ಮಾಸ್ಟರ್ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್ ..!

ಕೊರೊನಾ ವೈರಸ್ ಅಬ್ಬರ ಹೆಚ್ಚಾಗಿರುವುದರಿಂದ ಎಲ್ಲ ಉದ್ಯಮಗಳು ಲಾಕ್‌ಡೌನ್ ಆಗಿವೆ. ಇದರ ಪ್ರಭಾವ ಚಿತ್ರರಂಗದ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ರಿಲೀಸ್‌ಗೆ ರೆಡಿ ಇರುವ ಬಿಗ್ ಬಜೆಟ್ ಸಿನಿಮಾಗಳಿಗೆ ತೊಂದರೆ ಆಗಿದೆ.
ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗಿದ್ದ ಮಾಸ್ಟರ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಮೊದಲ ಬಾರಿಗೆ ವಿಜಯ್ ಎದುರು ವಿಜಯ್ ಸೇತುಪತಿ ವಿಲನ್ ಆಗಿ ನಟಿಸಲಿದ್ದಾರೆ ಎಂದಾಗಲೇ ದೊಡ್ಡಮಟ್ಟದ ಹೈಪ್ ಸೃಷ್ಟಿಯಾಗಿತ್ತು. ಎಲ್ಲ ಅಂದುಕೊAಡAತೆ ಆಗಿದ್ದರೆ ಏ.೧೦ಕ್ಕೆ ಈ ಸಿನಿಮಾ ತೆರೆಕಂಡಿರಬೇಕಿತ್ತು. ಈಗ ಜೂ.೨೨ ರಂದು ವಿಜಯ್ ಜನ್ಮದಿನದಂದು ಈ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಯಿತು ಆದರೆ ಕೊರೊನಾ ಹಾವಳಿ ಮುಂದುವರೆದರೆ ಅದು ಸಾಧ್ಯವಿಲ್ಲ.
ಅಕ್ಟೋಬರ್, ನವೆಂಬರ್ ವೇಳೆಗೆ ಎಲ್ಲವೂ ಮುಗಿದು ಸರಿಹೋಗಿರುತ್ತದೆ ಎಂಬ ಅಂದಾಜು ನಿರ್ಮಾಪಕರದ್ದು. ಅಜಿತ್ ನಟನೆಯ ವಲಿಮೈ ಚಿತ್ರವನ್ನು ದೀಪಾವಳಿಗೆ ರಿಲೀಸ್ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಳ್ಳಲಾಗಿತ್ತು. ಇದೀಗ ಆ ಚಿತ್ರವು ೨೦೨೧ರ ಆರಂಭದಲ್ಲಿ ತೆರೆಕಾಣಲಿದೆಯಂತೆ. ಹಾಗಾಗಿ ಆ ಜಾಗಕ್ಕೆ ಮಾಸ್ಟರ್ ಚಿತ್ರವನ್ನು ದೀಪಾವಳಿ ಹಬ್ಬದಂದು ರಿಲೀಸ್ ಮಾಡುವ ಲೆಕ್ಕಾಚಾರ ಹಾಕಿಕೊಂಡಿದ್ದಾರAತೆ ನಿರ್ಮಾಪಕರು.  ವಿಜಯ್ ನಟನೆಯ ತುಪಾಕಿ, ಕತ್ತಿ, ಸರ್ಕಾರ್ ಸೇರಿದಂತೆ ೧೨ ಚಿತ್ರಗಳು ಈಗಾಗಲೇ ದೀಪಾವಳಿಯಂದೇ ತೆರೆಕಂಡು ಭರ್ಜರಿ ಯಶಸ್ಸು ಕಂಡಿವೆ. ಇದೀಗ ಅದೇ ಸಾಲಿಗೆ ಮಾಸ್ಟರ್ ಕೂಡ ಸೇರಲಿದೆ ಎಂಬುದು ಚಿತ್ರತಂಡದ ನಂಬಿಕೆ.  ಮಾನಗರಂ ಕೈದಿಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಕಗನರಾಜ್ ಇದರ ನಿರ್ದೇಶನ ಮಾಡಿದ್ದು, ರವಿಚಂದರ್ ಇದರ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೇರಮಿಯಾ, ಸಂತಾನು ದೊಡ್ಡ ತಾರಾಗಣವಿದೆ.

Please follow and like us:

Leave a Reply

Your email address will not be published. Required fields are marked *

Next Post

ಮದ್ಯ ಖರೀದಿಯ ಕಾಸ್ಟ್ಲೀ ಬಿಲ್ ವೈರಲ್..! ವ್ಯಾಪಾರಿ, ಗ್ರಾಹಕನಿಗೂ ಕುತ್ತು..!

Tue May 5 , 2020
ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಮದ್ಯ ಖರೀದಿಯ ಕಾಸ್ಟ್ಲೀ ಬಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಿನ್ನೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಅಲ್ಲದೇ ಒಬ್ಬ ವ್ಯಕ್ತಿಗೆ ಇಂತಿಷ್ಟು ಮದ್ಯ ಮಾರಾಟ ಮಾಡಬೇಖು ಎಂದು ನಿಗದಿ ಮಾಡಲಾಗಿತ್ತು. ಇದೇ ವೇಳೆ ಬೆಂಗಳೂರು ನಗರದೆಲ್ಲೆಡೆ ಮದ್ಯ ಖರೀದಿಗೆ ಪಾನ ಪ್ರಿಯರು ಮುಗಿ ಬಿದ್ದಿದ್ದರು. ಈ ಎಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 52,800 ರೂ.ಗಳ ಮದ್ಯದ ಖರೀದಿ ಬಿಲ್ ಪೋಟೋ […]

Advertisement

Wordpress Social Share Plugin powered by Ultimatelysocial