ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ

ಅವಧಿ ಮೀರಿದ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಎಸ್ ಟಿ ಬ್ಲಾಕ್ನಲ್ಲಿ ನಡೆದಿದೆ.ಸಿಲಂಬರಸನ್ ಎಂಬುವವರ ಮಗ ಲಚ್ಚನ್ (6ವರ್ಷ) ಅಸ್ವಸ್ಥ ಬಾಲಕನಾಗಿದ್ದಾನೆ. ಕಳೆದ ರಾತ್ರಿ ಎಕ್ಸಪೈರ್ ಆಗಿರುವ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿರುವ ಜೆ.ಎಸ್.ಮೆಡಿಕಲ್ ಶಾಪ್ನಲ್ಲಿ ಚಾಕಲೇಟ್ ಖರೀದಿ ಮಾಡಲಾಗಿದೆ. ನಂತರ ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ.ಅಸ್ವಸ್ಥ ಬಾಲಕನನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವಧಿ ಮೀರಿದ ಚಾಕಲೇಟ್ ಮಾರಿದ ಮೆಡಿಕಲ್ ಸ್ಟೋರ್ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಬೀದರ್ ಬೆಡಗಿಗೆ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಪಟ್ಟ

Please follow and like us:

Leave a Reply

Your email address will not be published. Required fields are marked *

Next Post

ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ವಶ

Sat Feb 13 , 2021
ಬೆಂಗಳೂರು ನಗರದಲ್ಲಿ ಅಂತರಾಷ್ಟೀಯ ಮಾದಕ ಜಾಲಕ್ಕೆ ಕೊನೆಯೆ ಇಲ್ಲದಂತ್ತಾಗಿದ್ದು, ಇಂದು ಸಿಸಿಬಿ ಅಧಿಕಾರಿಳು ನಡೆಸಿದ ಭರ್ಜರಿ ಕಾರ್ಯಾಚರಣೆ ವೇಳೆ ಇಬ್ಬರು ನೈಜೀರಿಯನ್ ಡ್ರಗ್ ಪೆಡ್ಲರ್ಸ್ ಗಳು ಸಿಕ್ಕಿಬಿದ್ದಿದ್ದಾರೆ. ರಾಮಮೂರ್ತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಲಾಗಿದ್ದು ವಿನ್ಸೆಂಟ್ ಹಾಗೂ ಜಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್ ಟಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂಲತ […]

Advertisement

Wordpress Social Share Plugin powered by Ultimatelysocial