ್ಥೆಯ ಸೆಕ್ರೆಟರಿ ಜನರಲ್ ಜೂರಬ್ ಪೊಲೊಲಿಕಶ್ವಿಲಿ ಹೇಳಿದ್ದಾರೆ. ನಾಗರಿಕ ವಿಮಾನ ಯಾನ ಸಂಸ್ಥೆಗಳು, ವೈಭವೋಪೇತ ಹಡಗುಗಳ ಆಯೋಜಕರು, ಹೋಟೆಲ್ ಸಮೂಹಗಳು ಹಾಗೂ ಪ್ರವಾಸ ಆಯೋಜಕರು ಬಹಳ ನಷ್ಟವನ್ನು ಅನುಭವಿಸುವಂತಾಗಿದೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರ ಶೇ. ೩-೪ರಷ್ಟು ಅಭಿವೃದ್ಧಿ ಕಾಣಬಹುದು ಎಂದು ಈ ಮೊದಲು ಅಂದಾಜಿ ಸಲಾಗಿತ್ತಾದರೂ ಪ್ರಸ್ತುತ ಶೇ. ೨೦-೩೦ರಷ್ಟು ಕುಸಿತದ ಭೀತಿ ಎದುರಾಗಿದೆ. ಒಂದುವೇಳೆ ಜುಲೈ ವೇಳೆಗೆ ಪರಿಸ್ಥಿತಿ ಸರಿಯಾದರೆ ಶೇ. ೫೮ರಷ್ಟು ಕುಸಿತಕ್ಕೆ ಒಳಗಾಗಬಹುದು ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಾಲೂರಿನಿಂದ ಬಿಹಾರಿಗೆ ಹೊರಟ ರೈಲು

Fri May 8 , 2020
ಲಾಕ್‌ಡೌನ್‌ನಿಂದ ಕಾರ್ಮಿಕರ ಜೀವನ ಸಂಕಷ್ಟಕ್ಕೀಡಾಗಿದೆ. ಊರು ಬಿಟ್ಟು ರಾಜಧಾನಿಗೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಜೀವನ ಸಾಗಿಸಲು ಕಷ್ಟ ಬಂದೋದಗಿದೆ. ಚಾಮರಾಜಪೇಟೆಯಲ್ಲಿ ಬಿಹಾರಿ ಕಾರ್ಮಿಕರ ದಂಡು ಊರಿಗೆ ತೆರಳಲು ಪರಿತಪಿಸುತ್ತಿದ್ದಾರೆ. ಸರ್ಕಾರದಿಂದ ಇಂದು ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ೪೦ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ರಾಜಧಾನಿಯಿಂದ ಮಾಲೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಿಗೆ ಮಾಲುರಿನಿಂದ ವಿಶೇಷ ರೈಲು ಮೂಲಕ ಬಿಹಾರಿಗೆ ಕಳುಹಿಸಲಾಗುತ್ತಿದೆ. Please follow […]

Advertisement

Wordpress Social Share Plugin powered by Ultimatelysocial