ಲಾಕ್‌ಡೌನ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌರ‍್ಗಳು,ಗಾಯದ ಸಮಸ್ಯೆಯಿಂದ ಪಾರಾಗಲು ಕನಿಷ್ಠ ಎರಡು ಅಥವಾ ಮೂರು ತಿಂಗಳು ಅಭ್ಯಾಸ ನಡೆಸಬೇಕಾಗುತ್ತದೆ ಎಂದು ಅಂತರಾಷ್ಟಿçಯ ಕ್ರಿಕೆಟ್ ಮಂಡಳಿ ಹೇಳಿದೆ. ವಿಶ್ವಮಟ್ಟದ ಬೇರೆ ಕ್ರೀಡೆಗಳಂತೆಯೇ ಕ್ರಿಕೆಟ್ ಆಡುವುದನ್ನೂ ಕಳೆದ ಮಾರ್ಚ್ನಿಂದ ನಿಲ್ಲಿಸಲಾಗಿದೆ. ಆದರೆ, ಕೆಲವು ದೇಶಗಳ ಕ್ರೀಡೆಗಳ್ಳನ್ನು ಮುಂದುವರಿಸಲು, ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿ ಕೆಲ ಮಾರ್ಗ ಸೂಚಿಗಳನ್ನು ಹೊರಡಿಸಿವೆ. ಇಂಗ್ಲೆAಡ್‌ನಲ್ಲಿ ಕ್ರಿಕೆಟಿಗರು ಕೌಶಲ್ಯಾಧಾರಿತ ಪ್ರತ್ಯೇಕ ಅಭ್ಯಾಸಗಳನ್ನು ಈ ವಾರದಿಂದ ಆರಂಭಿಸಿದ್ದಾರೆ. ಕೆಲ ಕ್ರಿಕೆಟ್ ಮಂಡಳಿಗಳು ಕೋವಿಡ್-೧೯ ನಿಂದಾಗಿ ಮುಂದೂಡಲಾಗಿರುವ ಸರಣಿಗಳನ್ನು ಮುಂದುವರಿಸುವ ಯೋಜನೆಯಲ್ಲಿದೆ. ಸೊಂಕು ಹರಡುವ ಭೀತಿಯಿಂದ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಇದ್ದಕೆ ಸಂಬAಧಿಸಿದ್ದಾAತೆ ಐಸಿಸಿ ಪ್ರಕಟಿಸಿರುವ “ಮರಳಿ ಕ್ರೀಡಾಂಗAಣಕ್ಕೆ” ಮಾರ್ಗಸೂಚಿಯಲ್ಲಿ ಲಾಕ್‌ಡೌನ್ ಬಳಿಕ ಆಟಕ್ಕೆ ಮರಳುವುದುರಿಂದ ವಿಶೇಷವಾಗಿ ಬೌಲರ್‌ಗಳು ಗಾಯದ ಸಮಸ್ಯೆಗೆ ತುತ್ತಾಗಲಿದ್ದಾರೆ . ಹಾಗೆ ತಂಡದಲ್ಲಿ ಹೆಚ್ಚು ಆಟಗಾರರು ಇರುವಂತೆ ನೋಡಿಕೊಳ್ಳಬೇಕು. ಬೌರ‍್ಗಳ ಮೇಲಿನ ಜವಾಬ್ದಾರಿಯ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಕನಿಷ್ಠ ೪-೫ ವಾರಗಳ ನಿಕಟ ಅಭ್ಯಾಸದೊಂದಿಗೆ ೧೨ ವಾರಗಳ ಸಿದ್ದತೆ ಅಗತ್ಯ. ಏಕದಿನ ಮತ್ತು ಟಿ೨೦ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌಲರ್‌ಗಳು ಕನಿಷ್ಠ ಆರು ವಾರ ಅಭ್ಯಾಸ ನಡೆಸಬೇಕು ಎಂದೂ ಸಲಹೆ ನೀಡಿದ್ದಾರೆ.
ಬೌಲರ್‌ಗಳಿಗೆ ಕನಿಷ್ಠ ೨ ತಿಂಗಳು ಅಭ್ಯಾಸ ಅವಶ್ಯಕತೆ..

Please follow and like us: