ಬಿಳಿ ಬಣ್ಣದ ಅಪರೂಪದ ಹೆಬ್ಬಾವು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳಕಟ್ಟೆ ಎಂಬಲ್ಲಿ ಬಿಳಿ ಬಣ್ಣದ ಅಪರೂಪದ ಆಲ್ಟಿನೊ ಹೆಬ್ಬಾವು ಕಾಣಿಸಿಕೊಂಡಿದೆ. ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಸಿಕೊಂಡಿದ್ದು, ನಂತರ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಲಾಯಿತು. ಅವರು ಕೂಡಲೇ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ ಅದೇಶದಂತೆ ಪಿಲಿಕುಳಕ್ಕೆ ನಿಸರ್ಗ ಧಾಮಕ್ಕೆ ನೀಡಿದ್ದಾರೆ. ಇಂತಹ ಬಿಳಿ ಬಣ್ಣದ ಉರಗಗಳು ಬಲು ಅಪರೂಪವಾಗಿ ಕಾಣಸಿಗುತ್ತವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಎರಡನೇ ಹಾವು ಸಿಕ್ಕಿರುವುದು. ಹೆಚ್ಚು ಕಡಿಮೆ ೨೦ ಸಾವಿರ ಉರಗಗಳ ಜನನದಲ್ಲಿ ಒಂದು ಮಾತ್ರ ಇಂತಹ ಬಿಳಿ ಬಣ್ಣದ ಹಾವು ಜನನವಾಗುತ್ತದೆ. ಈ ಜೀವಗಳು ಹುಟ್ಟುವಾಗ ಚರ್ಮದ ವರ್ಣದ್ರವ್ಯದ  ಕೊರತೆ ಯಿಂದ ಹುಟ್ಟುತ್ತವೆ . ಅದರಿಂದ ಇಂತಹ ಜೀವಿಗಳಿಗೆ ಆಲ್ಟಿನೊ ಎನ್ನುತ್ತಾರೆ . ಇಂತಹ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಯಾಕೆಂದರೆ ಉಳಿದ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಆದರೆ ಈ ಹಾವು ಮಾತ್ರ ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಕಿರಣ್.

Please follow and like us:

Leave a Reply

Your email address will not be published. Required fields are marked *

Next Post

ಗಿನ್ನಿಸ್ ದಾಖಲೆ ಬರೆದ ಕೊತ್ತಂಬರಿ ಗಿಡ

Fri Jun 5 , 2020
ರಾಣಿಖೇತ್​: ಸಾಮಾನ್ಯವಾಗಿ ಕೊತ್ತಂಬರಿ ಗಿಡ ಒಂದರಿಂದ ಮೂರು ಅಡಿ ಎತ್ತರ ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ 7 ಅಡಿ ಉದ್ದ ( 2.16 ಮೀಟರ್​) ಕೊತ್ತಂಬರಿ ಗಿಡ ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಉತ್ತರಾಖಂಡದ ರಾಣಿಖೇತ್​ನ ರೈತ ಗೋಪಾಲ್​ ದತ್​​ ಈ ಸಾಧನೆ ಮಾಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿ ಮೂಲಕ 2.16 ಮೀಟರ್​ ಉದ್ಧವಾದ ಕೊತ್ತಂಬರಿ ಗಿಡ ಬೆಳೆಸಿದ್ದು, ಗಿನ್ನಿಸ್​ ಬುಕ್​ ಆಫ್​ ವರ್ಲ್ಡ್​ […]

Advertisement

Wordpress Social Share Plugin powered by Ultimatelysocial