ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ;

ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಿಗೂ ಸಮಯದ ಅಭಾವ. ತಾಜಾ ಆಹಾರವನ್ನು ಸೇವಿಸದೇ ಅದನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಕೆಲವರು ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಅದನ್ನು ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಕೆಲವು ವಸ್ತುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ವಿಷವಾಗುತ್ತದೆ.

ಆಲೂಗಡ್ಡೆ: ಆಲೂಗಡ್ಡೆಯನ್ನು ಪ್ರತಿ ತಿನಿಸುಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಆಲೂಗೆಡ್ಡೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಏಕೆಂದರೆ ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಿ ತಿಂದಾಗ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಮೊಟ್ಟೆ: ಮೊಟ್ಟೆಯನ್ನು ಅಪ್ಪಿತಪ್ಪಿಯೂ ಪದೇ ಪದೇ ಬಿಸಿ ಮಾಡಿ ತಿನ್ನಬಾರದು. ಏಕೆಂದರೆ ಮೊಟ್ಟೆಯಲ್ಲಿ ಸಾರಜನಕದ ಪ್ರಮಾಣ ಅಧಿಕವಾಗಿದ್ದು, ಬಿಸಿ ಮಾಡಿದಾಗ ಅದು ಸಾರಜನಕವನ್ನು ಉತ್ಪಾದಿಸಲು ಆರಂಭಿಸುತ್ತದೆ. ನೀವು ಮೊಟ್ಟೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ನಿಮಗೆ ಕ್ಯಾನ್ಸರ್ ಬರುವ ಅಪಾಯವಿದೆ.

ಅನ್ನ: ಪ್ರತಿ ಮನೆಯಲ್ಲೂ ಅನ್ನವನ್ನು ಸೇವಿಸುತ್ತಾರೆ. ಅನ್ನವನ್ನು ಫ್ರೆಶ್‌ ಆಗಿದ್ದಾಗ ಬಿಸಿಯಾಗಿಯೇ ಸೇವಿಸಬೇಕು. ತಣ್ಣಗಾದ ಬಳಿಕ ಅದನ್ನು ಮತ್ತೆ ಬಿಸಿ ಮಾಡಿ ಸೇವಿಸಬೇಡಿ. ಈ ರೀತಿ ಮಾಡಿದರೆ ಆಹಾರ ವಿಷವಾಗುವ ಅಪಾಯವಿರುತ್ತದೆ.

ಚಿಕನ್: ಚಿಕನ್‌ನಿಂದ ಮಾಡಿದ ತಿನಿಸುಗಳನ್ನು ಕೂಡ ಪದೇ ಪದೇ ಬಿಸಿ ಮಾಡಬೇಕು. ಆಗಾಗ ಬಿಸಿ ಮಾಡುವುದರಿಂದ ಅದರ ಪ್ರೋಟೀನ್ ನಾಶವಾಗುತ್ತದೆ. ಅದು ವಿಷಕಾರಿ ರೂಪವನ್ನು ಪಡೆಯಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಚಿಕನ್ ಅನ್ನು ಮತ್ತೆ ಬಿಸಿ ಮಾಡಿ ತಿನ್ನಬೇಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಲಕ್ಷಾಂತರ ಭಕ್ತರ‌ ಸಮುಖದಲ್ಲಿ ನಡೆದ ಯಲ್ಪಾರಟ್ಟಿಯ ಅರಣ್ಯ ಸಿದ್ಧೇಶ್ವರ ಜಾತ್ರೆ.

Tue Feb 28 , 2023
ಆರದ್ಯ ದೈವ ಶ್ರೀ ಅರಣ್ಯ ಸಿದ್ಧೇಶ್ವರ ಭವ್ಯವಾದ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕದ ಹಾಗೂ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ಶಕ್ತಿ ದೇವರು ಎಂದು ಸುಪ್ರಸಿದ್ದವಾದ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಯಲ್ಪಾರಟ್ಟಿಯ ಅರಣ್ಯ ಸಿದ್ಧೇಶ್ವರ ಜಾತ್ರೆಯು ಪ್ರತಿ ವರ್ಷ ಐದು ದಿನವು ವಿಜೃಂಭಣೆಯಿಂದ ನಡೆಯುತ್ತದೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ದೇವರಾದ ಅರಣ್ಯ ಸಿದ್ದೇಶ್ವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಂಡಾರದಲ್ಲಿ ಮಿಂದೆದ್ದ ಭಕ್ತ […]

Advertisement

Wordpress Social Share Plugin powered by Ultimatelysocial