ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ…!

ಸೈಕ್ಲೋಪಿಂಟಿಲಿಡಿನ್ ಕ್ರೋಟಾಲಿಡೀನ್ ಮೊದಲಾದ ಸಂಯುಕ್ತ ರಾಸಾಯನಿಕಗಳಿಂದ ಕೂಡಿರುವ ಗಿಜಿಗಿಜಿ ಕಾಯಿಯ ಎಲೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ.

ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ಹಸಿರೆಲೆ ಗೊಬ್ಬರಕ್ಕಾಗಿ ತೆಂಗಿನ ತೋಟಗಳಲ್ಲಿ ಬಳಸಲಾಗುತ್ತದೆ.

ಕೆಲವು ದೇಶಗಳಲ್ಲಿ ಈ ಗಿಡದ ಹೂವುಗಳನ್ನು ತರಕಾರಿಯಾಗಿ ಬಳಸಲಾಗುತ್ತದೆ. ಈ ಗಿಜಿಗಿಜಿ ಬೀಜಗಳನ್ನು ಅಲ್ಪ ಪ್ರಮಾಣದಲ್ಲಿ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಈ ಬೀಜಗಳನ್ನು ತೊಳೆದು ಹುರಿದು ಕಾಫಿ ಪುಡಿಯಾಗಿ ಬಳಸುತ್ತಾರೆ. ಈ ಸಸ್ಯದ ಬೇರನ್ನು ಅರೆದು ಕೀಲು ನೋವಿರುವ ಜಾಗಕ್ಕೆ ಹಚ್ಚಬಹುದು.

ಚರ್ಮರೋಗ ಅಥವಾ ಕಜ್ಜಿಯ ಸಮಸ್ಯೆ ಇರುವವರು ಈ ಗಿಡವನ್ನು ಸಂಪೂರ್ಣವಾಗಿ ಅರೆದು ಬೇವಿನ ಎಣ್ಣೆಯೊಂದಿಗೆ ಮೈಗೆ ಹಚ್ಚಿ ಕೆಲ ಗಂಟೆಗಳ ಬಳಿಕ ಸ್ನಾನ ಮಾಡಬೇಕು. ಈ ಸಸ್ಯದ ಯಾವುದೇ ಅಡ್ಡಪರಿಣಾಮಗಳ ವರದಿಗಳಿಲ್ಲ. ಆದರೂ ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ.

Tue Feb 28 , 2023
ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು. ಮೈಸೂರು: ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. […]

Advertisement

Wordpress Social Share Plugin powered by Ultimatelysocial