ಸಿಐಡಿ ನೋಟಿಸ್‌ಗೆ ಉತ್ತರ ಕೊಟ್ಟ ಪ್ರಿಯಾಂಕ್ ಖರ್ಗೆ,

ಬೆಂಗಳೂರು: ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಪಿಎಸ್‌ಐ ಅಕ್ರಮ ಪರೀಕ್ಷೆ ಹಗರಣದ (PSI Exam Scam) ತನಿಖೆ (Enquiry) ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ (Main Accused) ದಿವ್ಯಾ ಹಾಗರಗಿ (Divya Hagaragi) ಸೇರಿದಂತೆ ಅನೇಕರನ್ನು ಬಂಧಿಸಿರುವ ಸಿಐಡಿ (CID), ಅವರದಿಂದ ಮಹತ್ವದ ದಾಖಲೆ ಕಲೆಹಾಕುತ್ತಿದೆ.
ಈ ನಡುವೆ ಕಾಂಗ್ರೆಸ್ ನಾಯಕ (Congress Leader), ಮಾಜಿ ಸಚಿವ (Ex Minister) ಹಾಗೂ ಕಲಬುರಗಿಯ (Kalaburagi) ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ (MLA) ಆಗಿರುವ ಪ್ರಿಯಾಂಕ್ ಖರ್ಗೆ (Priyank Kharge), ಸಿಡಿಐ ನೀಡಿದ್ದ ಮೂರೂ ನೋಟಿಸ್‌ಗೂ (Notice) ಲಿಖಿತ (Written) ರೂಪದಲ್ಲಿ ಉತ್ತರ ನೀಡಿದ್ದಾರೆ. 6 ಪುಟಗಳ ಲಿಖಿತ ಉತ್ತರದ ಪತ್ರವನ್ನು ತಮ್ಮ ಸಹಾಯಕರ ಮೂಲಕ ಸಿಐಡಿ ಅಧಿಕಾರಿಗಳಿಗೆ ತಲುಪಿಸಿದ್ದಾರೆ.
6 ಪುಟಗಳ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ
ಶಾಸಕ ಪ್ರಿಯಾಂಕ್ ಖರ್ಗೆ ಸಿಐಡಿ ಅದಿಕಾರಿಗಳು ನೀಡಿದ್ದ ಮೂರೂ ನೋಟಿಸ್‌ಗೂ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 6 ಪುಟಗಳ ಪತ್ರ ಬರೆದಿರುವ ಪ್ರಿಯಾಂಕ್, ನಿನ್ನೆ ಸಂಜೆ ತಮ್ಮ ಆಪ್ತ ಸಹಾಯಕನ ಮೂಲಕ ಕಳುಹಿಸಿದ್ದಾರೆ. ತಮ್ಮ ವಕೀಲರ ಜೊತೆ ಸಮಾಲೋಚನೆ ನಡೆಸಿ ಸಿಐಡಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಜವಾಬ್ದಾರಿಯುತ ನಾಗರಿಕ ಹಾಗೂ ಶಾಸಕ, ಅಲ್ಲದೇ ವಿಧಾನ ಸಭೆ ವಿರೋಧ ಪಕ್ಷದ ಹಿರಿಯ ನಾಯಕನಾಗಿ ತನಿಖೆಗೆ ಸಹಕಾರ ನೀಡುತ್ತೇನೆ ಅಂತ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ. ತಮ್ಮ ಪತ್ರದಲ್ಲಿ ಕೆಲವು ಮಾಧ್ಯಮಗಳ ವರದಿ, ಸಚಿವರ ಹೇಳಿಕೆಗಳನ್ನೂ ಉಲ್ಲೇಖಿಸಿದ್ದಾರೆ.
“ನಾನೇ ಖುದ್ದು ವಿಚಾರಣೆಗೆ ಬರಬೇಕಿಲ್ಲ”
ಇನ್ನು ‘ಉದ್ದೇಶಪೂರ್ವಕವಾಗಿ ನನ್ನ ಬಾಯಿ ಮುಚ್ಚಿಸಲು ಇದೇ ರೀತಿ ನೋಟಿಸ್‌ ನೀಡುತ್ತಿದ್ದರೆ ನೀವು ಬಹಳ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಅರಿಯಿರಿ. ನಿಮಗಿಂತಲೂ ಹೆಚ್ಚು ಕಾನೂನು ಜ್ಞಾನ ನನಗೂ ಇದೆ. ಈ ನೋಟಿಸ್‌ಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕು ಚ್ಯುತಿ ಮಂಡನೆ, ವಿಜ್ಹಲ್‌ಬ್ಲೊಯ​ರ್‍ಸ್ ಪ್ರೊಟೆಕ್ಷನ್‌ ಆಯಕ್ಟ್ ಸೇರಿದಂತೆ ನನಗಿರುವ ಕಾನೂನು ಆಯ್ಕೆಗಳನ್ನೂ ಬಳಸಬೇಕಾಗುತ್ತದೆ’ ಎಂದು ಸಿಐಡಿಗೆ ಎಚ್ಚರಿಕೆ ನೀಡಿದ್ದರು. 

