ಸಹೋದರಿಯ ಪುನರ್ ಮಿಲನ

ಡೇವ್ ಎಂಬ ನಾಯಿ ಮರಿ ತನ್ನ ಮಾಲೀಕನೊಂದಿಗೆ ವಾಕ್ ಮಾಡುವ ಸಂದರ್ಭದಲ್ಲಿ ಎದುರಾದ ತನ್ನ ಸಹೋದರಿಯನ್ನು ಗುರುತಿಸಿ ಮನುಷ್ಯರ ರೀತಿ ತಬ್ಬಿಕೊಂಡ ಪ್ರಸಂಗ ನಡೆದಿದೆ. ಮನುಷ್ಯ ಕುಟುಂಬ ಪುನರ್ಮಿಲನಗಳು ಯಾವಾಗಲೂ ನಡೆಯುತ್ತಿರುತ್ತವೆ. ಇಂತ ಪುನರ್‌ಮಿಲನಗಳು ವ್ಯಕ್ತಿಗಳನ್ನು ಭಾವುಕರನ್ನಾಗಿಸುತ್ತದೆ. ಆದರೆ, ಈ ಸುದ್ದಿ ನಾಯಿ ಮರಿಗಳಿಗೆ ಸಂಬಂಧಿಸಿದ ಪುನರ್ಮಿಲನ. ಲಿಬ್ಬಿ ಎಂಬುವರು ತಮ್ಮ ತಂದೆ ಕಳಿಸಿದ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ನಾಯಿ ಮರಿಗಳು ಒಟ್ಟಿಗೆ ಹುಟ್ಟಿದ್ದು, ಆಕಸ್ಮಿಕವಾಗಿ ಎದುರು ಬದುರಾದಾಗ ಒಂದನ್ನೊಂದು ಗುರುತಿಸಿಕೊಂಡು ಅಪ್ಪಿಕೊಂಡಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು, ನಾಯಿಮರಿಗಳು ಯಾವಾಗ ಬೇರೆಯಾದವು ಎಂಬುದರ ಮಾಹಿತಿ ದೊರಕಿಲ್ಲ. ನೆಟ್ಟಿಗರು ಮಾತ್ರ ಈ ಫೋಟೋವನ್ನು ನೋಡಿ ಭಾವುಕರಾಗಿ ತಮ್ಮ ಭಾವನೆಯನ್ನು ಕಣ್ಣೀರು ಹಾಕುವ ಎಮೋಷ್ನಲ್ ಗಳ  ಮೂಲಕ ಹಂಚಿಕೊಂಡಿದ್ದಾರೆ. ಕೆಲವರು ಈ ಶ್ವಾನಗಳು ಗೊಂಬೆಗಳು ಎಂದು ಅನುಮಾನ ವ್ಯಕ್ತಪಡಿಸಿದ್ದು, ಪ್ರಚಾರಕ್ಕಾಗಿ ಈ ರೀತಿ ಹಾಕಲಾಗಿದೆ ಎಂದಿದ್ದಾರೆ. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅನುಮಾನ ಹೌದು ಎನ್ನುವಂತಿದೆ.

Please follow and like us:

Leave a Reply

Your email address will not be published. Required fields are marked *

Next Post

ಜೂಮ್ ಕಾಲಿಂಗ್  ಆ್ಯಪ್ ಬಂದಾಗಬಹುದು..?

Sat May 23 , 2020
ಜೂಮ್ ವಿಡಿಯೋ ಕಾಲಿಂಗ್ ಆ್ಯಪ್  ನಿಷೇಧಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು  ವಿಚಾರಣೆಯನ್ನು ಸುಪ್ರೀಕೋರ್ಟ್ ಇಂದು ನಡೆಸಿತು.ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಚಾರವಾಗಿ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲ ಸಮಯಾವಕಾಶವನ್ನು ನೀಡಿದೆ. ನವದೆಹಲಿಯ ಹರ್ಷಾ ಚಾಗ್ ಎನ್ನುವ ಟ್ಯೂಟೊರ್ ಒಬ್ಬರು, ‘ಜೂಮ್ ಆ್ಯಪ್ ಸುರಕ್ಷಿತವಲ್ಲ, ಹಾಗಾಗಿ ಈ ಅ್ಯಪ್‌ನ್ನು ನಿಷೇಧಿಸಬೇಕು’ ಎಂದು ಅವರು ಕಳೆದ ವಾರ ಸುಪ್ರೀಕೋರ್ಟ್ ಗೆ ಪಿಟಿಷನ್ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ […]

Advertisement

Wordpress Social Share Plugin powered by Ultimatelysocial