ಎಚ್‌ಎಎಲ್‌ನ ತೇಜಸ್ ‌ ಯುದ್ಧ ವಿಮಾನ ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಸಜ್ಜು

 

ಬೆಂಗಳೂರುಮಹತ್ವದ ಬೆಳವಣಿಗೆಯೊಂದರಲ್ಲಿ ಅರ್ಜೆಂಟೀನಾ ಮತ್ತು ಮಲೇಷ್ಯಾ, ಸಾರ್ವಜನಿಕ ವಲಯದ ಎಚ್‌ಎಎಲ್‌ ಉತ್ಪಾದಿಸುವ (Hindustan Aeronautics Limited) ಲಘು ಯುದ್ಧ ವಿಮಾನ ತೇಜಸ್‌ ಎಂಕೆ 1ಎ ಅನ್ನು ಆಮದು ಮಾಡಿಕೊಳ್ಳಲು ಅರ್ಜೆಂಟೀನಾ ಮತ್ತು ಮಲೇಷ್ಯಾ ಸಜ್ಜಾಗಿವೆ.

(Aero India 2023) ಉಭಯ ದೇಶಗಳ ರಕ್ಷಣಾ ಪಡೆಗಳ ಮುಖ್ಯಸ್ಥರು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಭಾಗವಹಿಸಲು ಈಗಾಗಲೇ ಬಂದಿಳಿದಿದ್ದಾರೆ.

ಅರ್ಜೆಂಟೀನಾದ ಉನ್ನತ ಅಧಿಕಾರಿಗಳ ನಿಯೋಗವು ಎಚ್‌ಎಎಲ್‌ ಅಧಿಕಾರಿಗಳನ್ನು ಭೇಟಿಯಾಗಲಿದೆ. ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ಎಂಕೆ 1 ಎ ತನ್ನ ವಿಶೇಷ ಫೀಚರ್‌ಗಳು ಹಾಗೂ ಸಾಮರ್ಥ್ಯಕ್ಕೆ ಹೆಸರಾಗಿದೆ. ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸ್ಯೂಟ್ಸ್‌, ಮಲ್ಟಿ-ಮೋಡ್‌ ರಾಡಾರ್‌, ಏರ್-ಟು-ಏರ್‌ ಕ್ಷಿಪಣಿಗಳು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಭವಿಷ್ಯದ ದಿನಗಳಲ್ಲಿ ಭಾರತೀಯ ರಕ್ಷಣಾ ಉದ್ದಿಮೆಯ ಕಂಪನಿಗಳು, ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌ ವಲಯಕ್ಕೆ ಡಿಫೆನ್ಸ್‌ ಸಾಧನಗಳನ್ನು ರಫ್ತು ಮಾಡಲು ಇದರಿಂದ ಹಾದಿ ಸುಗಮವಾಗಲಿದೆ. ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಾಗಿ ಎಚ್‌ಎಎಲ್‌ ಈ ಯುದ್ಧ ವಿಮಾನವನ್ನು ತಯಾರಿಸಿದೆ. ತೇಜಸ್‌ ದೇಶದ ಮೊದಲ ಮೇಕ್‌ ಇನ್‌ ಇಂಡಿಯಾ ಯುದ್ಧ ವಿಮಾನವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ.

Tue Feb 14 , 2023
2019 ರಲ್ಲಿ ಈ ದಿನ ಪುಲ್ವಾಮಾದಲ್ಲಿ ತಮ್ಮ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದರು. “ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ವೀರರನ್ನು ಸ್ಮರಿಸುತ್ತಿದ್ದೇವೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ” ಎಂದು […]

Advertisement

Wordpress Social Share Plugin powered by Ultimatelysocial