ಎರಡು ತಿಂಗಳಿನ ಇಳಿಕೆಯ ಬಳಿಕ ಭಾರತದ ಚಿಲ್ಲರೆ ಹಣದುಬ್ಬರ (Retail Inflation) ಜನವರಿಯಲ್ಲಿ 6.52%ಕ್ಕೆ ಏರಿಕೆ

 

 

ವ ದೆಹಲಿ: ಎರಡು ತಿಂಗಳಿನ ಇಳಿಕೆಯ ಬಳಿಕ ಭಾರತದ ಚಿಲ್ಲರೆ ಹಣದುಬ್ಬರ  ಜನವರಿಯಲ್ಲಿ 6.52%ಕ್ಕೆ ಏರಿಕೆಯಾಗಿದೆ. ಅಂಕಿ ಅಂಶಗಳ ಸಚಿವಾಲಯ ಸೋಮವಾರ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿತ್ತು.

ಕಳೆದ ವರ್ಷದ ಪ್ರತಿಕೂಲಾತ್ಮಕ ಬೇಸ್‌ ಎಫೆಕ್ಟ್‌ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಿದ್ದರೂ ಕಳೆದ ವರ್ಷ ಡಿಸೆಂಬರ್‌ಗೆ ಹೋಲಿಸಿದರೆ (5.72%) ಗಣನೀಯ ಏರಿಕೆಯಾಗಿದೆ.

ಆಹಾರ ದರದಲ್ಲಿ ಏರಿಕೆಯಾಗಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಯಿತು. ಗ್ರಾಹಕ ದರ ಸೂಚ್ಯಂಕದಲ್ಲಿ (consumer price index) 40% ಪಾಲನ್ನು ಆಹಾರ ಹಣದುಬ್ಬರ ಹೊಂದಿದೆ. ಆರ್‌ಬಿಐ ಪ್ರಕಾರ ಹಣದುಬ್ಬರ 2%-6% ಶ್ರೇಣಿಯಲ್ಲಿ ಇರಬೇಕು. ಕಳೆದ ವಾರ ಆರ್‌ಬಿಐ ರೆಪೊ ದರವನ್ನು ಏರಿಸಿತ್ತು.

ತರಕಾರಿಗಳ ಹಣದುಬ್ಬರ ಜನವರಿಯಲ್ಲಿ 11.70%ಕ್ಕೆ ತಗ್ಗಿದೆ. ಡಿಸೆಂಬರ್‌ನಲ್ಲಿ ಇದು 15.08% ಇತ್ತು. ಇಂಧನ ಹಣದುಬ್ಬರ 10.84% ಇತ್ತು. ಡಿಸೆಂಬರ್‌ನಲ್ಲಿ ಇದು 10.97% ಇತ್ತು. ವಿಶ್ವಾದ್ಯಂತ ಸೆಂಟ್ರಲ್‌ ಬ್ಯಾಂಕ್‌ಗಳಿಗೆ ಅಧಿಕ ಹಣದುಬ್ಬರದ ಸವಾಲು ಕಾಡುತ್ತಿದೆ. ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಅನಿಶ್ಚಿತತೆ ಕಾಡುತ್ತಿದೆ. ಪೂರೈಕೆಯ ಕಡೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಆಘಾತದ ಬಳಿಕ ಆರ್ಥಿಕತೆ ಕ್ರಮೇಣ ಚೇತರಿಸುತ್ತಿದೆ. ಆರ್‌ಬಿಐ ಕಳೆದ ವರ್ಷ ಮೇ ಬಳಿಕ ಅಲ್ಪಾವಧಿಯ ಸಾಲಗಳ ಬಡ್ಡಿ ದರದಲ್ಲಿ 2.25% ಏರಿಕೆ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Zomato: 225 ನಗರಗಳಲ್ಲಿ ಸೇವೆ ಸ್ಥಗಿತಗೊಳಿಸಿದ ಜೊಮ್ಯಾಟೊ, 800 ಮಂದಿಯ ನೇಮಕಾತಿ ಎಂದ ಸಿಇಒ!

Tue Feb 14 , 2023
  ಹಲವಾರು ಸಂಸ್ಥೆಗಳು ನಷ್ಟವನ್ನು ಕಂಡಿದೆ. ಇದಕ್ಕಾಗಿ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಜೊಮ್ಯಾಟೊದಲ್ಲಿ ಹಣಕಾಸು ವರದಿಯು ಸಂಸ್ಥೆಯು ಭಾರೀ ನಷ್ಟ ಉಂಟಾಗಿದೆ ಎಂದು ತಿಳಿಸಿದೆ. ಇದರ ನಡುವೆ ಸಂಸ್ಥೆಯು 225 ಸಣ್ಣ ನಗರಗಳಿಗೆ ಜೊಮ್ಯಾಟೊ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ನಗರಗಳಲ್ಲಿ ಹೆಚ್ಚಿನ ವಹಿವಾಟು ಇಲ್ಲ ಎಂದು ಹೇಳಿದೆ. ಡಿಸೆಂಬರ್‌ನಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಜೊಮ್ಯಾಟೊ ನಷ್ಟವನ್ನು ಕಂಡಿದೆ. 346.6 ಕೋಟಿ ರೂಪಾಯಿ ಆಗಿದೆ. ಆಹಾರ ವಿತರಣೆ ವಹಿವಾಟಿನಲ್ಲಿ ನಷ್ಟ […]

Advertisement

Wordpress Social Share Plugin powered by Ultimatelysocial