ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ.

ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.

ಮೈಸೂರು: ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್  ಶಾಸಕ ತನ್ವೀರ್ ಸೇಠ್ಹೇಳಿದರು. ರಾಜಕೀಯ ನಿವೃತ್ತಿ ಬಗ್ಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ನನಗೆ ಆರೋಗ್ಯ ಚೆನ್ನಾಗಿಲ್ಲ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪತ್ರ ಬರೆದೆ. ಅದೇ ಕಾರಣಕ್ಕೆ ಚುನಾವಣಾ ರಾಜಕೀಯ ನಿವೃತ್ತಿ ಬಯಸಿದ್ದೇನೆ ಎಂದು ಹೇಳಿದರು. ರಾಜಕೀಯ ನಿವೃತ್ತಿಗೆ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಜನ ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನನ್ನ ತಂದೆ ಅವರನ್ನೂ ಜನ ಬೆಂಬಲಿಸಿದ್ದರು. ಆದರೆ ಸದ್ಯ ರಾಜಕೀಯ ಪರಿಸ್ಥಿತಿ‌ ಕೂಡ ಹದಗೆಟ್ಟಿದೆ. ನರಸಿಂಹರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ನನಗೆ ಹಲವಾರು ಅವಕಾಶ ನೀಡಿದೆ. ಆ ಬಗ್ಗೆ ಯಾವುದೇ ಬೇಸರ ಇಲ್ಲ. ಬೇರಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಜತೆಗೆ, ವರಿಷ್ಠರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ಸಹಮತ ಇದೆ ಎಂದು ತಿಳಿಸಿದರು.

ತನ್ವೀರ್ ಸೇಠ್​ಗೆ ಟಿಕೆಟ್ ಖಚಿತ; ಕಾಂಗ್ರೆಸ್ ನಾಯಕ ಹೇಳಿಕೆ

ಹಾಲಿ ಶಾಸಕರಿಗೆ ಟಿಕೆಟ್​ ನೀಡುವುದಕ್ಕೆ ಹೈಕಮಾಂಡ್ ಈಗಾಗಲೇ ನಿರ್ಧಾರ ಮಾಡಿದೆ. ಹಾಗಾಗಿ ತನ್ವೀರ್ ಸೇಠ್​ಗೆ ಟಿಕೆಟ್ ಖಚಿತ ಎಂದು ತನ್ವೀರ್ ಸೇಠ್ ನಿವಾಸದಲ್ಲಿ ಮೈಸೂರು ಕಾಂಗ್ರೆಸ್ ಅಧ್ಯಕ್ಷ ಮೂರ್ತಿ ಹೇಳಿದ್ದಾರೆ. ಕಾರ್ಯಕರ್ತರು, ಬೆಂಬಲಿಗರು ಯಾವುದೇ ಕಾರಣಕ್ಕೂ ನಿರಾಸೆ ಪಡುವ ಅಗತ್ಯವಿಲ್ಲ. ಹೈಕಮಾಂಡ್ ಜತೆ ಚರ್ಚೆ ಮಾಡಿ ಅಂತಿಮವಾಗಿ ಇವರನ್ನೇ ಕಣಕ್ಕಿಳಿಸುತ್ತೇವೆ ಎಂದು ಮೂರ್ತಿ ತಿಳಿಸಿದ್ದಾರೆ.

ಇನ್ನೇನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಸೇಠ್ ಅವರು ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ಅವರ ಅಭಿಮಾನಿಗಳಿಗೆ, ಕಾಂಗ್ರೆಸ್‌ಗೆ ಆಘಾತ ನೀಡಿತ್ತು. ಸೇಠ್ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅವರ ಬೆಂಬಲಿಗರೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿತ್ತು.

‘ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ. ಆದ್ರೆ ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಸೇಠ್ ಉಲ್ಲೇಖಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅರಿತು ಕುಡಿದರೆ ಆರೋಗ್ಯ - ಬೇಸಿಗೆಯಲ್ಲಿ ಎಂತಹ ಪಾನೀಯ ಪಾನ ಮಾಡಬೇಕು?

Tue Feb 28 , 2023
‘ಶಿವರಾತ್ರಿ ಬಂತು, ಚಳಿ ಶಿವ ಶಿವಾ ಅಂತ ಓಡಿಹೋಯ್ತು’ ಎಂಬುದು ಜನಪದರ ಹವಾಮಾನ ವಿಶ್ಲೇಷಣೆ. ಅದು ವಾಸ್ತವಿಕವೂ ಹೌದು. ಶಿವರಾತ್ರಿ ಕಾಲ ಬದಲಾವಣೆಯನ್ನು ಸೂಚಿಸುವ ಹಬ್ಬ. ಅತಿ ಚಳಿಯಿಂದ ಬಿಸಿಲಿಗೆ ಒಡ್ಡಿಕೊಳ್ಳುವ ಸಮಯ. ಚಳಿಗಾಲದಲ್ಲಿ ದೇಹಕ್ಕೆ ಅತಿ ಕಡಿಮೆ ದ್ರವ ಪದಾರ್ಥಗಳ ಅವಶ್ಯಕತೆ ಇದ್ದರೆ, ಬೇಸಿಗೆಯಲ್ಲಿ ಅವುಗಳ ಅವಶ್ಯಕತೆ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನು ಪೂರೈಸಲು ಪಾನೀಯ ಪಾನ ಅವಶ್ಯಕ. ಆದರೆ ಎಂತಹ ಪಾನೀಯಗಳನ್ನು ಪಾನ ಮಾಡಬೇಕೆನ್ನುವ ವಿವೇಚನೆ ಅತ್ಯವಶ್ಯಕ. ಎಲ್ಲ […]

Advertisement

Wordpress Social Share Plugin powered by Ultimatelysocial