ಭಕ್ತರಿಗಾಗಿ ತೆರೆಯಲಿದೆ ಶಬರಿಮಲೆ

ಕೊರೊನಾ ವೈರಸ್ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ದೇವಾಲಯಗಳು ಸ್ಥಗಿತಗೊಂಡಿದ್ದವು. ಆದರೆ ಇತ್ತೀಚಿಗಷ್ಟೇ ಕೇಂದ್ರವು ಲಾಕ್ ಡೌನ್ ಸಡಿಲಗೊಳಿಸಿ “ಅನ್ಲಾಕ್ 1.0” ಅನ್ನು ಘೋಷಿಸಿತು, ಹಾಗೇ ಲಾಕ್‌ಡೌನ್‌ನಿಂದ ಅದರ ಶ್ರೇಣೀಕೃತ ನಿರ್ಗಮನ ಯೋಜನೆ, ಮತ್ತು ಜೂನ್ 8 ರಿಂದ ದೇವಾಲಯಗಳು ಮತ್ತು ಇತರ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಭಾರತದ ಬಹುದೊಡ್ಡ ದೇವಾಲಯಗಳಲ್ಲಿ ಒಂದಾದ ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಬರಿಮಲೆಯು ಜೂನ್ 9 ರಿಂದ ಕಾರ್ಯನಿರ್ವಹಿಸಲಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅದಲ್ಲದೇ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಂತೆ, ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೂ ವೃದ್ಧರು ಮತ್ತು ಮಕ್ಕಳನ್ನು ನಿಷೇದಿಸಿದೆ, ಆದರೆ ದೇವಾಲಯ ದರ್ಶನಕ್ಕೆ ಅವಕಾಶವಿರುವ ಭಕ್ತರ ಸಂಖ್ಯೆಯ ಮೇಲೆ ಮಿತಿ ಇರುತ್ತದೆ. ಹೀಗಾಗಿ 60,000 ಕ್ಕಿಂತ ಹೆಚ್ಚಿನ ಸಾಮಾನ್ಯ ಭಕ್ತರ ಪ್ರವೇಶಕ್ಕೆ ವಿರುದ್ಧವಾಗಿ ದಿನಕ್ಕೆ ಕೇವಲ 6,000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಮತ್ತು ಪರಸ್ಪರರ ನಡುವೆ ಆರು ಅಡಿ ಅಂತರ ಮತ್ತು ಮುಖಕ್ಕೆ ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್-19 ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಚೀನಾ ವಿರುದ್ದ  ಹಾಕಿದ್ದ ಪೋಸ್ಟ್ ತೆಗೆದು ಹಾಕಿದ  ಟಿಕ್ ಟಾಕ್

Sat Jun 6 , 2020
ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ ಟಾಕ್ ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಕೊಕ್ ನೀಡುತ್ತಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖ್ಯಾತ ಕಮೆಡಿಯನ್ ಸಲೋನಿ ಗೌರ್ ಟಿಕ್ ಟಾಕ್ ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ತೆಗೆದು ಹಾಕಲಾಗಿದೆ. ಈ ಕುರಿತು ಸಾಮಾಜಿಕ […]

Advertisement

Wordpress Social Share Plugin powered by Ultimatelysocial