ಕೋವಿಡ್-೧೯ ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಃ ಆರಂಭವಾಗಲಿದೆ. ದೇಶೀಯ ವಿಮಾನಯಾನ ಆರಂಭಿಸಲು ವಿಮಾನಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಮೇ.೨೫ ಮಂಗಳೂರಿನಿಂದ ಬೆಂಗಳೂರು, ಮುಂಬೈ ಮತ್ತು ಚೆನ್ನೈಗೆ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಮಂಗಳೂರಿನಿಂದ ಇಂಡಿಗೋ ೩ ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ ೮.೩೦, ರಾತ್ರಿ ೭ ಗಂಟೆಗೆ ಹಾಗೂ ಇಂಡಿಗೋ ವಿಮಾನ ಸಂಜೆ ೫.೫೫ಕ್ಕೆ, ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ ೧೦.೨೦, ರಾತ್ರಿ ೯.೩೫ ಸಂಚರಿಸಲಿವೆ. ಅದೇ ರೀತಿ ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ ೭.೦೫ಕ್ಕೆ, ಇಂಡಿಗೋ ಬೆಳಗ್ಗೆ ೯.೩೦ಕ್ಕೆ ಮಂಗಳೂರಿಗೆ ಸಂಚರಿಸಲಿವೆ. ಹಾಗೂ ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ ೯.೦೫ಕ್ಕೆ ಇಂಡಿಗೋ ೧೧.೪೦ ಕ್ಕೆ ತೆರಳಲಿದೆ. ಚೆನ್ನೈನಿಂದ ಮಂಗಳೂರಿಗೆ ಸಂಜೆ ೫.೪೫ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ ೮.೦೫ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ ಎಂದು ಇಂಡಿಗೋ ಮತ್ತು ಸ್ಪೈಷ್ ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನ ಹಾರಾಟ ಪ್ರಾರಂಭ

Please follow and like us: