ನಟಿ ಐಂದ್ರಿತಾ ರೈ ಖಾತೆಯಲ್ಲಿ ಹಣವಿಲ್ವಂತೆ..!

ಕನ್ನಡ ಚಿತ್ರರಂಗದ ಚಂದದ ಜೋಡಿಗಳಲ್ಲಿ ಒಂದು ದಿಗಂತ್ ಹಾಗೂ ಐಂದ್ರಿತಾ ರೈ ಜೋಡಿ.. ಸುಮಾರು ಎಂಟು ವರ್ಷಗಳ ಬಳಿಕ ಇದೀಗ ಮತ್ತೆ ಈ ಜನಪ್ರಿಯ ಜೋಡಿ ತೆರೆ ಮೇಲೆ ಒಂದಾಗ್ತಿದೆ.. ದಿಗಂತ್ ಹಾಗೂ ಐಂದ್ರಿತಾ ಇಬ್ಬರೂ ಕೂಡ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಅಲ್ಲದೆ ಮನಸಾರೆ ಹಾಗೂ ಪಾರಿಜಾತ ಚಿತ್ರಗಳಲ್ಲಿ ಈ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ರು.. ಚಿತ್ರರಂಗದಲ್ಲಿ ಹಿಟ್ ಪೇರ್ ಅನ್ನಿಸಿಕೊಂಡ ದಿಗಂತ್-ಐಂದ್ರಿತಾ ನಿಜ ಜೀವನದಲ್ಲೂ ಜೋಡಿಗಳಾದ್ರು.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಒಂದೇ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನುವ ಸುದ್ದಿ ಹರಿದಾಡಿತ್ತಾದ್ರೂ, ಆ ಬಗ್ಗೆ ಅಧಿಕೃತ ಮಾಹಿತಿ ಇರ್ಲಿಲ್ಲ.. ಸದ್ಯ ಈ ಬಗ್ಗೆ ನಟಿ ಐಂದ್ರಿತಾ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.. ಟ್ವಿಟ್ಟರ್ ನಲ್ಲಿ ತಮ್ಮ ಚಿತ್ರದ ಒಂದು ಫೋಟೋವನ್ನ ಪೋಸ್ಟ್ ಮಾಡಿರುವ ನಟಿ ಐಂದ್ರಿತಾ, ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಅನ್ನುವ ಟೈಟಲ್ ಇರುವ ಚಿತ್ರದಲ್ಲಿ ಇಬ್ಬರೂ ನಟಿಸ್ತಿದ್ದು, ಮಲೆನಾಡಿನ ಮೋಹಕ ತಾಣದಲ್ಲಿ ಸದ್ಯ ಚಿತ್ರೀಕರಣ ನಡೆಯುತ್ತಿದೆ.. ಎಂಟು ವರ್ಷಗಳ ಬಳಿಕ ಇಬ್ಬರೂ ಆನ್ ಸ್ಕ್ರೀನ್ ನಲ್ಲಿ ಒಟ್ಟಿಗೆ ನಟಿಸ್ತಿದ್ದೀವಿ ಎಂದು ಬರೆದುಕೊಂಡಿದ್ದಾರೆ.. ಈ ವಿಷ್ಯ ಸದ್ಯ ಇಬ್ಬರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ..

 

ಇದನ್ನು ಓದಿ :ಬೆಳ್ಳಂ ಬೆಳಿಗ್ಗೆ ಡಕಾಯಿತಿ ಕಾಲು ಸೀಳಿದ ಪೊಲೀಸ್ ತುಪಾಕಿ

Please follow and like us:

Leave a Reply

Your email address will not be published. Required fields are marked *

Next Post

ಸನ್ನಿಗೆ ವಕ್ಕರಿಸಿದ ಕೊರೊನಾ

Wed Dec 2 , 2020
ಬಾಲಿವುಡ್ ನಟ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ವಕ್ಕರಿಸಿದೆ.ಈ ಬಗ್ಗೆ ಸನ್ನಿ ಡಿಯೋಲ್ ಟ್ಟಿಟ್ ಮಾಡಿದ್ದು ನನ್ನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಟ್ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸನ್ನಿಗೆ ಕೋವಿಡ್ ಧೃಡ ಪಟ್ಟಿದ್ದರಿಂದ ಸದ್ಯ ಹೋಮ್ ಐಸೋಲೆಷನ್ ನಲ್ಲಿದ್ದಾರೆ. ಇದನ್ನು ಓದಿ :ನಟಿ ಐಂದ್ರಿತಾ ರೈ ಖಾತೆಯಲ್ಲಿ ಹಣವಿಲ್ವಂತೆ..! Please follow and like us:

Advertisement

Wordpress Social Share Plugin powered by Ultimatelysocial