70 ರೂಪಾಯಿ ಬಸ್ ಪಾಸ್ ಗೆ ಕಂಗಾಲಾಗಿದ್ದ ಜನತೆ ಈ ಸುದ್ದಿಯಿಂದ ಖುಷಿ ಪಡುವಂತಾಗಿದೆ. ಬಿಎಂಟಿಸಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ನೋಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ. ಇಂದು ಆರು ಬಗೆಯ ಪಾಸ್ ವಿತರಿಸುವಂತೆ ಲಕ್ಷ್ಮಣ ಸವದಿ ಘೋಷಣೆ ಹೊರಡಿಸಿದ್ದಾರೆ. ಹೊಸದಾಗಿ 5,10,15,20, ರೂಪಾಯಿಗಳ ಪಾಸ್ ವಿತರಿಸುವಂತೆ ಅಗ್ರಹಿಸಿದ್ದಾರೆ. 70 ರೂಪಾಯಿಯ ದಿನದ ಪಾಸ್ 50 ರೂ ಗೆ ನೀಡುವಂತೆ ಹೇಳಿದ್ದಾರೆ. ನೂತನ ಬಸ್ ಪಾಸ್ ದರ ತಕ್ಷಣದಿಂದಲೇ ಜಾರಿಯಾಗಬೇಕೆಂದು ಸವದಿ ಘೋಷಿಸಿದ್ದಾರೆ. 2 ಕಿಮೀ 5ರೂ, 3 -4 ಕಿಮೀ ವರೆಗೆ 10ರೂ, 5.0ಯಿಂದ 6.0ಕಿಮೀ ವರೆಗೆ 15 ರೂ, 7.0 ಯಿಂದ 14.0ಕಿಮೀ ವರೆಗೆ 20 ರೂ, 15ರಿಂದ 40 ಕಿಮೀಗೆ 25 ರೂ, 41 ಕಿಮೀಗಿಂತ ಹೆಚ್ಚು ಇದ್ದರೆ 45ಕ್ಕೆ ದರ ನಿಗದಿಪಡಿಸಲಾಗಿದೆ.
ಬಿಎಂಟಿಸಿ ಸುಲಿಗೆಗೆ ಬ್ರೇಕ್

Please follow and like us: