ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ 13 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 614 ಕ್ಕೆ ಏರಿಕೆಯಾಗಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು, ಇಂದು ಮತ್ತೆ ಹೊಸದಾಗಿ 12 ಜನರಿಗೆ ಕೊರೊನಾ ವೈರಸ್ ಸೋಂಕು ದೃಢವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆಯಾಗಿದೆ.ಅಂದಹಾಗೇ ಇಂದು ಕಲಬುರಗಿ 6 , ಬಾಗಲಕೋಟೆ ಮೂವರಿಗೆ ಮತ್ತು ಬೆಂಗಳೂರು ನಗರ ಜಿಲ್ಲೆಯ ನಾಲ್ವರಿಗೆ ಇಂದು ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆಯಾಗಿದೆ.ಇನ್ನೂ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಇದುವರೆಗೆ 25 ಜನರು ಸಾವನ್ನಪ್ಪಿದ್ದರೇ, ಕೊರೋನಾ ಸೋಂಕಿತರಾಗಿದ್ದಂತ 293 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡಬ್ಲೂಹೆಚ್‌ಓ ದೊಂದಿಗೆ ಅಮೇರಿಕಾ ಜಟಾಪಟಿ

Sun May 3 , 2020
ಕೊರೊನಾ ವೈರಸ್ ಮಾನವ ನಿರ್ಮಿತ. ಅದು ಯಾವುದೋ ಪ್ರಾಣಿಯೋ ಅಥವಾ ಪಕ್ಷಿಗಳಿಂದ ಸೃಷ್ಟಿಯಾದ ವೈರಸ್ ಅಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳನ್ನು ನೇರವಾಗಿ ಗೆಲ್ಲಲಾಗದ ಚೀನಾ ತನ್ನ ಕಪಟ ಬುದ್ಧಿಯಿಂದ ಜೈವಿಕ ಯುದ್ಧದ ಮೊರೆ ಹೋಗಿ, ಈ ಕೊರೊನಾ ವೈರಸ್‌ಅನ್ನು ಸೃಷ್ಟಿಸಿದೆ. ಚೀನಾದ ಪ್ರಯೋಗಾಲಯದಲ್ಲಿ ಈ ವೈರಸ್ ಲೀಕ್ ಆಗಿದೆ. ಇದರಿಂದಾಗಿ ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಮೊದಲು ತಾನೇ ಬಾಧೆಪಟ್ಟ ಚೀನಾ, ಮತ್ತೆ ಜಗತ್ತಿಗೆ ಸೋಂಕು ಹಬ್ಬಿದೆ. ಹೀಗಾಗಿ ಜಗತ್ತಿನ ಇತರ […]

Advertisement

Wordpress Social Share Plugin powered by Ultimatelysocial