ಇಂಧವನ್ನು ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ!

 

ನವದೆಹಲಿ,ಫೆ.11- ಕೃಷಿಯಲ್ಲಿ ಡೀಸೆಲ್ ಬಳಕೆಯನ್ನು 2020ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ನವೀಕೃತ ಇಂಧವನ್ನು ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದಶಗಳ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದಶಿಗಳ ಜೊತೆ ವಚ್ರ್ಯುಲ್ ಸಭೆ ನಡೆಸಿದ ಸಚಿವರು, ಹವಾಮಾನ ಬದಲಾವಣೆಗೆ ಪ್ರಧಾನಿಯವರ ಬದ್ದತೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡಬೇಕು ಎಂದು ಹೇಳಿದರು.ಇಂಧನ ಕ್ಷೇತ್ರದ ಸುಸ್ಥಿರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಕೆಲಸ ಮಾಡಬೇಕು. ಇಂಗಾಲದ ವ್ಯಾಪ್ತಿಯನ್ನು ತಗ್ಗಿಸಿ ಜಾಗತಿಕ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಅಗತ್ಯವಿದೆ. ಇಂಧನ ಸಂರಕ್ಷಣೆಗಾಗಿ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ರ್ನಿಷ್ಟವಾದ ಗುರಿಯೊಂದಿಗೆ ಯೋಜನೆ ರೂಪಿಸಬೇಕು.ಇಂಧನ ಕ್ಷಮತೆ ಮಾನದಂಡಗಳನ್ನು ಜಾರಿಗೊಳಿಸುವ ಜೊತೆಗೆ ಸಾಮಥ್ಯ ಸದ್ಬಳಕೆಗೆ ಆದ್ಯತೆ ನೀಡಬೇಕು. ಸಂರಕ್ಷಿತ ಮತ್ತು ಸುಧಾರಿತ ಇಂಧನ ವ್ಯವಸ್ಥೆಯ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ. ಆಧುನಿಕ ಭಾರತ ನಿರ್ಮಾಣ ಮತ್ತು ನಾವೀನ್ಯ ಇಂಧನ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು ಮತ್ತು ಗುರಿ ಸಾಧನೆ ಮಾಡಬೇಕು.ವಾಣಿಜ್ಯ ಸಂಕೀರ್ಣಗಳು ಹಸಿರು ಇಂಧನ ಬಳಕೆಗೆ ಒತ್ತು ಕೊಡಬೇಕು. ಇದಕ್ಕಾಗಿ ರಾಜ್ಯಗಳು ಕಾನೂನು ತರಬೇಕು. ಬೇಡಿಕೆಯಷ್ಟು ವಿದ್ಯುತ್ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ದೇಶದ 5 ಯೋಜನೆಗಳಿಂದ ಸಾಂಪ್ರದಾಯಿಕವಲ್ಲದ ಇಂಧನ ಸಾಮಥ್ರ್ಯ 2030ರ ವೇಳೆಗೆ ಗೀ.ಗಾ ವ್ಯಾಟ್‍ಗೆ ತಲುಪಲಿದೆ.ದೇಶದ ಇಂಧನ ಬೇಡಿಕೆಯ ಶೇ.50ರಷ್ಟನ್ನು ನವೀಕೃತ ಇಂಧನಗಳು ಭರ್ತಿ ಮಾಡಲಿವೆ. ಈ ಮೂಲಕ ಒಂದು ಬಿಲಿಯನ್ ಟನ್ ಇಂಗಾಲದ ಮಾಲಿನ್ಯವನ್ನು ತಗ್ಗಿಸಲಾಗುತ್ತದೆ. ಇದರಿಂದ 2070ರ ವೇಳೆಗೆ ಶೇ.45ರಷ್ಟು ಇಂಗಾಲದ ಆರ್ಥಿಕ ಹೊರೆಯನ್ನು ನಿಗ್ರಹಿಸಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ: ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶವಿದೆ;.

Fri Feb 11 , 2022
ಉಡುಪಿ: ಹಲವು ದಿನಗಳ ಪ್ರತಿಭಟನೆಯ ಬಳಿಕ ಉಡುಪಿ ಜಿಲ್ಲೆಯ ಕುಂದಾಪುರದ ಸರಕಾರಿ ಪಿಯು ಕಾಲೇಜಿನ ಕ್ಯಾಂಪಸ್‌ಗೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಸೋಮವಾರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ, ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕ ತರಗತಿ ಕೊಠಡಿಗಳಲ್ಲಿ ಕೂರಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. “ಕುಂದಾಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದರೂ ಸಹ ಕಾಲೇಜುಗಳು ಮತ್ತು ಕ್ಯಾಂಪಸ್‌ಗೆ ಬರಲು ಅವಕಾಶ ನೀಡಲಾಗುತ್ತಿದೆ. ಕುಂದಾಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ’ ಎಂದು […]

Advertisement

Wordpress Social Share Plugin powered by Ultimatelysocial