ಮೀಸಲಾತಿ ಪಟ್ಟಿಯನ್ನು ಪರೀಕ್ಷಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಅಗತ್ಯವಿರುವವರಿಗೆ ಮಾತ್ರ ಮೀಸಲಾತಿಯ ಅನುಕೂಲಗಳು ದೊರೆಯುವಂತೆ ಮಾಡಬೇಕು. ಮೀಸಲಾತಿ ಪಟ್ಟಿಯನ್ನು ಪರೀಕ್ಷಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅರುಣ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಆದೇಶ ನೀಡಿದೆ. ಮೀಸಲಾತಿಯ ಫಲಾನುಭವಿಗಳಾಗಲು ಪರಿಶಿಷ್ಟಜಾತಿ ಮತ್ತು ಪಂಗಡಗಳಲ್ಲಿ ಹಲವು ತೊಡಕುಗಳಿವೆ. ಇದಲ್ಲದೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವರ್ಗಗಳಿವೆ. ಆದರೆ ಈ ಜಾತಿ ಮತ್ತು ಪಂಗಡಗಳಲ್ಲಿ ಕೆಲವು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಕಾರ್ಯಗಳಿಂದ ವಂಚಿತವಾಗಿವೆ. ಹೀಗೆ ವಂಚಿತವಾದ ವರ್ಗಗಳಿಗೆ ಮೀಸಲಾತಿಯ ಅನುಕೂಲಗಳು ದೊರೆಯುತ್ತಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

Please follow and like us:

Leave a Reply

Your email address will not be published. Required fields are marked *

Next Post

ಐದು ಮಹಾನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್

Fri Apr 24 , 2020
ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸುವ ಉದ್ದೇಶದಿಂದ ತಮಿಳುನಾಡು ಸಿಎಂ ಇಕೆ ಪಳನಿಸ್ವಾಮಿ ಅವರು ಚೆನ್ನೈ, ಕೊಯಮತ್ತೂರು, ಮದುರೈ, ಸೇಲಂ ಮತ್ತು ತಿರುಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಏಪ್ರಿಲ್ ೨೬ರ ಬೆಳಗ್ಗೆ ೬ ಗಂಟೆಯಿಂದ ಏಪ್ರಿಲ್ ೨೯ ರ ರಾತ್ರಿ ೯ ಗಂಟೆಯವರೆಗೆ ಈ ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಆಗಲಿದೆ. […]

Advertisement

Wordpress Social Share Plugin powered by Ultimatelysocial