ಎಚ್‌ಡಿಎಫ್‌ಸಿ ಬ್ಯಾಂಕ್ ಇಂಟರ್‌ನೆಟ್ ಇಲ್ಲದ, ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆಯನ್ನು ಆರಂಭ.

 

 

ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಇಂಟರ್‌ನೆಟ್ ಇಲ್ಲದ, ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆಯನ್ನು ಆರಂಭ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಯೋಜನೆಯಡಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರಂಚ್‌ಫಿಶ್ ಸಹಭಾಗಿತ್ವದಲ್ಲಿ ಆಫ್‌ಲೈನ್‌ಪೇ ಅನ್ನು ಆರಂಭ ಮಾಡಿದೆ.

 

ಈ ಆಫ್‌ಲೈನ್ ಪಾವತಿ ವಿಧಾನದಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬೇಕಾಗಿಲ್ಲ. ಗ್ರಾಹಕರು ಮತ್ತು ಉದ್ಯಮಿಗಳು ಹಣವನ್ನು ಕಳುಹಿಸಲು ಮತ್ತು ಪಡೆಯಲು ಈ ಇಂಟರ್‌ನೆಟ್ ಇಲ್ಲದೆಯೇ ಪಾವತಿ ಮಾಡುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಆಫ್‌ಲೈನ್ ವಿಧಾನವನ್ನು ಆರಂಭಿಸಿದ ಭಾರತದ ಮೊದಲ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದೆ.

ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಪಾವತಿಗೆ ಅಧಿಕ ಒತ್ತನ್ನು ನೀಡಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ, ಇಂಟರ್‌ನೆಟ್ ಸೌಲಭ್ಯವಿಲ್ಲದ ಪ್ರದೇಶದಲ್ಲಿ ಇನ್ನೂ ಕೂಡಾ ಡಿಜಿಟಲ್ ಪಾವತಿಯ ಪರಿಚಯವೇ ಆಗಿಲ್ಲ. ಇಂತಹ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಯನ್ನು ನಡೆಸಲು ಸಹಾಯವಾಗಲು ಎಚ್‌ಡಿಎಫ್‌ಸಿ ಬ್ಯಾಂಕ್ ಈ ಆಫ್‌ಲೈನ್ ಪಾವತಿ ವಿಧಾನವನ್ನು ಆರಂಭಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣೆ ಮೂಡ್​​ನಲ್ಲಿ ಶಾಸಕರು.

Tue Feb 14 , 2023
ಈ ಬಾರಿಯ ಬಜೆಟ್‌ ಅಧಿವೇಶನ ಈಗಾಗಲೇ ಆರಂಭವಾಗಿದ್ದು, ನಿನ್ನೆ ದಿನದ ಕಲಾಪ ನಡೆದಿದೆ. ಆದ್ರೆ ಅದೇಕೋ ಏನೋ, ಸದಸ್ಯರಿಗೆ ಕಲಾಪದಲ್ಲಿ ಭಾಗವಹಿಸುವ ಆಸಕ್ತಿಯೇ ಕಾಣದಾಗಿದೆ. ಕೇವಲ ಬೆರಳೆಣಿಕೆಯಷ್ಟು ಸದಸ್ಯರು ಭಾಗಿಯಾಗ್ತಿದ್ದಾರೆ. ಇದರ ನಡುವೆಯೇ ಕಲಾಪದಲ್ಲಿ ನಿನ್ನೆ ಕೆಲವು ಇಂಟರೆಸ್ಟಿಂಗ್‌ ಚರ್ಚೆಗಳು ನಡೆದವು. ಸದನದಲ್ಲಿ ಶಿವಲಿಂಗೇಗೌಡರ ಮೂಲ ಪಕ್ಷದ್ದೇ ಚರ್ಚೆ..! ಕಳೆದ ಶುಕ್ರವಾರ ಪ್ರಾರಂಭವಾಗಿದ್ದ ವಿಧಾನಮಂಡಲ ಜಂಟಿ ಅಧಿವೇಶನ, ಇವತ್ತು ಮುಂದುವರೆದಿತ್ತು. ಪ್ರಚಾರ ಬಿಸಿ ನಡುವೆಯೂ ನಡೆ ಸದನದಲ್ಲಿ ಇವತ್ತು ಸ್ವಾರಸ್ಯಕ್ಕರ ಮತ್ತು […]

Advertisement

Wordpress Social Share Plugin powered by Ultimatelysocial