ಲಕ್ಷಾಂತರ ಭಕ್ತರ‌ ಸಮುಖದಲ್ಲಿ ನಡೆದ ಯಲ್ಪಾರಟ್ಟಿಯ ಅರಣ್ಯ ಸಿದ್ಧೇಶ್ವರ ಜಾತ್ರೆ.

ಆರದ್ಯ ದೈವ ಶ್ರೀ ಅರಣ್ಯ ಸಿದ್ಧೇಶ್ವರ ಭವ್ಯವಾದ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕದ ಹಾಗೂ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ಶಕ್ತಿ ದೇವರು ಎಂದು ಸುಪ್ರಸಿದ್ದವಾದ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಯಲ್ಪಾರಟ್ಟಿಯ ಅರಣ್ಯ ಸಿದ್ಧೇಶ್ವರ ಜಾತ್ರೆಯು ಪ್ರತಿ ವರ್ಷ ಐದು ದಿನವು ವಿಜೃಂಭಣೆಯಿಂದ ನಡೆಯುತ್ತದೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ದೇವರಾದ ಅರಣ್ಯ ಸಿದ್ದೇಶ್ವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ ಕರಿ ಕಂಬಳಿ ಹೆಗಲ ಮೇಲೆ ಹೊತ್ತು, ಬಿಳಿ ಧೋತ್ರ ಉಟ್ಟು ಅಶ್ವಾರೂಢನಾಗಿ ಹೊರನಾಡು ಭಂಡಾರದೊಡೆಯನ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಯಿಂದ ಭಕ್ತ ಸಾಗರ ಹರಿದು ಬರುತ್ತದೆ. ಕಾಡಾಪೂರ ಹಾಗೂ ಖೇಮಲಾಪೂರ ಅರಣ್ಯಸಿದ್ದೇಶ್ವರ ಪಾಲಿಕೆಗಳು ಯಲ್ಪಾರಟ್ಟಿಯಲ್ಲಿ ಎದುರು ಭೇಟಿ ತೆಗೆದುಕೊಂಡು ಕರಿ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ದೂರಕಿತು, ಡೊಳ್ಳು ಸೇರಿದಂತೆ ವಿವಿಧ ಮಂಗಲ ವಾದ್ಯಾಗಳೊಂದಿಗೆ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ದೇವರ ಭಂಡಾರದಲ್ಲಿ ಭಕ್ತಿಯಿಂದ ಮಿಂದೆಳುವ ದೃಶ್ಯ ನಯನ ಮನೋಹರವಾಗಿತ್ತು.ಇಡೀ ಭಾರತ ದೇಶದಲ್ಲಿಯೇ ನಡೆಯದಂತಹ ನಿವಾಳಿಕೆ ಜರುಗುತ್ತದೆ. ಬಾಳೆಹಣ್ಣು, ಉತ್ತತ್ತಿ, ಕೊಬ್ಬರಿ, ಭಂಡಾರ ಮೊದಲಾದವುಗಳನ್ನು ದೇವರ ಪಲ್ಲಕ್ಕಿ ಹಾಗೂ ಕುದರೆ ಮೇಲೆ ಹಾರಿಸುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆದು ಹರಕ್ಕೆ ತೀರಿಸುವ ಪರಿಪಾಠ ಬೆಳೆದು ಬಂದಿದೆ.ಶ್ರೀ ಅರಣ್ಯ ಸಿದ್ದೇಶ್ವರನ ಜಾತ್ರೆಗೆ ಗಡಿ ಭಾಗದ ದಕ್ಷಿಣ ಮಹಾರಾಷ್ಟ್ರದ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುಣಿತರಾದರು. ದೇವರ ಪಲ್ಲಕ್ಕಿಗೆ ಭಂಡಾರ ಹಾರಿಸುವು ಮೂಲಕ ಭಕ್ತಿ ಭಾವ ಮೇರೆದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ...!

Tue Feb 28 , 2023
ಸೈಕ್ಲೋಪಿಂಟಿಲಿಡಿನ್ ಕ್ರೋಟಾಲಿಡೀನ್ ಮೊದಲಾದ ಸಂಯುಕ್ತ ರಾಸಾಯನಿಕಗಳಿಂದ ಕೂಡಿರುವ ಗಿಜಿಗಿಜಿ ಕಾಯಿಯ ಎಲೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ಹಸಿರೆಲೆ ಗೊಬ್ಬರಕ್ಕಾಗಿ ತೆಂಗಿನ ತೋಟಗಳಲ್ಲಿ ಬಳಸಲಾಗುತ್ತದೆ. ಕೆಲವು ದೇಶಗಳಲ್ಲಿ ಈ ಗಿಡದ ಹೂವುಗಳನ್ನು ತರಕಾರಿಯಾಗಿ ಬಳಸಲಾಗುತ್ತದೆ. ಈ ಗಿಜಿಗಿಜಿ ಬೀಜಗಳನ್ನು ಅಲ್ಪ ಪ್ರಮಾಣದಲ್ಲಿ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಈ ಬೀಜಗಳನ್ನು ತೊಳೆದು ಹುರಿದು ಕಾಫಿ ಪುಡಿಯಾಗಿ ಬಳಸುತ್ತಾರೆ. ಈ […]

Advertisement

Wordpress Social Share Plugin powered by Ultimatelysocial