ಸಿಐಡಿಗೆ ಪ್ರಿಯಾಂಕ್‌ ಖರ್ಗೆ ಬರೆದಿರುವ ಲಿಖಿತ ರೂಪದ ಉತ್ತರ

ಮತ್ತೊಂದು ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ಶಂಕೆ
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ವಿಚಾರಗಳು ಹೊರಕ್ಕೆ ಬರುತ್ತಿದೆ. ಕಲಬುರಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಬಂಧಿತನಾಗಿರುವ KSRP ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನವನು. ಈತನ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಕಿಂಗ್ ಪಿನ್‌ ಜೊತೆ ವೈಜನಾಥ್ ಡೀಲ್?
ಈ ವೈಜನಾಥ್ ಕಲಬುರಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪರೀಕ್ಷಾ ಕೇಂದ್ರದ ಉಸ್ತುವಾರಿಯಾಗಿದ್ದ. ಪರೀಕ್ಷೆ ಮುಗಿದ ನಂತರ ಮೇಲ್ವಿಚಾರಕರಿಂದ OMR ಶೀಟ್ ಪಡೆಯುವ ಜವಾಬ್ದಾರಿ ಹೊಂದಿದ್ದ ವೈಜನಾಥ ರೇವೂರ, ಪರೀಕ್ಷೆ ಮುಗಿದ ನಂತರದ 30 ನಿಮಿಷಗಳ ನಂತರ OMR ಶೀಟ್ ಕಲೆಕ್ಟ ಮಾಡಿದ್ದ. ಮೇಲ್ವಿಚಾರಕರೇ ಅಭ್ಯರ್ಥಿಗಳ ಉತ್ತರ ಬರೆಯಲು 30 ನಿಮಿಷ ಕಾಲಾವಕಾಶ ನೀಡಿದ್ದ ಆರೋಪವಿದ್ದು, ಈ ಕೆಲಸಕ್ಕಾಗಿ ಈತ ಕಿಂಗ್ ಪಿನ್ ಆರ್.ಡಿ ಪಾಟೀಲ್ ಜೊತೆಗೆ ಡೀಲ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿನ ಬೆಳಪುವಿನ ಉರುಸ್‌ನಲ್ಲಿ ಸರ್ವಧರ್ಮೀಯ ವ್ಯಾಪಾರಿಗಳಿಗೆ ಅವಕಾಶ!

Sat May 7 , 2022
ಪಡುಬಿದ್ರಿ: ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಅನ್ಯಧರ್ಮೀಯ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂಬ ಅಭಿಯಾನದ ಮಧ್ಯೆ ಇಲ್ಲಿನ ಬೆಳಪುವಿನ ಉರುಸ್‌ನಲ್ಲಿ ಸರ್ವಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಲು ದರ್ಗಾ ಸಮಿತಿ ನಿರ್ಣಯ ಕೈಗೊಂಡಿದೆ. ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಸೂಫಿ ಅಬ್ದುಲ್ ರೆಹಮಾನ್ ಶಾ ಬಾಬಾ ದರ್ಗಾ ಉರುಸ್ ಮೇ 7ರಂದು ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸಹಸ್ರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಬಗ್ಗೆ ದರ್ಗಾ ಸಮಿತಿಯು […]

Advertisement

Wordpress Social Share Plugin powered by Ultimatelysocial