ಭಾರತಕ್ಕೆ WHO ಎಚ್ಚರಿಕೆ

ಜಿನೀವಾ: ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವಂತೆಯೇ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಎಚ್ಚರಿಕೆ ನೀಡಿದೆ. ಅತಿ ಹೆಚ್ಚು ಸೋಂಕು ತಗುಲಿದ ದೇಶಗಳ ಪೈಕಿ ಭಾರತ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ 24 ತಾಸಿನೊಳಗೆ 10,000ದಷ್ಟು ಹೊಸ ಪ್ರಕರಣಗಳು ದಾಖಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡಿಲ್ಲ. ಆದರೆ ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್ ನಿಮಯಗಳನ್ನು ಸಡಿಲಗೊಳಿಸಿರುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಮೈಕಲ್ ರಯಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಹಂತದಲ್ಲಿ ಭಾರತದಲ್ಲಿ ಮೂರು ವಾರದಲ್ಲಿ ಕೊರೊನಾ ವೈರಸ್ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಿದರು. ಹಾಗಾಗಿ ಸಾಂಕ್ರಾಮಿಕ ರೋಗದ ಪ್ರಯಾಣದ ದಿಕ್ಕು ಘಾತಕವೆನಿಸಿಲ್ಲ. ಆದರೂ ಇನ್ನೂ ಬೆಳೆಯುತ್ತಿದೆ ಎಂದು ಹೇಳಿದರು. ಸರಿಯಾದ ಸಂದರ್ಭಕ್ಕೆ ಲಾಕ್‌ಡೌನ್ ಜಾರಿಗೆ ತಂದ ಪರಿಣಾಮ ಭಾರತದಲ್ಲಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲಾಗಿದೆ. ಈಗ ಲಾಕ್‌ಡೌನ್ ಸಡಲಿಕೆ ಮಾಡಿರುವುದರಿಂದ ಜನರು ಓಡಾಟದ ಚಟುವಟಿಕೆ ಪ್ರಾರಂಭಿಸಿರುವುದರಿಂದ ಕೋವಿಡ್ ಸೋಂಕು ತಿರುಗಿ ಬರುವ ಅಪಾಯವಿದೆ ಎಂದು ಗಂಭೀರವಾಗಿ ತಿಳಿಸಿದ್ದಾರೆ. ಕಳೆದ 24 ತಾಸಿನಲ್ಲಿ ಭಾರತದಲ್ಲಿ 9887 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಹಾಗೆಯೇ 294 ಮಂದಿ ಸಾವಿಗೆ ಶರಣಾಗಿದ್ದರು. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 236657ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಟ್ಟು 6642 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಇಟಲಿ ಹಿಂದಿಕ್ಕಿರುವ ಭಾರತ ಕೊರೊನಾ ವೈರಸ್ ಸೋಂಕಿತ ದೇಶಗಳ ಪೈಕಿ ಆರನೇ ಸ್ಥಾನಕ್ಕೆ ತಲುಪಿದೆ. ಭಾರತದಲ್ಲಿ ಮಾರ್ಚ್ 25ರಂದು ಮೊದಲ ಬಾರಿಗೆ ಲಾಕ್‌ಡೌನ್ ಜಾರಿಗೆ ತರಲಾಗಿತ್ತು. ಆದರೆ ಲಾಕ್‌ಡೌನ್ 3ರ ಬಳಿಕ ಹಂತ ಹಂತವಾಗಿ ನಿಯಮಗಳನ್ನು ಸಡಿಲಗೊಳಿಸಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕಕ್ಕೆ ೪ಸಾವಿರ ಕೋಟಿ ರಿಲೀಸ್  /ಮೋದಿಗೆ ಸಿಎಂ ಬಿಎಸ್‌ವೈ ಧನ್ಯವಾದ

Sat Jun 6 , 2020
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ೨೦೧೯ರ ಡಿಸೆಂಬರ್‌ನಿAದ ೨೦೨೦ರ ಫೆಬ್ರುವರಿವರೆಗೆ ರಾಜ್ಯಕ್ಕೆ ಉಂಟಾದ ಜಿಎಸ್‌ಟಿ ನಷ್ಟ ಪರಿಹಾರವಾಗಿ ಒಟ್ಟು ೪,೩೧೪ಕೋಟಿ ರೂಪಾಯಿಯನ್ನು ರಿಲೀಸ್ ಮಾಡಲಾಗಿದೆ. ಈ ಹಿನ್ನಲೆ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕೃತಜ್ಞತೆ ಅರ್ಪಿಸುವುದಾಗಿ ಟ್ವೀಟ್ ಮಾಡಿದ್ದಾರೆ. Please follow and like […]

Advertisement

Wordpress Social Share Plugin powered by Ultimatelysocial