ಸಾಲದ ನಿರೀಕ್ಷೆಯಲ್ಲಿದ್ದ ಯುವ ರೈತರಿಗೆ ಖುಷಿ ಸುದ್ದಿ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿದ್ದರಿಂದ ಬಹುತೇಕ ಜನ ಊರಿಗೆ ಮರಳಿದ್ದಾರೆ. ಹೀಗೆ ಹಳ್ಳಿಗೆ ಬಂದ ಯುವಕರು, ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯ ಜನ ಮತ್ತೆ ನಗರಗಳಿಗೆ ತೆರಳುವುದು ಅನುಮಾನವೆನ್ನಲಾಗಿದೆ. ಹಳ್ಳಿಗೆ ಬಂದ ಬಹುತೇಕರು ಸ್ವಂತ ಊರಿನಲ್ಲೇ ಉಳಿಯಲಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ಈ ವರ್ಷ ಕೃಷಿ ಚಟುವಟಿಕೆ ಚುರುಕಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳ ವೇಳೆಗೆ ೭೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೇ ಆಗುತ್ತಿತ್ತು. ಈ ಸಲ ೧೬,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿರುವುದೇ ಇದಕ್ಕೆ ಸಾಕ್ಷಿ ಎನ್ನುವಂತೆ ಇದೆ.
ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಜಾಸ್ತಿಯಾಗಿರುವುದರಿಂದ ಈ ಬಾರಿ ಸಾಲಕ್ಕೆ ಉತ್ತೇಜನ ನೀಡಲಿದ್ದು, ೪ ಲಕ್ಷ ಹೊಸ ರೈತರಿಗೆ ಸಾಲ ನೀಡಲು ಸಹಕಾರ ಇಲಾಖೆ ಕ್ರಮಕೈಗೊಂಡಿದೆ. ಗ್ರಾಮೀಣ ಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಮೊದಲಾದ ಸಹಕಾರಿ ಸಂಸ್ಥೆಗಳ ಮೂಲಕ ಹಳೆಯ ಪಹಣಿ ಪತ್ರ ಆಧರಿಸಿ ಹೊಸ ರೈತರಿಗೆ ಸಾಲ ನೀಡಲು ಸಹಕಾರ ಇಲಾಖೆ ಕ್ರಮ ಕೈಗೊಂಡಿದೆ. ಹಳ್ಳಿಗೆ ಮರಳಿದ ಯುವಕರು ಕಾರ್ಮಿಕರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಲ ನೀಡಲಿದ್ದು, ೪ ಲಕ್ಷ ಹೊಸ ರೈತರಿಗೆ ಸಾಲ ಒದಗಿಸಲು ಚಿಂತನೆ ನಡೆಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ  ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ..!

Sun May 3 , 2020
ಕಾರವಾರ: ಕಳೆದ 40 ದಿನಗಳಿಂದ ಮದ್ಯವಿಲ್ಲದೆ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಸರ್ಕಾರ ನಾಳೆಯಿಂದ ಮದ್ಯ ನೀಡಲು ಮುಂದಾಗಿದ್ದು, ಕಾರವಾರದಲ್ಲಿ ಅಬಕಾರಿ ಇಲಾಖೆ ಮದ್ಯ ಮಾರಾಟದ ಅಂಗಡಿಗಳ ಮುಂದೆ ಮಾರ್ಕ್ ಮಾಡಿ ಸಿದ್ಧತೆ ನಡೆಸಿದೆ. ಕಾರವಾರದಲ್ಲಿ ಅಬಕಾರಿ ಇಲಾಖೆಯಿಂದ ಸಿದ್ಧತೆಹೌದು, ಲಾಕ್​ಡೌನ್​ನಿಂದಾಗಿ ಮಾರ್ಚ್ 24 ರಿಂದ ಬಂದಾಗಿದ್ದ ಮದ್ಯದ ಅಂಗಡಿಗಳನ್ನು ಸರ್ಕಾರ ಮೇ 4 ರಿಂದ ತೆರೆಯಲು ಒಪ್ಪಿಗೆ ಸೂಚಿಸಿವೆ. ಎಂಎಸ್​ಐಎಲ್ ಮತ್ತು ವೈನ್ ಶಾಪ್ ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದರಂತೆ […]

Advertisement

Wordpress Social Share Plugin powered by Ultimatelysocial